ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 248 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೊಂಕಿತರ ಸಂಖ್ಯೆ 11.842 ಕ್ಕೆ ಏರಿಕೆಯಾಗಿದೆ.
ಇಂದು 299 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 8.783 ಜನ ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಇಂದು 5 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 212ಕ್ಕೆ ಏರಿಕೆಯಾಗಿದೆ.
ಸದ್ಯ ಜಿಲ್ಲೆಯಲ್ಲಿ 2,289 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 222 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ 153 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 287 ಜನ, ಮನೆಯಲ್ಲಿ 1,391 ಜನ ಐಸೋಲೇಷನ್ನಲ್ಲಿದ್ದಾರೆ. ಆಯುರ್ವೇದ ಕಾಲೇಜಿನಲ್ಲಿ 236 ಜನ, ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆ 5.294 ಏರಿಕೆ ಆಗಿದೆ. ಇದರಲ್ಲಿ 1.991 ಜೋನ್ ವಿಸ್ತರಣೆಯಾಗಿದೆ.
ತಾಲೂಕುವಾರು ಸೋಂಕಿತರ ಸಂಖ್ಯೆ:
ಶಿವಮೊಗ್ಗ-212
ಭದ್ರಾವತಿ-48
ಶಿಕಾರಿಪುರ-56
ತೀರ್ಥಹಳ್ಳಿ-25
ಸೊರಬ-20
ಸಾಗರ-30
ಹೊಸನಗರ-05
ಬೇರೆ ಜಿಲ್ಲೆಯಿಂದ ಒಬ್ಬ ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 1,493 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1375 ಜನರ ವರದಿ ಬಂದಿದೆ.