ಶಿವಮೊಗ್ಗ: ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮತದಾರರನ್ನು ಓಲೈಸಲು ಅಭ್ಯರ್ಥಿಗಳು ಯಾವ ವಿಧಾನಸಭೆ, ಲೋಕಸಭೆ ಚುನಾವಣೆಗೂ ಕಡಿಮೆಯಿಲ್ಲದಂತೆ ಕಸರತ್ತಿನಲ್ಲಿ ತೊಡಗಿದ್ದಾರೆ.
ಶಿವಮೊಗ್ಗ ತಾಲೂಕು ಬಿದರೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚಲು ಶೇಖರಿಸಿಟ್ಟಿದ್ದ 200 ಕುಕ್ಕರ್ಗಳನ್ನು ಮಾದರಿ ಚುನಾವಣಾ ನೀತಿ ಸಂಹಿತೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮತದಾರರ ಮನೆ ಎದುರು ಮಂತ್ರಿಸಿದ ಅಕ್ಕಿ, ಕುಂಕುಮ: ಗ್ರಾಮಸ್ಥರ ಆಕ್ರೋಶ
ತೋಟದ ಮನೆಯಲ್ಲಿ ಕುಕ್ಕರ್ ತಂದಿಟ್ಟಿದ್ದು, ಇಂದು ರಾತ್ರಿ ಮತದಾರರಿಗೆ ಹಂಚಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಈ ನಡುವೆ ಎಂಸಿಸಿಯ ಅಧಿಕಾರಿಗಳಾದ ತಾಪಂ ಇಒ ಡಾ. ಕಲ್ಲಪ್ಪ, ಸಿಡಿಪಿಒ ಚಂದ್ರ ನೇತೃತ್ವದ ತಂಡ ದಾಳಿ ನಡೆಸಿ, ಕುಕ್ಕರ್ ವಶಪಡಿಸಿಕೊಂಡಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.