ಶಿವಮೊಗ್ಗ: ಕೊರಟಗೆರೆ ಶಾಸಕ, ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್ ಸಾಗರದ ವರದಮೂಲದಲ್ಲಿ ಹೋಮ- ಹವನ ನಡೆಸಿದರು. ಇಲ್ಲಿನ ಶ್ರೀಧರ ಆಶ್ರಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಅವರು ಹೋಮ ಹಾಗೂ ಪೂಜೆ ಕಾರ್ಯಕ್ರಮ ನೆರವೇರಿಸಿದ್ದಾರೆ.
ಬೆಂಗಳೂರಿನಿಂದ ಪುರೋಹಿತರನ್ನು ಕರೆತಂದು ಹೋಮದ ವಿಧಿವಿಧಾನ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರಿಗೂ ಜಿ.ಪರಮೇಶ್ವರ್ ಆಗಮಿಸಿದ ವಿಷಯ ತಿಳಿಯದಿರುವುದು ವಿಶೇಷವಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ದಿನದಂದು ಮಾತನಾಡಿದ್ದ ಜಿ.ಪರಮೇಶ್ವರ್, ಜನಪ್ರತಿನಿಧಿಯಾದ್ರೂ ಸಹ ನನ್ನನ್ನು ದೇವಾಲಯಗಳ ಒಳಗೆ ಬಿಡಲ್ಲ. ದೇವಾಲಯಗಳ ಒಳಗೆ ಹೋಗುವ ಮುನ್ನವೇ ಆರತಿ ತಟ್ಟೆಯನ್ನು ದೇಗುಲದ ಹೊರಗೆ ತರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.