ಶಿವಮೊಗ್ಗ: ಬಿಜೆಪಿ ಸರ್ಕಾರ ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಬೇಸ್ ಲೆಸ್ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆಕ್ರೋಶ ಹೊರ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈ ಕುರಿತು ಸಾಕ್ಷ್ಯದಾರಗಳಿದ್ದೆ ನೀಡಿ ಎಂದು ಸಿಎಂ ಹೇಳಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಹಾಗೆ ಕಾಂಗ್ರೆಸ್ ಹತಾಶೆಗೆ ಒಳಗಾಗಿದೆ, ಕಾಂಗ್ರೆಸ್ ಮತ್ತು ಜನರು ಬೇರೆ ಬೇರೆ ಆಗುತ್ತಿದ್ದಾರೆ ಎಂದರು.
ಮತದಾರರ ಪಟ್ಟಿಯ ಕುರಿತು ಮಾತನಾಡಿದ ಅವರು, ಈಗ ಪ್ರತಿಯೊಬ್ಬರಿಗೂ ಪ್ರತಿಯೊಂದರ ಡಾಟ ಸಿಗುತ್ತಿದೆ, ಇದರಲ್ಲಿ ಯಾವ ಗೌಪ್ಯತೆ ಉಳಿದುಕೊಂಡಿಲ್ಲ. ಈಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಓಪನ್ ಆಗಿ ಎಲ್ಲರಿಗೂ ಹೇಳಿಯಾಗಿದೆ. ನಾವು ಕೂಡಾ ಮತದಾರರ ಪಟ್ಟಿಯಲ್ಲಿ ಯಾರಿದ್ದಾರೆ, ಯಾರಿಲ್ಲ ಎಂಬ ಬಗ್ಗೆ ಸೇರಿಸುವ ಕೆಲಸ ಮಾಡುತ್ತಿದ್ದೇವೆ. ಜೊತೆಗೆ ಬೇಸ್ ಲೆಸ್ ಆಗಿ ಮಾತನಾಡುವುದು ಕಾಂಗ್ರೆಸ್ಗೆ ಪ್ರಚಾರವಾಗಿ ಬಿಟ್ಟಿದೆ ಚುನಾವಣಾ ದೃಷ್ಟಿಯಿಂದ ಪ್ರಚಾರ ಪಡೆಯಲು ಕಾಂಗ್ರೆಸ್ನವರು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ನಾವಿನ್ನೂ ಜೀವಂತವಾಗಿದ್ದೇವೆ ಎಂದು ತೋರಿಸಲು ಹೊರಟಿದ್ದಾರೆ ಎಂದರು.
ನಿಲ್ಲಲು ಎಲ್ಲಿ ನೆಲೆ ಇಲ್ಲವಲ್ಲ: ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಅವರ ಬಗ್ಗೆ ಏನೂ ಹೇಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಆದರೆ, ಸಿಎಂ ಆಗಿ, ಈಗ ವಿಪಕ್ಷ ನಾಯಕರಾದವರು ನಿಲ್ಲಲು ಎಲ್ಲಿ ನೆಲೆ ಇಲ್ಲವಲ್ಲ ಎಂಬುದು ವಿಷಾದನೀಯ ಸಂಗತಿ ಎಂದರು. ಹಾಗೆ ಮಾತನಾಡಿದ ಅವರು, ರೇಣುಕಾಚಾರ್ಯ ಪುತ್ರ ಚಂದ್ರು ಸಾವಿನ ತನಿಖೆ ಕುರಿತು ಎಫ್ಎಸ್ಎಲ್ ವರದಿ ಬರಬೇಕಿದೆ. ಪ್ರಕರಣದ ಕುರಿತು ಅನಾಲಿಸಿಸ್ ಮಾಡ್ತಾ ಇದ್ದಾರೆ, ವರದಿ ಬಂದ ಬಳಿಕ ನೋಡೋಣ ಎಂದರು.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ಕೆಜಿಎಫ್ ಸೇಡಿನ, ಕಾಂತಾರದ ಪಂಜುರ್ಲಿಯ ಕಥೆಯಲ್ಲ: ಸಿದ್ದರಾಮಯ್ಯ ಟ್ವೀಟ್