ETV Bharat / state

ಶಿವಮೊಗ್ಗ ಗಲಭೆ ಪ್ರಕರಣ: ಹಿಂದೂ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

ಕಳೆದ ತಿಂಗಳು ಶಿವಮೊಗ್ಗ ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಹಾಗೂ ಅಹಿತಕರ ಘಟನೆ ಸಂಬಂಧ ಪೊಲೀಸರು ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳು ನಗರದ ಕೋಟೆ ಠಾಣೆ ಹಾಗೂ ದೊಡ್ಡಪೇಟೆ ಪೊಲೀಸ್​ ಠಾಣೆ ಎದುರು ಪ್ರತಿಭಟನೆ ನಡೆಸಿವೆ.

Hindu, Muslim organization Staged Protest
ಹಿಂದೂ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ
author img

By

Published : Jan 6, 2021, 4:21 PM IST

Updated : Jan 6, 2021, 4:44 PM IST

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ನಾಗೇಶ್​​ ಮೇಲೆ ಹಲ್ಲೆ ಹಾಗೂ ನಂತರ ನಡೆದ ಗಲಭೆ ಸಂಬಂಧ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಕೋಟೆ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ಗಲಭೆಯಲ್ಲಿ ಏನೂ ಕೃತ್ಯ ಎಸಗದ ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದೊಡ್ಡಪೇಟೆ ಪೊಲೀಸ್​ ಠಾಣೆ ಎದುರು ಮುಸ್ಲಿಂ ಸಂಘಟನೆ ಪ್ರತಿಭಟಿಸುತ್ತಿದೆ.

ಹಿಂದೂ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

ಡಿಸೆಂಬರ್​ 3ರಂದು ಬಜರಂಗದಳ ಕಾರ್ಯಕರ್ತ ನಾಗೇಶ್​​ ಮೇಲೆ ಹಲ್ಲೆ ನಡೆದಿದ್ದು, ತದನಂತರ ಎರಡು ಕೋಮಿನ ನಡುವೆ ಶಿವಮೊಗ್ಗದಲ್ಲಿ ಗಲಭೆ ಉಂಟಾಗಿತ್ತು. ಈ ಸಂಬಂಧ ಶಿಮೊಗ್ಗ ಪೊಲೀಸರು, ಘಟನೆಗೆ ಸಂಬಂಧಪಟ್ಟಂತೆ ಎರಡೂ ಕೋಮಿಗೆ ಸೇರಿರುವ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಹಿಂದೂಪರ ಸಂಘಟನೆಗಳು ಕೋಟೆ ಠಾಣೆ ಮುಂದೆ ಧರಣಿ ನಡೆಸುತ್ತಿದ್ದು, ನಾಗೇಶ್​ ಮೇಲೆ ಹಲ್ಲೆ ಮಾಡಿದವರನ್ನು ಬಿಟ್ಟು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ ಈ ಗಲೆಭೆ ನಡೆದ ದಿನ ನಗರದಲ್ಲಿ ಇಲ್ಲದೇ ಇರುವ ನಮ್ಮ ಸಮುದಾಯದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮುಸ್ಲಿಂ ಸಂಘಟನೆ ನಗರದ ದೊಡ್ಡಪೇಟೆ ಪೊಲೀಸ್​​ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದೆ. ಗಲಭೆ ಸಂಬಂಧ ಬಜರಂಗದಳದ ಸಂಚಾಲಕ ದಿನದಯಾಳ್​ ಅವರನ್ನು ಪೊಲೀಸರು ಬಂಧಿಸಬೇಕು. ಬದಲಾಗಿ ನಮ್ಮ ಸಮುದಾಯದವರನ್ನು ಬಂಧಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Jan 6, 2021, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.