ETV Bharat / state

ಮುಂದಿನ ಎರಡು ವರ್ಷದಲ್ಲಿ ನಿವೇಶನ ರಹಿತ ಎಲ್ಲರಿಗೂ ಮನೆ: ಸಿಎಂ ಬಿಎಸ್​ವೈ - CM BS Yeddyurappa visit to Shivamogga

ಯಾರಿಗೆ ನಿವೇಶನ ಇಲ್ಲವೋ ಅಂತವರು ಹೌಸಿಂಗ್ ಬೋರ್ಡ್ ಅಧಿಕಾರಿಗಳಿಗೆ ಭೇಟಿಯಾಗಿ ನಿವೇಶನ ಪಡೆಯಬೇಕು. ಇನ್ನು ಎರಡು ವರ್ಷದಲ್ಲಿ ನಿವೇಶನ ರಹಿತ ಎಲ್ಲರಿಗೂ ನಿವೇಶನ ನೀಡುವ ಕೆಲಸ ಮಾಡುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

CM BS Yeddyurappa visit to Shivamogga
ಸಿಎಂ ಬಿ.ಎಸ್.ಯಡಿಯೂರಪ್ಪ
author img

By

Published : Jun 13, 2021, 1:10 PM IST

Updated : Jun 13, 2021, 2:32 PM IST

ಶಿವಮೊಗ್ಗ: ಇಡೀ ರಾಜ್ಯದಲ್ಲಿ ಯಾವುದೇ ಒಬ್ಬ ವ್ಯಕ್ತಿ ನಿವೇಶನ ಇಲ್ಲದೇ ಇರಬಾರದು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಇನ್ನು ಎರಡು ವರ್ಷದಲ್ಲಿ ನಿವೇಶನ ರಹಿತ ಎಲ್ಲರಿಗೂ ನಿವೇಶನ ನೀಡುವ ಕೆಲಸ ಮಾಡುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ಬಿಎಸ್​ವೈ

ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ನಿವೇಶನ ಇಲ್ಲವೋ ಅಂತವರು ಹೌಸಿಂಗ್ ಬೋರ್ಡ್ ಅಧಿಕಾರಿಗಳಿಗೆ ಭೇಟಿಯಾಗಿ ನಿವೇಶನ ಪಡೆಯಬೇಕು ಎಂದರು.

ದೇವರ ದಯೆಯಿಂದ ಮಹಾರಾಷ್ಟ್ರದಲ್ಲಿ ಮಳೆ ಬರುತ್ತಿದೆ. ಮಳೆ ನಿನ್ನೆಯಿಂದ ಪ್ರಾರಂಭವಾಗಿದೆ. ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಕಳೆದ ವರ್ಷದಂತೆ ಉತ್ತಮ ಬೆಳೆ ಸಿಗುತ್ತೆ. ಸಕಾಲಕ್ಕೆ ಮಳೆಯಾಗುತ್ತೆ. ಈ ವರ್ಷವೂ ಉತ್ತಮ ಬೆಳೆಯನ್ನು ರೈತರು ಬೆಳೆದು ನೆಮ್ಮದಿಯಿಂದ ಬದುಕುವ ಒಳ್ಳೆಯ ಕಾಲ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದರು.

ಇನ್ನು ಅಕ್ರಮವಾಗಿ ನೆಲೆಸಿರುವವರ ಕುರಿತು ಅಧಿಕಾರಿಗಳೊಂದಿಗೆ ಚರ್ಚೆಯಾಗುತ್ತಿದೆ. ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶಿಗರನ್ನು ಹೊರಗಟ್ಟುಲು ಯಾವ ಪ್ರಯತ್ನ ಮಾಡಬೇಕು ಅದನ್ನ ಮಾಡುತ್ತೇವೆ ಎಂದರು.

Last Updated : Jun 13, 2021, 2:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.