ETV Bharat / state

ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಿದ ಪೊಲೀಸ್ ಅಧಿಕಾರಿ... ವಿಡಿಯೋ ವೈರಲ್

ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡುತ್ತಿರುವ ಸರ್ಕಲ್ ಇನ್ಸ್​​​ಪೆಕ್ಟರ್​​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ವೈರಲ್​​ ಆಗಿದೆ.

author img

By

Published : Jan 24, 2020, 2:23 AM IST

circle-inspector-video-viral
ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಿದ ಪೊಲೀಸ್ ಅಧಿಕಾರಿ

ಶಿವಮೊಗ್ಗ : ಬೈಕ್ ಚಾಲನೆ ವೇಳೆ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡುತ್ತಿರುವ ಸಾಗರ ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್​​​ಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೆಲ ದಿನದ ಹಿಂದೆ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದನು. ಈ ವೇಳೆ ಯುವಕನ ಶವವನ್ನು ಶವಾಗಾರದಿಂದ ಒಯ್ಯಲು ಬಂದಿದ್ದ ಯುವಕರ ಬಳಿ ಸರ್ಕಲ್ ಇನ್ಸ್​​​ಪೆಕ್ಟರ್ ಹೆಲ್ಮೆಟ್ ಬಳಸುವಂತೆ ಮನವಿ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆಲ್ಮೆಟ್ ಬಳಸಿ, ಡಿಎಲ್, ಆರ್​​ಸಿ ಬುಕ್ ಸೇರಿದಂತೆ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹೆಲ್ಮೆಟ್ ಬಳಸಿದಲ್ಲಿ ಅಪಘಾತ ಸಂಭವಿಸಿದರೂ ಮೃತಪಡುವ ಸಾಧ್ಯತೆ ಕಮ್ಮಿ ಇರುತ್ತದೆ. ವಾಹನಗಳ ದಾಖಲೆಗಳು ಸರಿ ಇಲ್ಲದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಆತನ ಕುಟುಂಬ ಬೀದಿಗೆ ಬರುವ ಸಾಧ್ಯತೆಯೇ ಹೆಚ್ಚಿರುತ್ತದೆ. ನೀವು ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚನೆ ಮಾಡಬೇಡಿ. ನಿಮ್ಮ ಕುಟುಂಬದ ಬಗ್ಗೆಯೂ ಯೋಚನೆ ಮಾಡಿ ಎಂದು ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ 18 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತಿ ಬಳಿಕ ಸಬ್​​ ಇನ್ಸ್​​ಪೆಕ್ಟರ್ ಆಗಿ ಕಳೆದ ಕೆಲ ವರ್ಷದ ಹಿಂದೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿರುವ ಮಹಾಬಲೇಶ್ವರ ನಾಯ್ಕ, ಈ ಹಿಂದಿನಿಂದಲೂ ವಾಹನ ಚಾಲನೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇದೀಗ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸರ್ಕಲ್ ಇನ್ಸ್ ಪೆಕ್ಟರ್ ಅವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ನೋಡಿದ ಯುವಕರು ಹೆಲ್ಮೆಟ್ ಖರೀದಿಸುವ ಜೊತೆಗೆ ತಮ್ಮ ವಾಹನದ ದಾಖಲೆಗಳನ್ನೂ ಸರಿ ಮಾಡಿಸಿಕೊಂಡು ಇನ್ಸ್ ಪೆಕ್ಟರ್ ಗೆ ಕರೆ ಮಾಡಿ ತಿಳಿಸುತ್ತಿದ್ದಾರೆ. ತಮ್ಮ ಮಾತುಗಳಿಂದ ಜನ ಪ್ರೇರಣೆಗೊಂಡಿರುವುದಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಹ ಖುಷಿಯಾಗಿದ್ದಾರೆ.

Intro:ಶಿವಮೊಗ್ಗ,
ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಿದ ಪೋಲಿಸ್ ಅಧಿಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬೈಕ್ ಚಾಲನೆ ವೇಳೆ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡುತ್ತಿರುವ ಸಾಗರ ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್. ಮಹಾಬಲೇಶ್ವರ ನಾಯ್ಕ
ಎರಡು ದಿನದ ಹಿಂದೆ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದ.
ಯುವಕನ ಶವವನ್ನು ಶವಾಗಾರದಿಂದ ಒಯ್ಯಲು ಬಂದಿದ್ದ ಯುವಕರ ಬಳಿ ಸರ್ಕಲ್ ಇನ್ಸ್ ಪೆಕ್ಟರ್ ಹೆಲ್ಮೆಟ್ ಬಳಸುವಂತೆ ಮನವಿ ಮಾಡಿ ಅವರು ಹೇಳಿದ ಮಾತುಗಳನ್ನೊಳಗೊಂಡ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆಲ್ಮೆಟ್ ಬಳಸಿ, ಡಿಎಲ್, ಆರ್ ಸಿ ಬುಕ್ ಸೇರಿದಂತೆ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ.
ಹೆಲ್ಮೆಟ್ ಬಳಸಿದಲ್ಲಿ ಅಪಘಾತ ಸಂಭವಿಸಿದರೂ ಮೃತಪಡುವ ಸಾಧ್ಯತೆ ಕಮ್ಮಿ ಇರುತ್ತದೆ.
ವಾಹನಗಳ ದಾಖಲೆಗಳು ಸರಿಯಾಗಿಲ್ಲದಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಆತನ ಕುಟುಂಬ ಬೀದಿಗೆ ಬರುವ ಸಾಧ್ಯತೆಯೇ ಹೆಚ್ಚಿರುತ್ತದೆ.
ನೀವು ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚನೆ ಮಾಡಬೇಡಿ. ನಿಮ್ಮ ಕುಟುಂಬದ ಬಗ್ಗೆಯೂ ಯೋಚನೆ ಮಾಡಿ ಎಂದು ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ಭಾರತೀಯ ಸೇನೆಯಲ್ಲಿ 18 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತಿ ಬಳಿಕ ಸಬ್ ಇನ್ಸ್ ಪೆಕ್ಟರ್ ಆಗಿ ಕಳೆದ ಕೆಲ ವರ್ಷದ ಹಿಂದೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿರುವ ಮಹಾಬಲೇಶ್ವರ ನಾಯ್ಕ.
ಈ ಹಿಂದಿನಿಂದಲೂ ವಾಹನ ಚಾಲನೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ.
ಇದೀಗ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು
ಸರ್ಕಲ್ ಇನ್ಸ್ ಪೆಕ್ಟರ್ ಅವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವೀಡಿಯೋ ನೋಡಿದ ಯುವಕರು ಹೆಲ್ಮೆಟ್ ಖರೀದಿಸುವ ಜೊತೆಗೆ ತಮ್ಮ ವಾಹನದ ದಾಖಲೆಗಳನ್ನೂ ಸರಿ ಮಾಡಿಸಿಕೊಂಡು ಇನ್ಸ್ ಪೆಕ್ಟರ್ ಗೆ ಕರೆ ಮಾಡಿ ತಿಳಿಸುತ್ತಿದ್ದಾರೆ.
ತಮ್ಮ ಮಾತುಗಳಿಂದ ಜನ ಪ್ರೇರಣೆಗೊಂಡಿರುವುದಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಹ ಖುಷಿಯಾಗಿದ್ದಾರೆ.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.