ETV Bharat / state

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಚೆಕ್​ ವಿತರಣೆ

ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟ ಡೇವಿಸ್ ಎಂಬುವರ ಕುಟುಂಬಕ್ಕೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಯ ಅಕಾರಿಗಳು 15 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.

ಚೆಕ್​ ವಿತರಣೆ
author img

By

Published : Oct 18, 2019, 8:00 AM IST

ಶಿವಮೊಗ್ಗ : ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟ ಡೇವಿಸ್ ಎಂಬುವರ ಕುಟುಂಬಕ್ಕೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಯ ಅಕಾರಿಗಳು 15 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.

ನಗರದ ಪ್ರೆಸ್ಟ್‌ಟ್ರಸ್ಟ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಚೆಕ್ ವಿತರಿಸಿ ಮಾತನಾಡಿದ ಓರಿಯಂಟಲ್ ಇನ್ಸುರೆನ್ಸ್ ಕಂಪನಿ ಹಿರಿಯ ವಿಭಾಗೀಯ ಪ್ರಬಂಧಕ ಗಿರೀಶ್ ಜೋಶಿ, ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು ಐಆರ್‌ಡಿಎಯು ಅಡಿ 15 ಲಕ್ಷ ರೂಗೆ ಏರಿಸಲಾಗಿದೆ. ಈ ಕಾನೂನಿನ ಪ್ರಕಾರ ಡೇವಿಸ್ ಅವರ ಕುಟುಂಬಕ್ಕೆ ಪರಿಹಾರ ಹಣ ನೀಡಿದ್ದೇವೆ ಎಂದು ತಿಳಿಸಿದರು.

ಚೆಕ್​ ವಿತರಣೆ

ಈ ಮೊದಲು ಮಾಲೀಕನೊಬ್ಬ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಸಿಲುಕಿ ಮೃತಪಟ್ಟರೆ 1 ಲಕ್ಷ ರೂ. ಪರಿಹಾರ ಸಿಗುತ್ತಿತ್ತು. 3 ಚಕ್ರದ ವಾಹನಕ್ಕಿಂತ ಹೆಚ್ಚಿನದ್ದಾಗಿದ್ದರೆ 2 ಲಕ್ಷ ರೂ.ಮಾತ್ರ ಸಿಗುತ್ತಿತ್ತು. ಈಗ ಆ ಮೊತ್ತವನ್ನು ಅಧಿಕಗೊಳಿಸಲಾಗಿದೆ ಎಂದರು.

ವಾಹನ ಮಾಲೀಕರು ಇನ್ಸುರೆನ್ಸ್ ಕಟ್ಟುವಾಗ ಕಡ್ಡಾಯವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು. ಕೆಲವರು ಪಾಲಿಸಿ ಹಣ ಕಡಿಮೆಯಾಗಲಿ ಎಂದು ಒಂದೇ ವರ್ಷಕ್ಕೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಇದು 5 ವರ್ಷದವರೆಗೆ ರಿಸ್ಕ್ ಇರುತ್ತದೆ. ವರ್ಷದ ನಂತರ ಅಪಘಾತದಲ್ಲಿ ಮೃತಪಟ್ಟರೆ 15 ಲಕ್ಷ ರೂ. ಸಿಗುವುದಿಲ್ಲ. ಹಾಗಾಗಿ ಇನ್ಸುರೆನ್ಸ್ ಮಾಡಿಸುವಾಗ ಸ್ವಲ್ಪ ಹಣ ಹೆಚ್ಚಾದರೂ 5 ವರ್ಷದವರೆಗೆ ಇರುವಂತೆ ಪಾಲಿಸಿ ಮಾಡಿಸಬೇಕು ಎಂದು ಮನವಿ ಮಾಡಿದರು.

Intro:ಶಿವಮೊಗ್ಗ,

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ೧೫ ಲಕ್ಷ ಚೆಕ್ ವಿತರಣೆ

ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟ ಡೇವಿಸ್ ಎಂಬುವರ ಕುಟುಂಬಕ್ಕೆ ಓರಿಯಂಟಲ್ ಇನ್ಸುರೆನ್ಸ್ ಕಂಪೆನಿಯ ಅಕಾರಿಗಳು ೧೫ ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.
ನಗರದ ಪ್ರೆಸ್ಟ್‌ಟ್ರಸ್ಟ್ ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಚೆಕ್ ವಿತರಿಸಿ ಮಾತನಾಡಿದ ಓರಿಯಂಟಲ್ ಇನ್ಸುರೆನ್ಸ್ ಕಂಪೆನಿ ಹಿರಿಯ ವಿಭಾಗೀಯ ಪ್ರಬಂಧಕ ಗಿರೀಶ್ ಎಚ್.ಜೋಷಿ, ಈ ಹಿಂದೆ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು ಕಳೆದ ವರ್ಷ ಐಆರ್‌ಡಿಎಯು ೧೫ ಲಕ್ಷಕ್ಕೆ ಏರಿಸಿದೆ. ಈ ಕಾನೂನಿನ ಪ್ರಕಾರ ಡೇವಿಸ್ ಅವರ ಕುಟುಂಬಕ್ಕೆ ಈ ಮೊತ್ತವನ್ನು ನೀಡಿಲಾಗುತ್ತಿದೆ ಎಂದರು.
ಈ ಮೊದಲು ಮಾಲೀಕನೊಬ್ಬ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಸಿಲುಕಿ ಮೃತಪಟ್ಟರೆ ೧ ಲಕ್ಷ ರೂ.ಸಿಗುತ್ತಿತ್ತು. ೩ ಚಕ್ರದ ವಾಹನಕ್ಕಿಂತ ಹೆಚ್ಚಿನದಾಗಿದ್ದರೆ ೨ ಲಕ್ಷ ರೂ.ಮಾತ್ರ ಸಿಗುತ್ತಿತ್ತು. ಈಗ ಆ ಮೊತ್ತವನ್ನು ಹೆಚ್ಚಳ ಮಾಡಿದ್ದು ಇದರಿಂದ ಮೃತ ಕುಟುಂಬದವರಿಗೆ ತುಸು ನೆಮ್ಮದಿ ಸಿಗುತ್ತದೆ ಎಂದರು.
ವಾಹನ ಮಾಲೀಕರು ಇನ್ಸುರೆನ್ಸ್ ಕಟ್ಟುವಾಗ ಕಡ್ಡಾಯವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು. ಕೆಲವರು ಪಾಲಿಸಿ ಹಣ ಕಡಿಮೆಯಾಗಲೀ ಎಂದು ಒಂದೇ ವರ್ಷಕ್ಕೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಇದು ೫ ವರ್ಷದವರೆಗೆ ರಿಸ್ಕ್ ಇರುತ್ತದೆ. ಇದು ಗೊತ್ತಾಗುವುದಿಲ್ಲ. ವರ್ಷದ ನಂತರ ಅಪಘಾತದಲ್ಲಿ ಮೃತಪಟ್ಟರೆ ೧೫ ಲಕ್ಷ ರೂ. ಸಿಗುವುದಿಲ್ಲ.ಹಾಗಾಗಿ ಇನ್ಸುರೆನ್ಸ್ ಮಾಡಿಸುವಾಗ ಸ್ವಲ್ಪ ಹಣ ಹೆಚ್ಚಾದರೂ ೫ ವರ್ಷದವರೆಗೆ ಇರುವಂತೆ ಪಾಲಿಸಿ ಮಾಡಿಸಬೇಕು ಮನವಿ ಮಾಡಿದರು.
ಗೋಷ್ಠಿಯಲ್ಲಿ ದಿ.ಡೇವಿಸ್ ಅವರ ಪತ್ನಿ ಶರೀಮತಿ ರೋಸಿ, ಪುತ್ರ ಬೆನ್ನಿಜಾಕೋಬ್, ಕಂಪೆನಿಯ ಪ್ರಬಂಧಕ ಎಸ್.ವಿ.ಸುರೇಶ್, ಜಿ.ಎಸ್.ಓಂಕಾರ್ ಮತ್ತಿತರರು ಇದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.