ಶಿವಮೊಗ್ಗ: ಫೋನ್ ಕದ್ದಾಲಿಕೆ ವಿಚಾರವನ್ನು ಸಿಬಿಐಗೆ ವಹಿಸಿರುವುದರಿಂದ ಕದ್ದಾಲಿಕೆಯನ್ನು ಯಾರು ಮಾಡಿದ್ದಾರೆ. ಜೆಡಿಎಸ್ನವರು ಮಾಡಿದ್ರಾ ಅಥವಾ ಕಾಂಗ್ರೆಸ್ನವರು ಮಾಡಿದ್ರಾ ಅನ್ನೋದು ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದು ಮೂಲಕ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರಿಂದ ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ನಾನು ಈಗ ಹೇಳುವುದು ಸರಿಯಲ್ಲ ಎಂದರು.
ಇನ್ನೂ ಸಚಿವ ಸಂಪುಟ ವಿಸ್ತರಣೆಯಲ್ಲಿ ನಿಮಗೆ ಯಾವ ಸಚಿವ ಸ್ಥಾನ ಸಿಗುತ್ತೆ ಎಂಬ ಪ್ರಶ್ನೆಗೆ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಸಚಿವ ಸ್ಥಾನ ನಿರ್ವಹಿಸು ಅಂತ ಹೇಳಿದ್ರೆ ಮಾಡ್ತಿನಿ. ಇಲ್ಲವೇ ಪಕ್ಷ ಸಂಘಟನೆ ಮಾಡು ಅಂತಾ ಹೇಳಿದ್ರು ನಿರ್ವಹಿಸುತ್ತೇನೆ ಅಂದ್ರು.
ಹಾಗೆಯೇ ನಾಡಿದ್ದು ಸಚಿವ ಮಂಡಲ ವಿಸ್ತರಣೆ ಆಗಲಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ತಮ್ಮ ಪತ್ನಿ ಜಯಲಕ್ಷ್ಮಿ ಜೊತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರದಂತೆ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.