ಶಿವಮೊಗ್ಗ: ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರಂತವೊಂದು ಸಂಭವಿಸಿದೆ. ಕಾರಿನಲ್ಲಿದ್ದ ಬ್ಯಾಂಕ್ ನೌಕರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಚೋರಡಿ ಬಳಿ ನಡೆದಿದೆ.
ಚಿಕ್ಕಮರಸ ಗ್ರಾಮದ ದಿನೇಶ್ (28) ಮೃತಪಟ್ಟ ನೌಕರ ಎಂದು ತಿಳಿದುಬಂದಿದೆ. ದಿನೇಶ್ ಮಂಡಗದ್ದೆ ಗ್ರಾಮದ ಕರ್ನಾಟಕ ಬ್ಯಾಂಕ್ನ ಶಾಖೆಯಲ್ಲಿ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಕೋಣೆಹೂಸೂರು ಗ್ರಾಮಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ವಾಪಸಾಗುವಾಗ ಕಾರು ಅಪಘಾತವಾಗಿ, ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.