ETV Bharat / state

ಪಿಕಪ್ ವಾಹನ ಗುದ್ದಿ ಕರು ಸಾವು.. ಕರುಳು ಹಿಂಡುವಂತಿದೆ ತಾಯಿ ಹಸುವಿನ ಮೂಕರೋದನ - ಶಿವಮೊಗ್ಗದ ಹಸು- ಕರು ಸುದ್ದಿ

ಪಟ್ಟಣದ ಚಾಮರಾಜಪೇಟೆ ಬಡಾವಣೆಯಲ್ಲಿ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಐದು ದಿನದ ಕರು ಮೃತಪಟ್ಟಿದೆ. ಹಸು ಮತ್ತು ಕರು ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳೀಯರು ಕರುವನ್ನು ಬದುಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಮೃತ ಕರುವನ್ನು ಎಬ್ಬಿಸಲು ತಾಯಿ ಹಸು ಪ್ರಯತ್ನಿಸುತ್ತಿರುವ ದೃಶ್ಯ ಎಂಥವರ ಹೃದಯವನ್ನೂ ಕಲಕುತ್ತದೆ.

calf death
ಪಿಕಪ್ ವಾಹನ ಡಿಕ್ಕಿಯೊಡೆದು ಕರು ಸಾವು
author img

By

Published : Jun 20, 2021, 3:12 PM IST

ಶಿವಮೊಗ್ಗ: ವಾಹನ ಡಿಕ್ಕಿ ಹೊಡೆದು ನಡುರಸ್ತೆಯಲ್ಲೇ ಕರುವೊಂದು ಪ್ರಾಣ ಬಿಟ್ಟಿದೆ. ತಾಯಿ ಹಸು ಮೃತಪಟ್ಟ ತನ್ನ ಕರುವಿನ ಬಳಿ ನಿಂತು ಕಣ್ಣೀರು ಹಾಕುತ್ತಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸೊರಬ ಪಟ್ಟಣದಲ್ಲಿ ನಡೆದಿದೆ.

ಪಿಕಪ್ ವಾಹನ ಡಿಕ್ಕಿಯಾಗಿ ಕರು ಸಾವು.. ಸ್ಥಳದಲ್ಲಿ ಹಸುವಿನ ಮೂಕರೋದನ

ಪಟ್ಟಣದ ಚಾಮರಾಜಪೇಟೆ ಬಡಾವಣೆಯಲ್ಲಿ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಐದು ದಿನದ ಕರು ಮೃತಪಟ್ಟಿದೆ. ಹಸು ಮತ್ತು ಕರು ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳೀಯರು ಕರುವನ್ನು ಬದುಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಮೃತ ಕರುವನ್ನು ಎಬ್ಬಿಸಲು ಹಸು ಪ್ರಯತ್ನಿಸುತ್ತಿರುವ ದೃಶ್ಯ ಎಂಥವರ ಹೃದಯವನ್ನೂ ಕಲಕುತ್ತದೆ.

ಈ ವೇಳೆ ಅಲ್ಲಿಗೆ ಬಂದ ಇನ್ನೊಂದು ಆಕಳು ಸಹ ಕರುವನ್ನು ಏಳಿಸಲು ಯತ್ನಿಸಿದ್ದು ನೋಡಿದ್ರೆ, ಯಾರಿಗಾದರೂ ಕರುಳು ಚುರುಕ್ ಅನ್ನದೆ ಇರದು. ಕರುವಿನ ಅಂತ್ಯಕ್ರಿಯೆ ಮುಗಿಯುವವರೆಗೂ ತಾಯಿ ಹಸು ಜಾಗ ಬಿಟ್ಟು ಕದಲಲಿಲ್ಲ. ಸ್ಥಳೀಯ ಬಜರಂಗದಳ ಕಾರ್ಯಕರ್ತರು ಕರುವಿನ ಅಂತ್ಯಕ್ರಿಯೆಗೆ ಸಹಕರಿಸಿದರು.

ಇದನ್ನೂ ಓದಿ:ವಿಶ್ವ ಅಪ್ಪಂದಿರ ದಿನದಂದೇ ಹೆತ್ತವರಿಗೆ ಮಗ ಥಳಿಸುತ್ತಿರುವ ವಿಡಿಯೋ ವೈರಲ್​.. ತಾಯಿ ಸಾವು

ಅಪ್ರಾಪ್ತರಿಂದ ವಾಹನ ಚಲಾವಣೆ: ಜಿಲ್ಲೆಯ ಚಾಮರಾಜಪೇಟೆ, ಚಿಕ್ಕಪೇಟೆ ಸೇರಿದಂತೆ ಜನ ವಸತಿ ಪ್ರದೇಶಗಳಲ್ಲಿ ಅಪ್ರಾಪ್ತರು ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಪೋಷಕರು ಸಹ ಬೇಜವಾಬ್ದಾರಿಯಿಂದ ಮಕ್ಕಳಿಗೆ ಲಘುವಾಹನಗಳನ್ನು ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.