ಶಿವಮೊಗ್ಗ:ಲೋಕಸಭಾ ಕ್ಷೇತ್ರದ ಮತದಾರರು ಸಾಕಷ್ಟು ಪ್ರಜ್ಞಾವಂತರಿದ್ದಾರೆ. ಪ್ರಧಾನಮಂತ್ರಿಗಳು ರೈತರು, ಶೋಷಿತರು, ದಮನಿತರಿಗೆ ನೀಡಿದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶವೇ ಕುಟುಂಬ ಅಂತಾ ನೋಡುವ ಮೋದಿ ಒಂದು ಕಡೆಯಾದ್ರೇ, ದೇಶ, ಜನ ಇರುವುದೇ ನಮ್ಮ ಕುಟುಂಬಕ್ಕಾಗಿ ಎಂದು ಹೇಳುವ ಪಕ್ಷಗಳ ವಿರುದ್ಧ ಮತದಾರ ಸರಿಯಾದ ಪಾಠ ಕಲಿಸುತ್ತಾರೆ ಎಂದು ಬಿ.ವೈ.ರಾಘವೇಂದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಶಿವಮೊಗ್ಗ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಸಂಸದ ಬಿ.ವೈ ರಾಘವೇಂದ್ರ ಮನಬಿಚ್ಚಿ ಮಾತನಾಡಿದ್ದಾರೆ.ಬಿ ವೈ ರಾಘವೇಂದ್ರ
ಚುನಾವಣೆಯಲ್ಲಿ ಎಲ್ಲರು ಬಂದು ಶಿವಮೊಗ್ಗ ಕ್ಷೇತ್ರದಲ್ಲೇ ಠಿಕಾಣಿ ಹಾಕುವುದು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಹೊಸತೇನೂ ಅಲ್ಲ. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ಲೋಕಸಭೆಗೆ ಹಾಗೂ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲೂ ಸಹ ಸಿಎಂ ಆದಿಯಾಗಿ ಮಂತ್ರಿ ಮಂಡಲವೇ ಕ್ಷೇತ್ರದಲ್ಲಿ ಠಿಕಾಣಿ ಹಾಕಿತ್ತು. ಇದು ಸಹಜವಾಗಿ ಚುನಾವಣಾ ತಂತ್ರವಾಗಿದೆ. ಈ ಸವಾಲನ್ನು ನಮ್ಮ ಕಾರ್ಯಕರ್ತರು ಸವಾಲಾಗಿ ಸ್ವೀಕಾರ ಮಾಡುತ್ತಾರೆ.
ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಬೂತ್ ಕಾರ್ಯಕರ್ತರು ಅಭ್ಯರ್ಥಿ ಯಾರು ಅಂತಾ ನೋಡದೆ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಕಾರ್ಯಕರ್ತರ ಪರಿಶ್ರಮಕ್ಕೆ ಹಾಗೂ ಅವರ ಬೆವರಿಗೆ ಮತದಾರ ಸರಿಯಾದ ಬೆಲೆ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೂತ್ ಮಟ್ಟದ ಕಾರ್ಯಕರ್ತರ ಶ್ರಮದಿಂದ 2004ಕ್ಕೂ ಹೆಚ್ಚು ಬೂತ್ನಲ್ಲೂ ಲೀಡ್ ತೆಗೆದುಕೊಳ್ಳುತ್ತೇನೆ. ಗೆಲುವಿನ ಅಂತರವನ್ನು ಈಗಲೇ ಹೇಳಲಾರೆ. ನಾಮಪತ್ರವನ್ನು ಮಾರ್ಚ್ 28 ರಂದು ಸಲ್ಲಿಸಲಾಗುವುದು. ಅಂದು ರಾಮಣ್ಣ ಪಾರ್ಕ್ನಿಂದ ಮೆರವಣಿಗೆ ಹೊರಟು ಡಿಸಿ ಕಚೇರಿಗೆ ತೆರಳಲಾಗುವುದು. ನಂತರ ಎನ್ಇಎನ್ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದರು.
ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈಗಾಗಲೇ ಶಕ್ತಿ ಕೇಂದ್ರಗಳ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಇನ್ನೂ ಸ್ಪೀಡ್ ಅಪ್ ಮಾಡಬೇಕಿದೆ ಎಂದರು.