ETV Bharat / entertainment

ಶಿಶಿರ್ ನಂಬಿಕೆಗೆ ದ್ರೋಹ, ಬಿಗ್​ ಬಾಸ್​ ಪ್ರಮುಖ ನಿಮಯ ಉಲ್ಲಂಘನೆ​​: ಚೈತ್ರಾ ಕುಂದಾಪುರಗೆ ಕಾದಿದೆಯಾ ಕಿಚ್ಚನ ಕ್ಲಾಸ್​ - BIGG BOSS KANNADA

ಇಂದು ರಾತ್ರಿ 9ಕ್ಕೆ ಪ್ರಸಾರ ಆಗಲಿರುವ ಕಿಚ್ಚನ ಎಪಿಸೋಡ್​ ನೋಡಲು ಸಾಕಷ್ಟು ಮಂದಿ ಕಾತರರಾಗಿದ್ದಾರೆ.

chaitra
ಚೈತ್ರಾ ಕುಂದಾಪುರ (Photo: Bigg Boss Team)
author img

By ETV Bharat Entertainment Team

Published : Nov 16, 2024, 5:58 PM IST

ಕಿರುತೆರೆ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಕನ್ನಡ ಸೀಸನ್​​ 11'ರ ಏಳನೇ ವಾರಾಂತ್ಯದ ಕಿಚ್ಚನ ಪಂಚಾಯ್ತಿಗೆ ಕ್ಷಣಗಣನೆ ಆರಂಭವಾಗಿದೆ. ಸುದೀಪ್​​ ನಿರೂಪಣೆಯಲ್ಲಿ ಮೂಡಿಬರುವ ಶನಿವಾರ ಮತ್ತು ಭಾನುವಾರದ ಸಂಚಿಕೆಗಳಿಗೆ ದೊಡ್ಡ ಮಟ್ಟದ ಫ್ಯಾನ್​ ಬೇಸ್​ ಇದೆ. ಇಂದು ರಾತ್ರಿ 9ಕ್ಕೆ ಪ್ರಸಾರ ಆಗಲಿರುವ ಕಿಚ್ಚನ ಎಪಿಸೋಡ್​ ನೋಡಲು ಸಾಕಷ್ಟು ಮಂದಿ ಕಾತರರಾಗಿದ್ದಾರೆ.

ಕಳೆದ ವಾರ ಅಂದರೆ ಆರನೇ ವಾರದ ಎಲಿಮಿನೇಷನ್​ ನಡೆದಿಲ್ಲ. ಭವ್ಯಾ ಹೆಸರು ಕೇಳಿ ಬಂತಾದರೂ, ಕೊನೆಕ್ಷಣದಲ್ಲಿ ಎಲಿಮಿನೇಷನ್​​ ಹೊಡೆತದಿಂದ ಪಾರಾಗಿದ್ದಾರೆ. ಎಲಿಮಿನೇಷನ್​​ನಿಂದ ಭವ್ಯಾ ಬಚಾವ್​ ಆಗಿದ್ದು, ನರಕದಿಂದ ಸ್ವರ್ಗಕ್ಕೆ ಬಂದ ಅನುಭವ ಆಗಿರಬಹುದು. ಆದರೆ ಈ ವಾರ ಮನೆಯಿಂದ ಓರ್ವ ಸ್ಪರ್ಧಿ ಹೊರನಡೆಯೋದು ಬಹುತೇಕ ಪಕ್ಕಾ ಆಗಿದೆ. ಕಿಚ್ಚನ ಎಪಿಸೋಡ್​ನಲ್ಲಿ ಯಾರಿಗೆ ಕ್ಲಾಸ್​ ಸಿಗಲಿದೆ ಅನ್ನೋ ಕುತೂಹಲ ಕೂಡಾ ನೋಡುಗರಲ್ಲಿದೆ.

''ನಂಬಿಕೆಗಳ ಮಹಾ ತರ್ಕ!'' ವಾರದ ಕಥೆ ಕಿಚ್ಚನ ಜೊತೆ. ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಇಲ್ಲಿ ನಂಬಿಕೆ ಅನ್ನೋ ವಿಚಾರ ಹೈಲೆಟ್​ ಆಗಿದೆ. ''ಚಾಲೆಂಜ್​ ಅಂತಾ ಬಂದಾಗ ಬಹಳಾನೇ ಮುಖ್ಯ ಆಗೋದು ನಂಬಿಕೆ. ನಂಬಿಕೆ ಇಟ್ಟು ಸೋತವರಿದ್ದಾರೆ. ನಂಬಿಕೆಗೆ ಮೋಸ ಮಾಡಿದವರೂ ಇದ್ದಾರೆ'' ಎಂಬ ಕಿಚ್ಚನ ಹಿನ್ನೆಲೆ ದನಿ ನೋಡುಗರ ಕುತೂಹಲ ಕೆರಳಿಸಿದೆ. ಪ್ರೋಮೋ ವಿಡಿಯೋದಲ್ಲಿ, ಶಿಶಿರ್​ ಮತ್ತು ಚೈತ್ರಾ ಅವರ ಆಟದ ತುಣುಕುಗಳನ್ನು ಹಾಕಲಾಗಿದ್ದು, ಇಂದು ಚೈತ್ರಾ ಅವರಿಗೇನೇ ಕಿಚ್ಚ ಕ್ಲಾಸ್​ ಕೊಡ್ತಾರೆ ಎಂದು ಬಹುತೇಕರು ನಂಬಿದ್ದಾರೆ.

ಇದನ್ನೂ ಓದಿ: 'ನರಸಿಂಹ' ಸಿನಿಮಾ ಘೋಷಿಸಿದ ಕೆಜಿಎಫ್​ ಮೇಕರ್​ ಹೊಂಬಾಳೆ ಫಿಲ್ಮ್ಸ್: ನಟ ಯಾರು? ಮೋಷನ್​ ಪೋಸ್ಟರ್ ನೋಡಿ

ಅಲ್ಲದೇ, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ವಾಪಸ್​ ಚೈತ್ರಾ ಮನೆಯ ಮುಖ್ಯ ನಿಯಮವನ್ನೇ ಮುರಿದಿದ್ದಾರೆ. ಇದರ ಸುಳಿವನ್ನು ''ಆಸ್ಪತ್ರೆಯಿಂದ ವಾಪಸ್​ ಆದ ಚೈತ್ರಾ ಹೊರಗಿನ ಅಭಿಪ್ರಾಯಗಳನ್ನು ಹೊತ್ತು ತಂದ್ರಾ?'' ಎಂಬ ಕ್ಯಾಪ್ಷನ್​ನೊಂದಿಗೆ ಅನಾವರಣಗೊಂಡಿರುವ ಪ್ರೋಮೋ ಬಿಟ್ಟುಕೊಟ್ಟಿದೆ.

ಸ್ಪರ್ಧಿಗಳಿಗೆ ತೊಂದರೆಯಾದಾಗ ಚಿಕಿತ್ಸೆಗಾಗಿ ಹೊರ ಕರೆದೊಯ್ಯಲಾಗುತ್ತದೆ. ವಾಪಸ್​ ಬಂದ ಬಳಿಕ ಹೊರಗಿನ ವಿಷಯವನ್ನು ಮನೆಯೊಳಗೆ ತರುವಂತಿಲ್ಲ. ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಅನ್ನೋದು ಕೂಡಾ ಮನೆಯ ಪ್ರಮುಖ ನಿಯಮ. ಆದರೆ ಚೈತ್ರಾ ಅವರು ಜೈಲಿನೊಳಗಿರುವ ಧನರಾಜ್​ ಮತ್ತು ಮಂಜು ಬಳಿ ಏನೋ ಹೇಳಿಕೊಂಡಿದ್ದಾರೆ. ಹೊರಗಿನ ಮಾಹಿತಿ ಕೊಡುತ್ತಿರುವಂತೆ ತೋರಿದೆ. ಮೈಕ್ ಸರಿಸಿ ಧನರಾಜ್​ ಬಳಿ ಏನೋ ಹೇಳ ಹೊರಟಿದ್ದಾರೆ. ಆ ಕೂಡಲೇ ಚೈತ್ರಾ ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂದು ಸಿಟ್ಟಿನಲ್ಲೇ ಆದೇಶಿಸಿದ್ದಾರೆ.

ಇದನ್ನೂ ಓದಿ: ಸೂಪರ್​ಸ್ಟಾರ್​ ಧನುಷ್​ ವಿರುದ್ಧ ಲೇಡಿ ಸೂಪರ್​ಸ್ಟಾರ್ ನಯನತಾರಾ ಬಹಿರಂಗ ವಾಗ್ದಾಳಿ

ಈ ಹಿಂದಿನ ಸಂಚಿಕೆಯೊಂದರಲ್ಲಿ ಚೈತ್ರಾ ಅವರನ್ನು ಸುದೀಪ್​​ ತರಾಟೆಗೆ ತೆಗೆದುಕೊಂಡಿದ್ದರು. ಹೆಣ್ಣು ಮಕ್ಕಳ ಪರವಾಗಿ ದನಿ ಎತ್ತುವ ನೀವು ಅದೇ ಹೆಣ್ಣು ಮಕ್ಕಳನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತೀರಿ ಎಂದು ಚೈತ್ರಾ ಅವರ ಬೆವರಿಳಿಸಿದ್ದರು. ಕಿಚ್ಚನ ಪ್ರಶ್ನೆಗಳ ಮಳೆ ಸುರಿಸಿದ್ದು, ಚೈತ್ರಾ ಬಳಿ ಉತ್ತರವೇ ಇರಲಿಲ್ಲ. ಇದೀಗ ಮತ್ತೊಮ್ಮೆ ಚೈತ್ರಾ ಅವರು ಸುದೀಪ್​​ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.