ETV Bharat / state

ಸೈನಿಕರಂತೆ ದೇಶ ಕಾಯಲು ಆಗಲ್ಲ, ಆಟದ ಮೂಲಕ ದೇಶ ಸೇವೆ ಮಾಡಿರುವೆ: ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತೆ ಶಿವಮೊಗ್ಗದ ವೃತ್ತಿ - ಶಿವಮೊಗ್ಗದ ವಿಶೇಷಚೇತನ ವಿದ್ಯಾರ್ಥಿಗಳು

ಈ ಬಾರಿ ಚೀನಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್​ನ ಚೆಸ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ವಿಶೇಷಚೇತನ ವಿದ್ಯಾರ್ಥಿಗಳಿಬ್ಬರು ಕಂಚು ಪದಕ ಪಡೆದುಕೊಂಡಿದ್ದಾರೆ.

blind students
ವಿಶೇಷಚೇತನ ವಿದ್ಯಾರ್ಥಿಗಳು
author img

By ETV Bharat Karnataka Team

Published : Nov 4, 2023, 7:31 AM IST

Updated : Nov 4, 2023, 12:30 PM IST

ಪ್ಯಾರಾ ಏಷ್ಯನ್ ಗೇಮ್ಸ್​ನಲ್ಲಿ ಪದಕ ಗೆದ್ದ ವಿಶೇಷಚೇತನ ವಿದ್ಯಾರ್ಥಿಗಳು

ಶಿವಮೊಗ್ಗ : ದೃಷ್ಟಿದೋಷವುಳ್ಳ ವಿಶೇಷಚೇತನ ವಿದ್ಯಾರ್ಥಿಗಳಿಬ್ಬರು ಚೀನಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್​ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್​ನ ಸಗನ್ ಲಾಲ್ ಜೈನ್ ಮತ್ತು ಮಧು ಜೈನ್ ಅವರ ಪ್ರಥಮ ಪುತ್ರಿ ವೃತ್ತಿ ಜೈನ್ ಅವರು ಮಹಿಳಾ ವಿಭಾಗದಲ್ಲಿ ಹಾಗೂ ಕಿಶನ್ ಗಂಗೂಳ್ಳಿ ಅವರು ಪುರುಷರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಪದಕ ವಿಜೇತ ಮಲೆನಾಡಿನ ಕುಡಿಗಳಾದ ವೃತ್ತಿ ಜೈನ್ ಹಾಗೂ ಕಿಶನ್ ಗಂಗೂಳ್ಳಿ ಅವರನ್ನು ಶಿವಮೊಗ್ಗದ ಜನತೆ ನಿನ್ನೆ ಆತ್ಮೀಯವಾಗಿ ಸ್ವಾಗತ ಮಾಡಿ, ಗಾಂಧಿ ಬಜಾರ್​ನಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಂತರ ಇಬ್ಬರಿಗೂ ಸನ್ಮಾನ ಮಾಡಲಾಯಿತು.

ಅಂಧರ ಚೆಸ್ ಪಂದ್ಯಾವಳಿಯು ಸಾಮಾನ್ಯರ ಚೆಸ್ ಪಂದ್ಯಾವಳಿಗಿಂತ ಭಿನ್ನವಾಗಿರುತ್ತದೆ. ಇವರು ಪ್ರತಿಯೊಂದು ಚೆಸ್ ಕಾಯಿನ್ ಅನ್ನು ಮುಟ್ಟಿ ನೋಡಿ ನಂತರ ಮುಂದೆ ನಡೆಸಬೇಕಿರುತ್ತದೆ. ಪರಿಣಾಮ ಚೆಸ್ ಪಂದ್ಯ ನಡೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇನ್ನು ವೃತ್ತಿ ಜೈನ್ ಅವರು ಶಿವಮೊಗ್ಗದಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ಅಭ್ಯಸಿಸುತ್ತಿದ್ದಾರೆ. ಇವರು ಕಳೆದ ‌6 ವರ್ಷಗಳಿಂದ ಶಿವಮೊಗ್ಗ ನಳಂದ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈಟಿವಿ ಭಾರತದ ಜೊತೆ ಸಂತಸ ಹಂಚಿಕೊಂಡ ವೃತ್ತಿ ಜೈನ್ ಅವರು, "ನಾನು ಪ್ರಥಮ ಬಾರಿಗೆ ವಿದೇಶದಲ್ಲಿ ಭಾಗವಹಿಸಿದ ಪಂದ್ಯಾವಳಿ ಇದಾಗಿದ್ದು, ನನ್ನ ದೇಶಕ್ಕಾಗಿ ಆಟ ಆಡಿರುವುದಕ್ಕೆ ಹೆಮ್ಮೆ ಇದೆ. ಸೈನಿಕರ ರೀತಿ ಗಡಿಯಲ್ಲಿ ಗನ್ ಹಿಡಿದು ನನ್ನ ದೇಶ ಕಾಯಲು ಆಗಲ್ಲ. ಆದರೆ, ನನ್ನ ಆಟದ ಮೂಲಕ ದೇಶ ಸೇವೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಚೀನಾ ದೇಶದಲ್ಲಿ ನಮಗೆ ಒಳ್ಳೆಯ ಸ್ವಾಗತ ಸಿಕ್ಕಿತು. ಜೊತೆಗೆ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮನ್ನು ಕರೆದು ಮಾತನಾಡಿಸಿದ್ದು ಸಂತಸ ತಂದಿದೆ" ಎಂದು ಹೇಳಿದರು.

ವೃತ್ತಿ ಜೈನ್ ಅವರಿಗೆ ತರಬೇತಿ ನೀಡಿದ ನಳಂದ ಚೆಸ್ ಅಕಾಡೆಮಿಯ ಕೃಷ್ಣ ಉಡುಪರವರು ಮಾತನಾಡಿ, "ವೃತ್ತಿ ಅವರು ಉತ್ತಮವಾಗಿ ಆಟವಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಮುಂದೆ ದೇಶದ ಪರವಾಗಿ ಆಟವಾಡಿ ಬಂಗಾರದ ಪದಕ ಗಳಿಸುವ ಉದ್ದೇಶ ಹೊಂದಿದ್ದಾರೆ" ಎಂದರು.

ಇದನ್ನೂ ಓದಿ : ಪ್ರಧಾನಿ ಮೋದಿಗೆ ಭರ್ಜರಿ ಉಡುಗೊರೆ ನೀಡಿದ ಚಿಕ್ಕಮಗಳೂರಿನ ಅಂಧ ಕ್ರೀಡಾಪಟು

ಮಗಳ ಸಾಧನೆಯ ಬಗ್ಗೆ ವೃತ್ತಿ ಜೈನ್ ಅವರ ತಂದೆ ಸಗನ್ ಲಾಲ್ ಜೈನ್ ಅವರು ತುಂಬ ಸಂತೋಷಗೊಂಡಿದ್ದಾರೆ. ಮಗಳು ಈ ಸಾಧನೆ ಮಾಡುತ್ತಾಳೆ ಅಂತ ನಾವು ಅಂದುಕೊಂಡಿರಲಿಲ್ಲ. ಆಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ನಾವು ಹಾರೈಸುತ್ತೆವೆ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : ತೋಳ್ಬಲವಿಲ್ಲದೇ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ 3 ಪದಕ ಜಯಿಸಿ ಸಾಧನೆಯ ಶಿಖರವೇರಿದ ಶೀತಲ್​ ದೇವಿ ಯಾರು ಗೊತ್ತಾ?

Last Updated : Nov 4, 2023, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.