ETV Bharat / state

ಶಿವಮೊಗ್ಗದಲ್ಲಿ ಜೈನ‌ಮುನಿ ಹತ್ಯೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ - Jain community leader Gautam Jain

ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜೈನ‌ ಮುನಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಜೈನ‌ಮುನಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಜೈನ‌ಮುನಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ
author img

By

Published : Jul 10, 2023, 5:55 PM IST

ದಾವಣಗೆರೆಯಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಜೈನ ಸಮುದಾಯ

ಶಿವಮೊಗ್ಗ : ಬೆಳಗಾವಿ ಜಿಲ್ಲೆಯ ಚಿಕ್ಕೂಡಿ ತಾಲೂಕಿನ ಹಿರೇಕೊಡಿ ನಂದಿ ಪರ್ವತದ ಜೈನ್ ಮಂದಿರದ ಆಚಾರ್ಯ 108 ಕಾಮಕುಮಾರ ನಂದಿ ಮುನಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆ ಖಂಡಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ಇಂದು ಸಾಗರದಲ್ಲಿ ಬಿಜೆಪಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಸರ್ವಸಂಗ ಪರಿತ್ಯಾಗಿಗಳಾಗಿರುವ ಜೈನ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಅಲ್ಲದೇ ಅವರ ಹತ್ಯೆ ನಡೆದು ಮೂರು ದಿನವಾಗಿದ್ದು, ಸರ್ಕಾರ ಇನ್ನೂ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ. ಈ ಹತ್ಯೆಯಲ್ಲಿ ಸಾಕಷ್ಟು ಜನರ ಕಾಣದ ಕೈಗಳಿವೆ. ಕೇವಲ ದುಡ್ಡಿನ ವಿಚಾರವಾಗಿ ತನಿಖೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವುದರ ಮೂಲಕ ದಾರಿ ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್​ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹರತಾಳು ಹಾಲಪ್ಪ, ಡಾ.ರಾಜನಂದಿನಿ ಕಾಗೋಡು, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ ಸೇರಿದಂತೆ ಕಾರ್ಯಕರ್ತರ ನೇತೃತ್ವದಲ್ಲಿ ಎಸಿ ಅವರಿಗೆ ಮನವಿಯನ್ನು ಕೊಟ್ಟು ಸರ್ಕಾರಕ್ಕೆ ತನಿಖೆ ಮಾಡಲು ಒತ್ತಾಯ ಮಾಡುತ್ತಿದ್ದೇವೆ. ಕೊಲೆ ನಡೆದು ಎರಡು ದಿನಗಳಾದರೂ ಘಟನಾ ಸ್ಥಳಕ್ಕೆ ಸಿಎಂ ಹಾಗೂ ಗೃಹ ಸಚಿವರುಗಳು ಭೇಟಿ ನೀಡದೇ ಇರುವುದು ಖಂಡನೀಯವಾಗಿದೆ. ಕೊಲೆಗಾರರ ಹೆಸರನ್ನು ಬಹಿರಂಗಪಡಿಸದೇ ಸರ್ಕಾರ ಅವರ ರಕ್ಷಣೆ ಮಾಡಲು ಮುಂದಾಗಿದೆ.

ಇದರಿಂದ ಕೊಲೆಯ ಕುರಿತು ಸೂಕ್ತ ತನಿಖೆ ನಡೆಸಿ ಕೊಲೆಗಾರರಿಗೆ ಸೂಕ್ತ ಶಿಕ್ಷೆ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೇವಲ ಎರಡು ತಿಂಗಳಲ್ಲಿ ಜೈನ ಮುನಿಗಳ ಹಾಗೂ ವೇಣುಗೋಪಾಲ ಅವರ ಹತ್ಯೆ ನಡೆದಿವೆ. ಇದರಿಂದ ಇದನ್ನು ಬಿಜೆಪಿ‌ ಖಂಡಿಸುತ್ತದೆ. ತಕ್ಷಣ ಎರಡು ಕೊಲೆಗಳ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

ದಾವಣಗೆರೆಯಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಜೈನ ಸಮುದಾಯ : ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ದಾವಣಗೆರೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜೈನ ಸಮುದಾಯ ಪ್ರತಿಭಟನೆ ಮಾಡಿತು. ನೂರಾರು ಜನರು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಚೇರಿಯ ಆವರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆರೋಪಿಗಳನ್ನು ರಕ್ಷಣೆ ಮಾಡದೇ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಮನವಿ ಮಾಡಿದರು.

ಜೈನ ಮುನಿ ಹತ್ಯೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ದುಡ್ಡಿಗಾಗಿ ನಡೆದಿದೆಯಾ, ಇಲ್ಲವೇ ಜಿಹಾದಿಗಳ ಜೈನ ಸಮಾಜವನ್ನು ಮತಾಂತರ ಮಾಡುವ ಸಲುವಾಗಿ ನಡೆದಿದೆಯಾ ಎನ್ನುವ ಸತ್ಯಾಂಶ ಹೊರ ಬರಬೇಕಿದೆ. ಏಕೆಂದರೆ ಕೇವಲ ದುಡ್ಡಿನ ವಿಚಾರಕ್ಕೆ ಈ ರೀತಿ ದೇಹದ ಭಾಗಗಳನ್ನು ಕತ್ತರಿಸಿ ಹತ್ಯೆ ಮಾಡಲಾಗಿದೆ ಎಂಬುದು ನಂಬಲು ಅಸಾಧ್ಯವಾಗಿದೆ. ಇದರಿಂದ ರಾಜ್ಯ ಹಾಗೂ ದೇಶದೆಲ್ಲೆಡೆ ಜೈನ ಸಮಾಜ ಭಯದ ವಾತಾವರಣದಲ್ಲಿ ಜೀವನ ನಡೆಸುವಂತೆ ಆಗಿದೆ. ಚಾರ್ತುಮಾಸ ಮುಗಿದ ಮೇಲೆ ಜೈನ ಮುನಿಗಳು ಪಾದಯಾತ್ರೆ ಹೋಗುತ್ತಾರೆ. ಹೀಗಾಗಿ ರಾಜ್ಯ ಸರ್ಕಾರ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಜೈನ ಸಮುದಾಯದ ಮುಖಂಡ ಗೌತಮ್ ಜೈನ್ ಒತ್ತಾಯಿಸಿದರು.

ಇದನ್ನೂ ಓದಿ : ಜೈನ ಮುನಿ ಹತ್ಯೆ ಕೇಸ್‌: ಪೊಲೀಸ್ ಇಲಾಖೆ ಸಮರ್ಥ, ಸಿಬಿಐ ತನಿಖೆ ಅಗತ್ಯವಿಲ್ಲ- ಸಚಿವ ಜಿ.ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.