ETV Bharat / state

ವಿಧಾನಸಭೆ ಚುನಾವಣೆಯಲ್ಲಿ ಜನರ ವಿಶ್ವಾಸ ಕಳೆದುಕೊಂಡಿದ್ದ ಬಿಜೆಪಿ ಈಗಲೂ ಅದೇ ಸ್ಥಿತಿಯಲ್ಲಿದೆ: ಸಚಿವ ಮಧು ಬಂಗಾರಪ್ಪ - ನೀರಾವರಿ ಯೋಜನೆ

ಬಿ ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಆಗಿದ್ದು, ದೇವರು ಅವರಿಗೆ ಒಳ್ಳೆಯದು ಮಾಡಲಿ. ಆದರೆ ಹೊಸ ಅಧ್ಯಕ್ಷರು ಬಂದ ತಕ್ಷಣ ಏನೂ ಆಗಲ್ಲ. ಮೊದಲು ಜನರ ವಿಶ್ವಾಸ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Minister Madhu Bangarappa spoke to reporters.
ಸಚಿವ ಮಧು ಬಂಗಾರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Nov 11, 2023, 8:55 PM IST

Updated : Nov 12, 2023, 6:25 AM IST

ಸಚಿವ ಮಧು ಬಂಗಾರಪ್ಪ ಮಾಧ್ಯಮದವರ ಜೊತೆ ಮಾತನಾಡಿದರು

ಶಿವಮೊಗ್ಗ: ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಈಗಲೂ ಬಿಜೆಪಿ ಅದೇ ಪರಿಸ್ಥಿತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ, ದೇವರು ಒಳ್ಳೆಯದು ಮಾಡಲಿ. ಬಿಜೆಪಿ ಕ್ಯಾಪ್ಟನ್ ಲೆಸ್ ಅಂತಾ ನಾನು ಹೇಳಿದ್ದು, ವಿಧಾನಸಭೆ ಒಳಗೆ ಯಾರು ಪ್ರಶ್ನೆ ಮಾಡುತ್ತಾರೆ. ಆ‌ ಪಕ್ಷಕ್ಕೆ ಈಗಲೂ ವಿಪಕ್ಷ ನಾಯಕ‌ರು ಇಲ್ಲ. ಈಗ ಕ್ಯಾಪ್ಟನ್ ಮಾಡ್ತಾರಂತೆ ಹೇಳಿಕೊಂಡಿದ್ದಾರೆ. ಇಷ್ಟು ದಿನ ಯಾಕೆ ಮಾಡಲಿಲ್ಲ, ವಿಧಾನಸಭೆಯೊಳಗೆ ಪ್ರಶ್ನಿಸುವರು ಯಾರು ಎಂದು ಟೀಕಿಸಿದರು.

ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ ಅಂತಾ ಬಿಜೆಪಿಯವರು ಹೇಳ್ತಾರೆ. ಹಣೆಬರಹ ಬರೆಯುವ ಜನರು ತೀರ್ಮಾನ ಮಾಡೋದು, ಈ ಹಿಂದೆ ಸಹ ಬಹಳ ಅಧ್ಯಕ್ಷರು ಬಂದಿದ್ದಾರೆ. ಬಹಳ ಭಾಷಣ ಮಾಡಿದರೂ ಏನು ಆಗಿಲ್ಲ. ಜನ ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಹೊಸ ಅಧ್ಯಕ್ಷರು ಬಂದ ತಕ್ಷಣ ಏನು ಆಗಲ್ಲ, ಮೊದಲು ಜನರ ವಿಶ್ವಾಸ ಪಡೆದುಕೊಳ್ಳಬೇಕು ಎಂದು ಟಾಂಗ್ ನೀಡಿದರು.

ವಿಜಯೇಂದ್ರ ವಿರುದ್ದ ಭ್ರಷ್ಟಾಚಾರ ಆರೋಪ‌: ವಿಜಯೇಂದ್ರ ವಿರುದ್ದ ಭ್ರಷ್ಟಾಚಾರದ ಆರೋಪ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದನ್ನು ನಾನೊಬ್ಬನೇ ತೀರ್ಮಾನ ಮಾಡಲು ಆಗಲ್ಲ, ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಜನರು ಸಹ ಯಾರು ಒಳ್ಳೆಯದು ಮಾಡ್ತಾರೆ ಅನ್ನೋದನ್ನ ನೋಡುತ್ತಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟಿದೆ. ಜನರು ಈ ಎಲ್ಲಾ ಯೋಜನೆ ಬಗ್ಗೆ ಯೋಚನೆ ಮಾಡುತ್ತಾರೆ ಎಂದರು.

ಸಂಸದ ರಾಘವೇಂದ್ರ ವಿರುದ್ದ ವಾಗ್ದಾಳಿ: ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಸಂಸದರು ‌ಮಾತನಾಡಿದ್ದಾರೆ. ನಮ್ಮ ತಂದೆ ಬಂಗಾರಪ್ಪ ಅವರು ಇದ್ದಾಗಲೇ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಯೋಜನೆಗೆ ಚಾಲನೆ ನೀಡಿದ ಬಳಿಕ ನಮ್ಮ ತಂದೆಯವರು ಅಧಿಕಾರದಲ್ಲಿ ಇರಲಿಲ್ಲ. ಯಾರು ಹೇಳಿದ್ದಾರೋ ಅವರ ತಂದೆ ಅಧಿಕಾರದಲ್ಲಿ ಇದ್ದರು.

ನೀರಾವರಿ ಯೋಜನೆ ನಾನು ಮಾಡಿದ್ದು ಅಂತಾ ಎಲ್ಲಿಯೂ ಹೇಳಿಲ್ಲ. ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಬಂಗಾರಪ್ಪ ಕಾಲದಲ್ಲಿ ಹಾಗೂ ಯಡಿಯೂರಪ್ಪ ಕಾಲದಲ್ಲಿ ಆಗಿದೆ. ಅವರಿಬ್ಬರ ನಂತರ ಬಂದವರು ಏನೂ ಅಭಿವೃದ್ಧಿ ಮಾಡಿದ್ದಾರೆ. ಸಂಸದರು ಮೊದಲು ಕೇಂದ್ರ ಸರಕಾರದ ಜೊತೆ ಮಾತನಾಡಿ ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಲಿ ಎಂದು ಒತ್ತಾಯಿಸಿದರು.

ಮೆಗ್ಗಾನ್ ಬೋಧನಾಸ್ಪತ್ರೆಗೆ ಉನ್ನತ ಶಿಕ್ಷಣ ಸಚಿವರು ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಆಡಳಿತವನ್ನು ಸರಿಪಡಿಸಬೇಕಿದೆ. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆದರೆ ನೋಡಿ ಸುಮ್ಮನಿರುವುದಕ್ಕೆ ಆಗುವುದಿಲ್ಲ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನೇಮಕಾತಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂಓದಿ:ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

Last Updated : Nov 12, 2023, 6:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.