ಶಿವಮೊಗ್ಗ: ಟ್ಯೂಷನ್ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಬೊಲೆರೋ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ನಗರದ ಸವಳಂಗ ರಸ್ತೆಯ ಜೆಎನ್ಎನ್ಸಿ ಕಾಲೇಜಿನ ಬಳಿ ಸಂಭವಿಸಿದೆ.
ಸುನೈನಾ (18) ಎಂಬುವವರೇ ಮೃತ ವಿದ್ಯಾರ್ಥಿನಿ. ಸುನೈನಾ ಟ್ಯೂಷನ್ ಮುಗಿಸಿ ಜೆಎನ್ಎನ್ಸಿ ಕಾಲೇಜು ಬಳಿಯ ತನ್ನ ಗೆಳತಿಯ ಮನೆಗೆ ಬುಕ್ ಕೊಟ್ಟು ಬರುವ ಸಮಯದಲ್ಲಿ ಘಟನೆ ಸಂಭವಿಸಿದೆ. ಸವಳಂಗ ಕಡೆಯಿಂದ ಬರುತ್ತಿದ್ದ ವೇಳೆ ಬೈಕ್ಗೆ ಬೊಲೆರೋ ಜೀಪ್ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಮೀಪದ ನಂಜಪ್ಪ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.