ಶಿವಮೊಗ್ಗ: ನನ್ನ ಸ್ನೇಹಿತ ಸಿ.ಎಂ.ಇಬ್ರಾಹಿಂಗಾಗಿ ಶಾಸಕ ಸಂಗಮೇಶ್ಗೆ ಒಂದು ಭಾರಿ ಟಿಕೆಟ್ ತಪ್ಪಿಸಿದ್ದೆ. ಅಂದು ಸಿ.ಎಂ.ಇಬ್ರಾಹಿಂ ಸೋಲುತ್ತಾರೆ ಎಂದು ತಿಳಿದಿದ್ದರು ಸಹ ಪಕ್ಷದ ನಿಷ್ಟೆಯಿಂದ ಅವರು ಪಕ್ಷ ಬಿಡಲಿಲ್ಲ. ನಾನು ಟಿಕೆಟ್ ತಪ್ಪಿಸಿದರೂ ಸಹ ಅವರು ನನ್ನೂಂದಿಗೆ ಸಂಪರ್ಕದಲ್ಲಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ರವರ 60 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಭದ್ರಾವತಿ ಪಟ್ಟಣದ ಕನಕ ಮಂಟಪದಲ್ಲಿ ನಡೆದ. ಹುಟ್ಟಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ಆಪರೇಷನ್ ಕಮಲಕ್ಕಾಗಿ 50 ಕೋಟಿ ರೂ ನೀಡುವುದಾಗಿ ತಿಳಿಸಿದ್ದರು ಸಹ ಯಾವುದರ ಆಮಿಷಗಳಿಗೆ ಒಳಗಾಗದೇ ಪಕ್ಷದಲ್ಲಿಯೇ ಉಳಿದು ಕೊಂಡಿದ್ದಾರೆ. ಸಂಗಮೇಶ್ರವರಿಗೆ 60 ವರ್ಷ ಆಗಿದೆ. ಅವರು ಇನ್ನೂ ನೂರು ವರ್ಷ ಬದುಕಲಿ ಎಂದು ಹಾರೈಸಿದರು.
ಇದಕ್ಕೂ ಮುನ್ನಾ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಕರ್ತರಿಲ್ಲದೇ ನಾನು, ಸಿದ್ದರಾಮಯ್ಯ ಯಾರು ಇಲ್ಲ. ಪಕ್ಷದ ಕಾರ್ಯಕರ್ತರೇ ನಮಗೆ ಎಲ್ಲಾ. ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಭದ್ರಾವತಿ ಜನ ಕಾಂಗ್ರೆಸ್ಗೆ ಬೆಂಬಲಿಸಿ ಸಂಗಮೇಶ್ ಅವರನ್ನು ಗೆಲ್ಲಿಸಿದ್ದೀರಿ ಅದನ್ನು ಎಂದೂ ಮರೆಯಲ್ಲ ಎಂದರು.
ಈ ವೇಳೆ ಮಾತನಾಡಿದ ಸಂಗಮೇಶ್ವರ್, ನಾನು ಈಗ 60ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ನನಗೆ ನಿಮ್ಮೆಲ್ಲಾರ ಆರ್ಶಿವಾದ ಅನುಕಂಪ ಇರಲಿ. ವಿಐಎಸ್ಎಲ್ ಹಾಗೂ ಎಂಪಿಎಂ ಪ್ರಾರಂಬಿಸಬೇಂಬ ಬಯಕೆ ಇದೆ ಎಂದರು.
ಇದನ್ನೂ ಓದಿ : ಭಾರತ್ ಐಕ್ಯತಾ ಯಾತ್ರೆಗೆ ತೆರಳಿದ್ದ ರಮೇಶ್ ಸಾವು: ಕುಟುಂಬಕ್ಕೆ ₹10 ಲಕ್ಷ ನೀಡಿದ ಡಿಕೆಶಿ