ETV Bharat / state

60ಕ್ಕೂ ಹೆಚ್ಚು ಆಟೋ ಜಪ್ತಿ: ಶಿವಮೊಗ್ಗ ಪೊಲೀಸರ ವಿರುದ್ಧ ಚಾಲಕರ ಆಕ್ರೋಶ - ಕರ್ಫ್ಯೂ ನಿಯಮ ಮೀರಿ ಸಂಚರಿಸುತ್ತಿದ್ದ ಆಟೋ

ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹಾಗೂ ನಿಗದಿಪಡಿಸಿದ ಸಮಯವನ್ನು ನಗರದ ಕೋಟೆ ಪೊಲೀಸ್ ಠಾಣೆ ಹಾಗೂ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಸುಮಾರು ಆರವತ್ತಕ್ಕೂ ಹೆಚ್ಚು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Auto drivers
Auto drivers
author img

By

Published : May 4, 2021, 4:28 PM IST

Updated : May 4, 2021, 4:49 PM IST

ಶಿವಮೊಗ್ಗ: ಕರ್ಫ್ಯೂ ನಿಯಮ ಮೀರಿ ಸಂಚರಿಸುತ್ತಿದ್ದ ಆಟೋಗಳನ್ನು ವಶಕ್ಕೆ ಪಡೆದ ಪೊಲೀಸರ ವಿರುದ್ಧ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜನತಾ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ತುರ್ತು ವಾಹನ ಸಂಚಾರ ಹೊರತುಪಡಿಸಿ ಉಳಿದೆಲ್ಲಾ ವಾಹನ ಸಂಚಾರವನ್ನು ಸರ್ಕಾರ ನಿಷೇಧಿಸಿದೆ.

ಹಾಗಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹಾಗೂ ನಿಗದಿಪಡಿಸಿದ ಸಮಯವನ್ನು ಮೀರಿ ನಗರದ ಕೋಟೆ ಪೊಲೀಸ್ ಠಾಣೆ ಹಾಗೂ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಸುಮಾರು ಅರವತ್ತಕ್ಕೂ ಹೆಚ್ಚು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಪೊಲೀಸರ ವಿರುದ್ಧ ಚಾಲಕರ ಆಕ್ರೋಶ

ಹಾಗಾಗಿ ಆಟೋ ಚಾಲಕರು ಖಾಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಸಮಯದಲ್ಲಿ ದುಡಿಮೆ ಇಲ್ಲದೇ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇಂತಹ ಸಂದರ್ಭದಲ್ಲಿ ಆಟೋಗಳನ್ನು ವಶಕ್ಕೆ ಪಡೆದು ದಂಡ ಕಟ್ಟಿ ಎಂದರೆ ಎಲ್ಲಿಂದ ಕಟ್ಟುವುದು? ಹಾಗಾಗಿ ವಶಪಡಿಸಿಕೊಂಡಿರುವ ಎಲ್ಲಾ ಆಟೋಗಳನ್ನು ಹಿಂತಿರುಗಿಸಬೇಕು. ಸರ್ಕಾರ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

Last Updated : May 4, 2021, 4:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.