ETV Bharat / state

ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಯತ್ನ; ಇಂದು ಸಾಗರ ಬಂದ್ - ಭಜರಂಗದಳ ಕಾರ್ಯಕರ್ತ

ಕೋಮು ಸೂಕ್ಷ್ಮ ಪ್ರದೇಶವಾಗಿ ಬದಲಾಗುತ್ತಿರುವ ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಘಟನೆ ಮತ್ತೆ ಆತಂಕ ಸೃಷ್ಟಿಸಿದೆ. ಭಜರಂಗ ದಳ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಯತ್ನ ಖಂಡಿಸಿ ಇಂದು ಸಾಗರ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ.

Shops are closed as Sagara Band
ಸಾಗರ ಬಂದ್​ ಹಿನ್ನೆಲೆ ಅಂಗಡಿಗಳು ಮುಚ್ಚಿರುವುದು
author img

By

Published : Jan 10, 2023, 11:10 AM IST

Updated : Jan 10, 2023, 2:54 PM IST

ಭಜರಂಗ ದಳ ಕಾರ್ಯಕರ್ತನ ಮೇಲೆ ಹಲ್ಲೆಗೆ ವಿರೋಧ, ಸಾಗರ ಬಂದ್​

ಶಿವಮೊಗ್ಗ: ಭಜರಂಗ ದಳದ ಸಹ ಸಂಚಾಲಕ ಸುನೀಲ್ ಎಂಬವರ ಮೇಲೆ ನಡೆದ ಹಲ್ಲೆ ಯತ್ನ ಪ್ರಕರಣ ಖಂಡಿಸಿ ಇಂದು ಸಾಗರ ಪಟ್ಟಣ ಬಂದ್ ನಡೆಯುತ್ತಿದೆ. ಬೆಳಗ್ಗೆಯಿಂದ ಸಂಜೆ ತನಕ ಬಂದ್​ ನಡೆಯಲಿದೆ. ಪಟ್ಟಣದ ಎಲ್ಲಾ ಅಂಗಡಿ-ಮುಂಗಟ್ಟುಗಳು ವ್ಯಾಪಾರ ಸ್ಥಗಿತಗೊಳಿಸಿವೆ.

ಪಟ್ಟಣದಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿದೆ. ಭಜರಂಗ ದಳ ಹಾಗೂ ಹಿಂದೂಪರ ಸಂಘಟನೆಗಳಿಂದ ಗಣಪತಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆಗೆ ನಿರ್ಧರಿಸಲಾಗಿದೆ. ಈ ಮೆರವಣಿಗೆಯು ವಿವಿಧ ರಸ್ತೆಗಳಲ್ಲಿ ಸಾಗಲಿದ್ದು, ನಂತರ ಮುಖಂಡರು ಎಸಿ ಕಚೇರಿಗೆ ತೆರಳಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ಅಂಗಡಿ ಬಂದ್‌ಗೆ ಆಗ್ರಹ, ಮಾತಿನ ಚಕಮಕಿ: ಅಂಗಡಿ ಬಂದ್ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಂಗಡಿಗಳನ್ನು ಮುಚ್ಚುವಂತೆ ಮೀನು ಮಾರುಕಟ್ಟೆಯಿಂದ ಸೂಚನೆ ನೀಡುತ್ತಿದ್ದರು. ಆಜಾದ್ ರಸ್ತೆಯಲ್ಲಿ ತರಕಾರಿ ಅಂಗಡಿ ಮುಚ್ಚಿಸುವ ಸಂದರ್ಭದಲ್ಲಿ ಅಲ್ಲಿನ ಅಂಗಡಿ ಮಾಲೀಕರು ಹಾಗೂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ನಂತರ ಸಹಾಯಕ ಹಿರಿಯ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಹಾಗೂ ಪೊಲೀಸರು ಬಂದು ಪ್ರತಿಭಟನಾಕಾರರನ್ನು ಕಳುಹಿಸಿ ಪರಿಸ್ಥಿತಿ‌‌‌ ತಿಳಿಗೊಳಿಸಿದರು.

ನಿನ್ನೆ ನಡೆದ ಘಟನೆಯೇನು?: ಸಾಗರದ ಹೊಸ ಬಸ್​ ನಿಲ್ದಾಣದ ಬಳಿ ಇರುವ ಕಚೇರಿಗೆ ಸುನೀಲ್​ ಎಂಬವರು ಬೈಕ್​ನಲ್ಲಿ ಹೋಗುತ್ತಿದ್ದಾಗ ಯುವಕನೊಬ್ಬ ಅವಾಚ್ಯ ಶಬ್ದಗಳಿಂದ ಕರೆದಿದ್ದಾನೆ. ಏನೆಂದು ವಿಚಾರಿಸಲು ಆತನ ಸಮೀಪ ತೆರಳಿದಾಗ ತನ್ನ ಬೈಕ್​ನಲ್ಲಿದ್ದ ಮಚ್ಚು ತೆಗೆದು ಸುನೀಲ್​ ಮೇಲೆ ಬೀಸಿದ್ದಾನೆ. ಸುನೀಲ್​ ಆತನಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿ.ಹೆಚ್.ರಸ್ತೆಯ ಆಭರಣ ಜ್ಯುವೆಲ್ಸ್​ ಬಳಿ ಸುನೀಲ್‌ ತಲುಪುತ್ತಿದ್ದಂತೆ ಈ ಘಟನೆ ನಡೆದಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ: ಈ ಘಟನೆ ನಡೆದ ಬೆನ್ನಲ್ಲೇ ಭಜರಂಗದಳ ಹಾಗೂ ವಿವಿಧ ಸಂಘಟನೆಗಳು ಸಾಗರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಟೌನ್​ ಪೊಲೀಸ್​ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ವೇಳೆ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದರು. ಈ ಹಲ್ಲೆ ಯತ್ನ ಘಟನೆಯನ್ನು ಖಂಡಿಸಿ ಇಂದು ಸಾಗರದಲ್ಲಿ ಬಂದ್​ ನಡೆಸುವಂತೆ ಸಂಘಟನೆಗಳು ಕರೆ ನೀಡಿದ್ದವು. ಪ್ರಕರಣ ಕುರಿತು ಸಾಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಬೇರೆ ಸಮುದಾಯದವನಾಗಿದ್ದು, ಆತನ ಬಂಧನಕ್ಕೆ ಪೊಲೀಸ್​ ಇಲಾಖೆ ಮೂರು ತಂಡಗಳನ್ನು ರಚಿಸಿದೆ ಎಂದು ಎಸ್​ಪಿ ಮಿಥುನ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಂಘಟನೆ ಕಾರ್ಯಕರ್ತನ ಮೇಲೆ ಮಚ್ಚಿನಿಂದ ದಾಳಿ ಯತ್ನ... ಘಟನೆ ಖಂಡಿಸಿ ನಾಳೆ ಸಾಗರ ಬಂದ್​​

Last Updated : Jan 10, 2023, 2:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.