ಶಿವಮೊಗ್ಗ: ಮೊಬೈಲ್ ಅಂಗಡಿಗೆ ಕನ್ನ ಹಾಕಿ ಮೊಬೈಲ್ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ ನಗರದ ಬಿ.ಹೆಚ್.ರಸ್ತೆಯ ಶ್ರೀನಿಧಿ ಸೆಲ್ ಪಾಯಿಂಟ್ ಮೊಬೈಲ್ ಅಂಗಡಿಯಲ್ಲಿ ರಾತ್ರಿ ಕನ್ನ ಹಾಕಿ 4 ಲಕ್ಷದ 20 ಸಾವಿರ ರೂ. ಮೌಲ್ಯದ 27 ಮೊಬೈಲ್ನ್ನು ಮೂವರು ಕದ್ದಿದ್ದರು. ಕೇಸು ದಾಖಲಿಸಿಕೊಂಡಿದ್ದ ದೊಡ್ಡಪೇಟೆ ಪೊಲೀಸರು ಘಟನೆ ನಡೆದು 13 ದಿನದ ಒಳಗೆ ಕನ್ನ ಹಾಕಿದ ಆರೋಪಿಗಳಾದ ಶೇಖ್ ಅರ್ಬಾಸ್, ಮನ್ಸೂರ್ ಅಹಮದ್, ಮೊಹಮ್ಮದ್ ಶಾಫೀರ್ ಎಂಬ ಮೂವರನ್ನು ಬಂಧಿಸಲಾಗಿದೆ. ಇನ್ನು ಇವರಿಂದ ಮೊಬೈಲ್ಗಳ ಜೊತೆ ಕಳ್ಳತನಕ್ಕೆ ಬಳಸುತ್ತಿದ್ದ ಒಂದು ಬೈಕ್ನ್ನು ಸಹ ವಶಕ್ಕೆ ಪಡೆಯಲಾಗಿದೆ.
ಇನ್ನು ದೊಡ್ಡಪೇಟೆಯ ಸಿಪಿಐ ವಸಂತ್ ಕುಮಾರ್, ಪಿಎಸ್ಐ ಶಂಕರಮೂರ್ತಿ, ಎಎಸ್ಐ ವಾಚಾನಾಯ್ಕ ಸೇರಿ ಸಿಬ್ಬಂದಿಗಳಿಗೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.