ETV Bharat / state

ಆರ್​ಎಸ್​​ಎಸ್​​ ಬಾಂಬ್​ ಹಾಕುವವರನ್ನ ತಯಾರು ಮಾಡುವ ಸಂಸ್ಥೆಯಲ್ಲ : ಗೃಹ ಸಚಿವ - ಕಾಂಗ್ರೆಸ್​​ ಅಲ್ಪಸಂಖ್ಯಾತರ ಒಲೈಕೆ

ಸಿದ್ದರಾಮಯ್ಯನವರು ವೋಟ್ ಬ್ಯಾಂಕಿಗಾಗಿ ಏನೇನೋ ಹೇಳುತ್ತಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿದ ಮೇಲೆ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್​ನವರು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಅಲ್ಪಸಂಖ್ಯಾತರ ಓಲೈಕೆಗೆ ಕಾಂಪಿಟೇಷನ್ ನಡೆಯುತ್ತಿದೆ..

ಗೃಹ ಸಚಿವ
ಗೃಹ ಸಚಿವ
author img

By

Published : Oct 17, 2021, 8:31 PM IST

Updated : Oct 17, 2021, 8:43 PM IST

ಶಿವಮೊಗ್ಗ : ಆರ್​​ಎಸ್​ಎಸ್​​​ ಸಂಘಟನೆ ದೇಶದ ಮೇಲೆ ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ. ದೇಶವನ್ನು ಪ್ರೀತಿ ಮಾಡೋರನ್ನು ತಯಾರು ಮಾಡುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.

ಆರ್​ಎಸ್​​ಎಸ್​​ ಬಾಂಬ್​ ಹಾಕುವರನ್ನ ತಾಯಾರು ಮಾಡುವ ಸಂಸ್ಥೆಯಲ್ಲ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ವೋಟ್ ಬ್ಯಾಂಕಿಗಾಗಿ ಏನೇನೋ ಹೇಳುತ್ತಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿದ ಮೇಲೆ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್​ನವರು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಅಲ್ಪಸಂಖ್ಯಾತರ ಓಲೈಕೆಗೆ ಕಾಂಪಿಟೇಷನ್ ನಡೆಯುತ್ತಿದೆ ಎಂದರು.

ಸಿಂದಗಿ, ಹಾನಗಲ್​ ಉಪ ಚುನಾವಣೆ ಗೆಲ್ಲುತ್ತೇವೆ : ಉಪ ಚುನಾವಣೆಯಲ್ಲಿ ಯಡಿಯೂರಪ್ಪನವರ ಅವಧಿಯಲ್ಲಿನ ಸಾಧನೆಗಳು ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ಆಗಿರುವ ಸಾಧನೆಗಳ ಮೇಲೆ ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಮಮಂದಿರ ನಿಧಿ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ಪಂಡ್​ ಅಲ್ಲ : ಕುಮಾರಸ್ವಾಮಿಯವರು ರಾಮಮಂದಿರದ ಲೆಕ್ಕ ನೀಡಲಿ ಎನ್ನುವ ಹೇಳಿಕೆ ಕುರಿತು ಮಾತನಾಡಿದ ಗೃಹ ಸಚಿವರು, ರಾಮಮಂದಿರ ನಿಧಿ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ಫಂಡಾ..?​ ಎಂದು ಪ್ರಶ್ನಿಸಿದರು. ಇವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಆರ್​ಎಸ್​ಎಸ್​​​ ನೆನಪಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Oct 17, 2021, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.