ETV Bharat / state

ಜೇನುಕೃಷಿಗೆ ಉತ್ತೇಜನ ಅಗತ್ಯ: ಅನಂತ ಹೆಗಡೆ ಆಶೀಸರ - ಜೇನು ಸಾಕಾಣಿಕೆ

ಜೇನುಕೃಷಿ ವಿಸ್ತರಿಸುವ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅನಂತ ಹೆಗಡೆ ಆಶೀಸರ ಅಭಿಪ್ರಾಯಪಟ್ಟರು.

ananth hegde pressmeet about  apiculture
ಅನಂತ ಹೆಗಡೆ ಆಶೀಸರ ಸದ್ದಿಗೋಷ್ಟಿ
author img

By

Published : Apr 7, 2021, 7:57 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಜೇನುಕೃಷಿಗೆ ವಿಫುಲ ಅವಕಾಶಗಳಿದ್ದು, ಜೇನುಕೃಷಿಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಅನಂತ ಹೆಗಡೆ ಆಶೀಸರ ಸದ್ದಿಗೋಷ್ಟಿ

ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಜೇನುಕೃಷಿ ಕುರಿತು ಸಮಾಲೋಚನೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದ್ರು.

'ಥಾಯ್‍ಸಾಕ್‍ಬ್ರೂಡ್' ಎಂಬ ಸೋಂಕಿನಿಂದ ಜೇನುಕೃಷಿಯ ವಿಸ್ತರಣೆಯಲ್ಲಿ ಎದುರಾಗಿರುವ ಸಮಸ್ಯೆ ಸವಾಲುಗಳನ್ನು ನಿಯಂತ್ರಿಸಿ, ಎಲ್ಲಾ ಜಿಲ್ಲೆಗಳಲ್ಲಿ ಜೇನುಕೃಷಿಯನ್ನು ಕೈಗೊಳ್ಳಲು ಉತ್ತೇಜಿಸಬಹುದಾದ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೇನುಕೃಷಿಯನ್ನು ವಿಸ್ತರಿಸುವ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದ್ರು.

ವಿಶೇಷವಾಗಿ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚಿನ ಜನ ಜೇನುಕೃಷಿಯಲ್ಲಿ ತೊಡಗಿದ್ದಾರೆ. ಆದರೆ ನಿರೀಕ್ಷಿತ ಆದಾಯ ಕಾಣುವುದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ ನೆರೆಯ ಕೇರಳ ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ರೋಗಗ್ರಸ್ತ ಜೇನುಕುಟುಂಬಗಳಿಂದಾಗಿ ಜೇನುಸಂತತಿ ನಾಶಗೊಳ್ಳುತ್ತಿದೆ. ಮಾತ್ರವಲ್ಲ ಸ್ಥಳೀಯ ಜೇನು ಪ್ರಬೇಧಗಳು ಅಳಿವಿನಂಚಿನಲ್ಲಿವೆ. ಇದರೊಂದಿಗೆ ಕೀಟನಾಶಕಗಳ ಸಿಂಪರಣೆಯೂ ಜೇನುಸಂತತಿ ನಾಶಕ್ಕೆ ಕಾರಣವಾಗಿದೆ. ಅರಣ್ಯಗಳಲ್ಲಿ ಸಾಂಪ್ರದಾಯಿಕವಾಗಿದ್ದ ಜೇನುಗಳಿಗೆ ಈ ಸೋಂಕು ಹರಡಿರುವುದನ್ನು ಖಚಿತಪಡಿಸಿ, ಅದರ ನಿವಾರಣೆಗಾಗಿ ಕ್ರಮವಹಿಸಬೇಕಾದ ಅಗತ್ಯವಿದೆ. ಇವುಗಳ ನಿಯಂತ್ರಣಕ್ಕಾಗಿ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನಸೆಳೆಯುವುದಾಗಿ ಅವರು ತಿಳಿಸಿದರು.

ಜೇನುಕೃಷಿಕ ನಾಗೇಂದ್ರ ಸಾಗರ್ ಮಾತನಾಡಿ, ಜೇನುಕೃಷಿಗೆ ಸರ್ಕಾರವು ಉತ್ತೇಜನ ನೀಡಬೇಕಾದ ಅಗತ್ಯವಿದೆ. ಸೋಂಕಿನಿಂದಾಗಿ ಇಳುವಳಿ ಕಡಿಮೆಯಾಗಲಿದೆ. ಜೇನುಕೃಷಿಕರಲ್ಲಿ ಆಸಕ್ತಿಯೂ ಕಳೆದು ಹೋಗುತ್ತಿದೆ. ಈ ಸಂಬಂಧ ವಿವಿಗಳು ಮತ್ತು ಇಲಾಖೆಗಳು ಸಂಶೋಧನೆಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.

ಇದನ್ನೂ ಓದಿ:ಬಸ್ ಸ್ಟಾಪ್‌: ತಪ್ಪದ ಪ್ರಯಾಣಿಕರ ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.