ಶಿವಮೊಗ್ಗ: ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವನ ಕಾಲು ಕಟ್ ಆಗಿದೆ.
![Accident between car and bus in shivamogh](https://etvbharatimages.akamaized.net/etvbharat/prod-images/5233635_thumsgb.jpg)
ಇಲ್ಲಿನ ತೀರ್ಥಹಳ್ಳಿಯ ನಾಲೂರು ಗ್ರಾಮದ ಬಳಿ ಘಟನೆ ನಡೆದಿದೆ. ಆಗುಂಬೆ ಕಡೆ ಯಿಂದ ಬರುತ್ತಿದ್ದ ದುರ್ಗಾಂಬ ಬಸ್ ಹಾಗೂ ಮಾರುತಿ 800 ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಪ್ರೀತಂರವರ ಕಾಲಿಗೆ ಗಂಭೀರ ಪೆಟ್ಟಾಗಿದೆ. ಪರಿಮಳ ಎಂಬ ಮಹಿಳೆ ಸ್ಥಿತಿಯು ಗಂಭೀರವಾಗಿದ್ದು, ಇಬ್ಬರನ್ನು ಆಗುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.