ಶಿವಮೊಗ್ಗ: ಕೊರೊನಾ ವಾರಿಯರ್ಸ್ಗೆ ಆವಾಜ್ ಹಾಕಿ ನಿಂದಿಸಿದ್ದವರ ವಿರುದ್ದ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸಾಗರ ಆಶಾ ಕಾರ್ಯಕರ್ತೆ ಶರಾವತಿ ಕೋವಿಡ್ ಸೋಂಕಿತರಿಗೆ ಮಾಹಿತಿ ತಿಳಿಸಲು ಹಾಗೂ ಆರೋಗ್ಯ ವಿಚಾರಣೆಗೆ ಹೋಗಿದ್ದಾರೆ. ಲೋಹಿಯಾ ನಗರದ ಗಣೇಶ್ ಎಂಬುವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಆರೋಗ್ಯ ವಿಚಾರಣೆಗೆ ಹೋದಾಗ ನೀವು ಪದೇ ಪದೆ ನಮ್ಮ ಮನೆಗೆ ಬರಬೇಡಿ. ನೀವು ಬಂದರೆ ಎಲ್ಲರಿಗೂ ನಾನು ಪಾಸಿಟಿವ್ ಎಂದು ತಿಳಿಯುತ್ತದೆ.
ನನಗೆ ವಾಕರಿಕೆ ಬರುತ್ತದೆ. ನೀವುಗಳು ನಾಯಿಗಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಆಶಾ ಕಾರ್ಯಕರ್ತೆಯರು ಶಾಸಕ ಹರತಾಳು ಹಾಲಪ್ಪಗೆ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು. ಶಾಸಕರ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆ ದೂರು ದಾಖಲಿಸಿದ್ದಾರೆ.