ಶಿವಮೊಗ್ಗ: ಬೈಕ್ ನಲ್ಲಿ ಚಲಾಯಿಸುತ್ತಿದ್ದ ಯುವಕನಿಗೆ ಹಠಾತ್ ಹೃದಯಾಘಾತವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಹೊರ ವಲಯದ ಹರಿಗೆಯಲ್ಲಿ ನಡೆದಿದೆ.
ಶಿವಮೊಗ್ಗ- ಭದ್ರಾವತಿ ಮಾರ್ಗ ಮಧ್ಯೆ ಬೈಕ್ ನಲ್ಲಿ ಬರುವಾಗ ಸುನೀಲ್(38) ಹೃದಯಾಘಾತವಾಗಿ ಬೈಕ್ ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಸುನೀಲ್ ಭದ್ರಾವತಿ ತಾಲೂಕು ಸಿದ್ಲಿಪುರದ ನಿವಾಸಿಯಾಗಿದ್ದು, ಮಾಚೇನಹಳ್ಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಕೋಟೆ ಸಿಪಿಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ತುಂಗಾ ನಗರ ಪೊಲೀಸರು ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.