ETV Bharat / state

ಕೊರೊನಾ ಭೀತಿ; ಸ್ವಯಂ ಲಾಕ್​​ಡೌನ್ ಘೋಷಿಸಿಕೊಂಡ ಗ್ರಾಮ

ಸಿಎಂ ಬಿ.ಎಸ್. ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರ ತಾಲೂಕಿನ ಸುಣ್ಣದ ಕೊಪ್ಪ ಗ್ರಾಮದಲ್ಲಿ ಸ್ವಯಂ ನಿರ್ಬಂಧ ಹೇರಲಾಗಿದೆ. ಈ ಮೂಲಕ ತಮ್ಮೂರಿಗೆ ಯಾರಾದರೂ ಬೆಂಗಳೂರಿನಿಂದ ಬಂದರೆ ಅವರು ಕಡ್ಡಾಯವಾಗಿ ಕ್ವಾರಂಟೈನ್​ನಲ್ಲಿ ಇರಬೇಕೆಂದು ನಿಯಮ ವಿಧಿಸಲಾಗಿದೆ.

A village that has declared itself a self-locked down in fear of corona
ಕೊರೊನಾ ಭೀತಿಗೆ ಸ್ವಯಂ ಲಾಕ್​​ಡೌನ್ ಘೋಷಿಸಿಕೊಂಡ ಗ್ರಾಮ
author img

By

Published : Jul 23, 2020, 10:44 PM IST

ಶಿವಮೊಗ್ಗ: ಕೊರೊನಾ ತಡೆಯಲು ಸರ್ಕಾರ ಲಾಕ್​ಡೌನ್ ಜಾರಿಮಾಡಿತ್ತು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಕೊರೊನಾ ತಡೆಯುವುದು‌ ಪ್ರತಿಯೊಬ್ಬರ ಕೈಯಲ್ಲೂ ಇದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಗ್ರಾಮವೊಂದು ಸ್ವಯಂ ನಿರ್ಬಂಧ ಹಾಕಿ‌ಕೊಂಡಿದೆ.

ಸಿಎಂ ಬಿ.ಎಸ್. ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರ ತಾಲೂಕಿನ ಸುಣ್ಣದ ಕೊಪ್ಪ ಗ್ರಾಮದಲ್ಲಿ ಸ್ವಯಂ ನಿರ್ಬಂಧ ಹಾಕಿಕೊಳ್ಳಲಾಗಿದೆ. ಸುಣ್ಣದ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆನಂದಿಹಳ್ಳಿ ಹಾಗೂ ತಡಸನಳ್ಳಿ ಗ್ರಾಮಗಳಲ್ಲಿ ಕೊರೊನಾ‌ ಪಾಸಿಟಿವ್ ಕಂಡುಬಂದ ಕಾರಣ ಕೊರೊನಾ ತಮ್ಮೂರಿಗೆ ಬರಬಾರದು ಎಂದು ಗ್ರಾಮಸ್ಥರೇ ಚರ್ಚೆ ನಡೆಸಿ ಸ್ವಯಂ ನಿರ್ಬಂಧ ಹೇರಿ ಬೋರ್ಡ್ ಹಾಕಿದ್ದಾರೆ.

ಕೊರೊನಾ ಭೀತಿಗೆ ಸ್ವಯಂ ಲಾಕ್​​ಡೌನ್ ಘೋಷಿಸಿಕೊಂಡ ಗ್ರಾಮ

ತಮ್ಮೂರಿನ ಯಾರೂ ಸಹ ಗ್ರಾಮದಿಂದ ಹೊರಕ್ಕೆ ಹೋಗಬಾರದು, ಅದೇ ರೀತಿ ನಮ್ಮೂರಿಗೂ ಸಹ ಅನವಶ್ಯಕವಾಗಿ ಯಾರೂ ಬರಬಾರದು. ಗ್ರಾಮದಲ್ಲಿ ಓಡಾಡುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ತಮ್ಮೂರಿಗೆ ಯಾರಾದರೂ ಬೆಂಗಳೂರಿನಿಂದ ಬಂದರೆ ಅವರು ಕಡ್ಡಾಯವಾಗಿ ಕ್ವಾರಂಟೈನ್​ನಲ್ಲಿ ಇರಬೇಕು. ಹೀಗೆ ತಮ್ಮಲ್ಲಿಯೇ‌ ನಿಯಮಗಳನ್ನು ಹಾಕಿ ಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.