ETV Bharat / state

ಮಗಳನ್ನು ಕಾಲೇಜಿಗೆ ಸೇರಿಸಿ, ವಾಪಸ್ ಆಗುವಾಗ ಲಾರಿ ಡಿಕ್ಕಿ ಹೊಡೆದು ತಂದೆ ಸಾವು: ಭಯಾನಕ ದೃಶ್ಯ ಸೆರೆ - ಈಟಿವಿ ಭಾರತ ಕನ್ನಡ

ಮಗಳನ್ನು ಕಾಲೇಜಿಗೆ ದಾಖಲಿಸಿ ಮನೆಗೆ ಹಿಂತಿರುಗಿದ ವೇಳೆ ರಸ್ತೆ ಅಪಘಾತ ಸಂಭವಿಸಿ, ತಂದೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

kn_smg
ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ
author img

By

Published : Nov 30, 2022, 8:39 PM IST

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ದಾಖಲಿಸಿ, ತಂದೆ ವಾಪಸ್ ಆಗುವಾಗ ಕಾಲೇಜು ಮುಂಭಾಗವೇ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ತಂದೆ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಹೊಸನಗರ ಪಟ್ಟಣದಲ್ಲಿ ನಡೆದಿದೆ.

ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಂತೂರು ನಿವಾಸಿ ಅಣ್ಣಪ್ಪ(43) ಮೃತ ವ್ಯಕ್ತಿ. ಅಣ್ಣಪ್ಪ ತಮ್ಮ ಮಗಳನ್ನು ಹೊಸನಗರದ ಕೊಡಚಾದ್ರಿ ಕಾಲೇಜಿಗೆ ದಾಖಲಿಸಿ ತಮ್ಮ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಮನೆಗೆ ವಾಪಸ್ ಆಗುವ ವೇಳೆ ಕಾಲೇಜು ಮುಂಭಾಗದಲ್ಲಿಯೇ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು.

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ

ಕೂಡಲೇ ಅವರನ್ನು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಣ್ಣಪ್ಪ ಸಾವನ್ನಪ್ಪಿದ್ದಾರೆ. ಕಾಲೇಜಿನ ಸಿಸಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ: ಕಾರು-ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.