ETV Bharat / state

ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್, 141 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ - ಶಿವಮೊಗ್ಗ ನ್ಯೂಸ್​

Kuvempu University convocation: ಕುವೆಂಪು ವಿವಿಯ 33ನೇ ಘಟಿಕೋತ್ಸವದಲ್ಲಿ ಒಟ್ಟು 141 ಸ್ವರ್ಣ ಪದಕವನ್ನು 16 ಪುರುಷರು, 58 ಮಹಿಳೆಯರು ಸೇರಿ ಒಟ್ಟು 74 ವಿದ್ಯಾರ್ಥಿಗಳು ಹಂಚಿಕೊಂಡರು.

Kuvempu University convocation
ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಸಮಾರಂಭ
author img

By

Published : Jul 22, 2023, 8:05 PM IST

ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಸಮಾರಂಭ

ಶಿವಮೊಗ್ಗ: ಮಲೆನಾಡಿನ ಭದ್ರಾ ನದಿ ತಟದಲ್ಲಿನ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂದು 33ನೇ ವರ್ಷದ ಘಟಿಕೋತ್ಸವ ಸಂಭ್ರಮದಿಂದ ನೆರವೇರಿದೆ. ವಿಶ್ವವಿದ್ಯಾನಿಲಯ ಆವರಣದ ಬಸವ ಭವನದಲ್ಲಿ ಇಂದು ನಡೆದ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

ಮೂವರಿಗೆ ಗೌರವ ಡಾಕ್ಟರೇಟ್: ಕಾರ್ಯಕ್ರಮದಲ್ಲಿ ಮೊದಲು ಉಡುಪಿಯ ಸದಾನಂದ ಶೆಟ್ಟಿ, ವಿಜಯಪುರದ ಸಂಗೀತ ಕ್ಷೇತ್ರದ ಸಾಧನೆಗಾಗಿ ಕಲಕೇರಿ ರಾಜಗುರು ಗುರುಸ್ವಾಮಿ ಹಾಗೂ ಹೊಳಲ್ಕರೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಗ್ರಾಮೀಣಾಭಿವೃದ್ದಿ ಸೇವೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ನಂತರ ಎಂ.ಎ ಸ್ನಾತಕೋತ್ತರ ಪದವಿ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ನೀಡಿ ಗೌರವಿಸಲಾಯಿತು. ಒಟ್ಟು 141 ಸ್ವರ್ಣ ಪದಕವನ್ನು 16 ಪುರುಷರು, 58 ಮಹಿಳೆಯರು ಸೇರಿ ಒಟ್ಟು 74 ವಿದ್ಯಾರ್ಥಿಗಳು ಹಂಚಿಕೊಂಡರು. 18 ನಗದು ಬಹುಮಾನಗಳ ಪೈಕಿ, ಮೂವರು ಪುರುಷರು ಮತ್ತು 13 ಮಹಿಳೆಯರು ಸೇರಿ ಒಟ್ಟು 16 ವಿದ್ಯಾರ್ಥಿಗಳು ಹಂಚಿಕೊಂಡರು. ಎಂ.ಎ (ಕನ್ನಡ)ದಲ್ಲಿ ವಿ.ವಿಸ್ಮಿತಾ ಅವರು ಅತಿಹೆಚ್ಚು ಸ್ವರ್ಣ ಪದಕ ಹಾಗೂ 2 ನಗದು ಬಹುಮಾನ ಪಡೆದರು.

ವಿಸ್ಮಿತಾಗೆ 12 ಸ್ವರ್ಣ ಪದಕ: ಕನ್ನಡ ಭಾರತಿ ವಿಭಾಗದ ವಿಸ್ಮಿತಾ ಒಟ್ಟು 12 ಸ್ವರ್ಣ ಪುರಸ್ಕಾರಗಳನ್ನು ಪಡೆದರು. ಈ ಮೂಲಕ ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕುಸ್ಕೂರು ಗ್ರಾಮದ ವಿರೇಶಪ್ಪ ಹಾಗೂ ವಿಶಾಲಮ್ಮ ಅವರ ಎರಡನೇ ಮಗಳು. ಕಡು ಬಡತನ ಹಿನ್ನೆಲೆಯಿಂದ ಬಂದಿರುವ ಈಕೆ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಿದ್ದಾರೆ.

"ಪೋಷಕರು ಕೂಲಿ ಕೆಲಸ ಮಾಡಿ ವ್ಯಾಸಂಗ ಮಾಡಿಸಿದ್ದಾರೆ. ಬಹಳ ಶ್ರಮ ವಹಿಸಿ, ಕಷ್ಟಪಟ್ಟು ಓದಿರುವುದಕ್ಕೆ ತಕ್ಕ ಫಲ ಸಿಕ್ಕಿದೆ. ನನಗೆ ಮನೆಯವರು, ಕನ್ನಡ ಭಾರತೀಯ ಉಪನ್ಯಾಕರು, ಸ್ನೇಹಿತರು ಪ್ರತಿ ಹಂತದಲ್ಲೂ ಸಹಾಯ ಮಾಡಿದ್ದಾರೆ. ನಾನು ಇಷ್ಟೊಂದು ಪದಕ ಬರುತ್ತದೆ ಎಂದು‌ಕೊಂಡಿರಲಿಲ್ಲ. ಮುಂದೆ ಭಾರತೀಯ ಆಡಳಿತ ಸೇವೆಯಲ್ಲಿ ಕೆಲಸ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದೇನೆ. ನಾನು ನೊಂದವರ- ದಲಿತರ ಧ್ವನಿಯಾಗಲು ಪ್ರಯತ್ನಿಸುತ್ತೇನೆ"- ವಿ.ವಿಸ್ಮಿತಾ

ಆಶಾ ಎಂಬುವರು ಸಮಾಜಶಾಸ್ತ್ರ ಎಂ.ಎ.ವಿಭಾಗದಲ್ಲಿ ಐದು ಬಂಗಾರದ ಪದಕ ಪಡೆದುಕೊಂಡಿದ್ದಾರೆ. ಇವರು ಮೂಲತಃ ಬೆಂಗಳೂರಿನವರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಂ.ಎ ಮಾಡಲು ನಾನು ಕುವೆಂಪು ವಿವಿಗೆ ಬಂದಿದ್ದೆ. ಇಲ್ಲಿನ ವಾತಾವರಣದಲ್ಲಿ ಓದಲು ಸಾಕಷ್ಟು ಅನುಕೂಲಕರವಾಗಿದೆ. ಇದರಿಂದ ಇಲ್ಲಿ ಓದಲು ತುಂಬ ಖುಷಿಯಾಗುತ್ತದೆ. ನಾನು ಸ್ವರ್ಣ ಪದಕವನ್ನು‌ ನಿರೀಕ್ಷೆ‌‌ ಮಾಡಿರಲಿಲ್ಲ. ಈಗ ಪದಕ ಬಂದಿದ್ದು ತುಂಬ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಬಾರಿಯ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿದ್ದು ವಿಶೇಷವಾಗಿತ್ತು. ವಿವಿಧ ಅಧ್ಯಯನ ವಿಭಾಗಗಳಲ್ಲಿ ಆರ್. ಆಶಾ, ಆರ್.ನೇಹಾ, ಯು.ರೋಹಿಣಿ, ಎ.ತೃಪ್ತಿ, ಎಸ್. ರಮ್ಯ, ಇವರು ತಲಾ 5 ಸ್ವರ್ಣ ಪದಕ ಪಡೆದಿದ್ದಾರೆ. ಎಂಎಸ್​ಸಿ ಗಣಿತ ಶಾಸ್ತ್ರದಲ್ಲಿ ಎಂ. ಧನುಷ್ ಚೌಹಾಣ್ 4 ಸ್ವರ್ಣ ಹಾಗೂ 2 ನಗದು ಬಹುಮಾನ, ತರನುಮ್ ಬಾನು, ವಿ.ಎನ್. ಶ್ರೀನಿವಾಸ, ಪಿ.ಎಂ. ಪ್ರಿಯಾಂಕ ಹಾಗೂ ಬಿಂದು ದಿನೇಶ್ ನಾಯಕ್ ಇವರು ತಲಾ 4 ಸ್ವರ್ಣ ಪದಕ ಮತ್ತು ಬಿ.ಇಡಿನಲ್ಲಿ ಎ. ಗಜಲಾ ಹಫೀಜ್ ಇವರು ಮೂರು ಸ್ವರ್ಣ, 1 ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಪದ್ಮಭೂಷಣ, ಪದ್ಮ ವಿಭೂಷಣ, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಾಧಿಪತಿಗಳಾದ ಡಾ.ಸುರೇಶ್ ಬಿ.ಎಸ್ ಅವರು ಘಟಿಕೋತ್ಸವ ಭಾಷಣ ಮಾಡಿದರು. ಈ ವೇಳೆ ಕುಲಪತಿಗಳಾದ ಪ್ರೊ.ವೀರಭದ್ರಪ್ಪ, ಕುಲಸಚಿವರಾದ ಗೀತ, ಮೌಲ್ಯಮಾಪನ ಕುಲಸಚಿವರಾದ ನವೀನ್ ಸೇರಿದಂತೆ ಸಿಂಡಿಕೇಟ್ ಸದಸ್ಯರು ಹಾಜರಿದ್ದರು.

ಇದನ್ನೂ ಓದಿ: ಕುವೆಂಪು ವಿವಿ ಘಟಿಕೋತ್ಸವ: 'ಕನ್ನಡ'ತಿ ದಿವ್ಯಾಗೆ 11 ಸ್ವರ್ಣ ಪದಕ ಪುರಸ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.