ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ 335 ಜನ ಸೋಂಕಿತರು ಪತ್ತೆ; 6 ಜನರ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮಹಾಮಾರಿ ಕೊರೊನಾಗೆ 6 ಜನ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 180ಕ್ಕೆ ಏರಿದೆ.

335 new coronavirus cases reported in Shivamogga
ಸಂಗ್ರಹ ಚಿತ್ರ
author img

By

Published : Sep 9, 2020, 9:34 PM IST

ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು 335 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 10,253ಕ್ಕೆ ಏರಿಕೆಯಾಗಿದೆ. ಇಂದು 308 ಜನ ಗುಣಮುಖರಾಗಿದ್ದಾರೆ. ಇದರಿಂದ ಇದುವರೆಗೂ 7,288 ಜನ ಗುಣಮುಖರಾಗಿದ್ದಾರೆ. ಇಂದು 6 ಜನ ಸೋಂಕಿತರು ಸಾವನ್ನಪ್ಪಿರುವ ವರದಿಯಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ 180 ಜನ ಸಾವನ್ನಪ್ಪಿದ್ದಾರೆ. ಸದ್ಯ 2297 ಜನ ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 198 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್​​ನಲ್ಲಿ 240 ಜನ, ಖಾಸಗಿ ಆಸ್ಪತ್ರೆಯಲ್ಲಿ 284 ಜನ ಸೇರಿದಂತೆ ಮನೆಯಲ್ಲಿ 1454 ಜನ ಐಸೋಲೇಷನ್​ನಲ್ಲಿದ್ದಾರೆ. ಇನ್ನು ಆರ್ಯುವೇದ ಕಾಲೇಜಿನಲ್ಲಿ 121 ಜನರಿದ್ದಾರೆ. ಕಂಟೈನ್ಮೆಂಟ್ ಝೋನ್ ಸಂಖ್ಯೆ 4,571ಕ್ಕೆ ಏರಿಕೆ ಆಗಿದೆ. ಇದರಲ್ಲಿ‌ 1524 ಝೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ:

ಶಿವಮೊಗ್ಗ-169, ಭದ್ರಾವತಿ-37, ಶಿಕಾರಿಪುರ-83, ತೀರ್ಥಹಳ್ಳಿ-11, ಸೊರಬ-13, ಸಾಗರ-13, ಹೊಸನಗರ-02, ಬೇರೆ ಜಿಲ್ಲೆಯಿಂದ 07 ಜನ ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 1826 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1430 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.