ETV Bharat / state

ಶಿವಮೊಗ್ಗದ 30 ಜನರಿಗೆ ಕೊರೊನಾ, 39 ಮಂದಿ ಗುಣಮುಖ - ಶಿವಮೊಗ್ಗ ಲೆಟೆಸ್ಟ್ ನ್ಯೂಸ್

879 ಸಕ್ರಿಯ ಪ್ರಕರಣಗಳ‌ ಪೈಕಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 242 ಸೋಂಕಿತರು, ಕೋವಿಡ್ ಕೇರ್ ಸೆಂಟರ್‌ನಲ್ಲಿ 513 ಸೋಂಕಿತರು, ಖಾಸಗಿ ಆಸ್ಪತ್ರೆಯಲ್ಲಿ 48 ಹಾಗೂ‌ ಮನೆಯಲ್ಲಿ 76 ಮಂದಿ ಐಸೊಲೇಷನ್ ಆಗಿದ್ದಾರೆ.

Shimogga corona case
Shimogga corona case
author img

By

Published : Aug 2, 2020, 8:48 PM IST

ಶಿವಮೊಗ್ಗ: ಜಿಲ್ಲೆಯಲ್ಲಿಂದು 30 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿ ಸೋಂಕಿತರ ಸಂಖ್ಯೆ 1,982ಕ್ಕೆ ಏರಿಕೆಯಾಗಿದೆ. ಹಾಗೂ ಮೂವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇಂದು‌ 39 ಜನರು ಕೊರೊನಾ ಗೆದ್ದು ಬಂದಿದ್ದು ಜಿಲ್ಲೆಯಲ್ಲಿ 1,063 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 40 ಮಂದಿ ಮೃತಪಟ್ಟಿದ್ದಾರೆ. 385 ಕಂಟೈನ್‌ಮೆಂಟ್‌ ಝೋನ್ ಮಾಡಲಾಗಿದ್ದು, ಸದ್ಯ 97 ಕಡೆ ಈ ರೀತಿಯ ನಿಷೇಧಿತ ಝೋನ್‌ಗಳು ಮುಂದುವರೆದಿವೆ.

ಸದ್ಯ 879 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 242 ಸೋಂಕಿತರು, ಕೋವಿಡ್ ಕೇರ್ ಸೆಂಟರ್ ನಲ್ಲಿ 513 ಸೋಂಕಿತರು, ಖಾಸಗಿ ಆಸ್ಪತ್ರೆಯಲ್ಲಿ 48 ಹಾಗೂ‌ ಮನೆಯಲ್ಲಿ 76 ಮಂದಿ ಐಸೊಲೇಷನ್ ಆಗಿದ್ದಾರೆ.

150 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 139 ಜನರ ವರದಿ ಬಂದಿದೆ. ಇದುವರೆಗೂ 28,103 ಜನರ ಸ್ವಾಬ್ ತೆಗೆಯಲಾಗಿದ್ದು 25,845 ಮಂದಿಯ ಫಲಿತಾಂಶ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.