ETV Bharat / state

ಕುವೆಂಪು ತಾಣದಲ್ಲಿ ಮೊಳಗಿದ ಕನ್ನಡ ಡಿಂಡಿಮ: ಮಹತ್ವದ ವಿಷಯಗಳ ಉಪನ್ಯಾಸ

author img

By

Published : Mar 4, 2020, 9:33 PM IST

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, 'ಮುಳುಗುತ್ತಿರುವ ಚಳುವಳಿಗಳು' ಹಾಗೂ 'ಬತ್ತುತ್ತಿರುವ ಸಾಹಿತಿಗಳ ದನಿ' ಎಂಬ ವಿಷಯದ ಕುರಿತು ಪ್ರೊ. ಬಿ.ಎಲ್. ರಾಜು ಮಾತನಾಡಿದರು.

14th District Kannada Literary Conference

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, 'ಮುಳುಗುತ್ತಿರುವ ಚಳುವಳಿಗಳು' ಹಾಗೂ 'ಬತ್ತುತ್ತಿರುವ ಸಾಹಿತಿಗಳ ದನಿ' ಎಂಬ ವಿಷಯದ ಕುರಿತು ಪ್ರೊ. ಬಿ.ಎಲ್. ರಾಜು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಚಳುವಳಿಗಳು ಕೇವಲ ಸಂಘಟನೆಯ ಹೆಸರಿಗೆ ಮಾತ್ರ ಉಳಿದಿಕೊಂಡಿವೆ ಹೊರತು ಹೋರಾಟಕ್ಕಾಗಿ ಅಲ್ಲ. ಅಂದಿನ ದಿನಗಳಲ್ಲಿ ಜನರ ಸಂಕಷ್ಟಗಳ ಬಗ್ಗೆ ಹಾಗೂ ಜನರ ನೋವಿನ ಕುರಿತು ಸಾಹಿತ್ಯ ಚಳುವಳಿಗಳು ಪ್ರಮುಖ ಪಾತ್ರವಹಿಸುತ್ತಿದ್ದವು. ಆದರೆ ಇಂದು ಪ್ರೇಮಕಾವ್ಯದ ಸಾಹಿತ್ಯಗಳಾಗಿ ಬದಲಾಗಿರುವುದು ದುರಂತ ಎಂದರು.

ಶಿವಮೊಗ್ಗದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ನಂತರ 'ಪ್ರಸ್ತುತ ಸಂದರ್ಭ ಮತ್ತು ದಲಿತರು' ಎಂಬ ವಿಷಯದ ಕುರಿತು ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ಗುರುಮೂರ್ತಿ, ಅಂದಿನಿಂದ ಇಂದಿನವರೆಗೂ ದಲಿತರ ಮೇಲೆ ದೌರ್ಜನ್ಯಗಳು ಅತ್ಯಾಚಾರಗಳು ನಡೆಯುತ್ತಲೇ ಬರುತ್ತಿವೆ. ದಲಿತರೊಂದಿಗೆ ವಿವಾಹವಾದರೆ ಮರ್ಯಾದಾ ಹತ್ಯೆ ಅಂತ ಪ್ರತಿಷ್ಟೆ ತೋರುವ ಕಾಲ ಬಂದಾಗಿದೆ ಎಂದರು.

ಸ್ವತಂತ್ರ ಬಂದು ಎಪ್ಪತ್ತು ವರ್ಷಗಳು ಕಳೆದಿದೆ ಈ ಸಂದರ್ಭದಲ್ಲಿ ದಲಿತರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರಗಳು ಕಡಿಮೆ ಆಗಬೇಕಿತ್ತು. ಆದರೆ ಇಂದು ಸಹ ಬದಲಾಗಿಲ್ಲ, ಹಾಗಾಗಿ ನಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆ ಎನ್ನುವ ಅನುಮಾನ ಭಾವ ನಮ್ಮನ್ನ ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.