ಶಿವಮೊಗ್ಗ: ಕೋವಿಡ್ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಮಗು ಉದಮ್(1) ಸಾವನ್ನಪ್ಪಿದೆ.
ಉದಮ್ ಶಿವಮೊಗ್ಗ ಗಾಂಧಿ ಬಜಾರ್ ಮಡಿವಾಳರ ಕೇರಿಯ ಉದಯ್ ಹಾಗೂ ಚೈತ್ರ ದಂಪತಿಯ ಪುತ್ರ. ಉದಮ್ಗೆ ಬಿಳಿ ರಕ್ತ ಕಣ ಹೆಚ್ಚಾಗಿದೆಯೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕ್ಸಿಜನ್ ಕೊರತೆಯಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಬಳಿಕ ಉದಮ್ಗೆ ಕೋವಿಡ್ ದೃಢವಾಗಿತ್ತು. ಹೀಗಾಗಿ ಕೊರೊನಾಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಗು ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದೆ. ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದ ಪ್ರಥಮ ಮಗುವಾಗಿದೆ.
ಇತ್ತ ಇದ್ದೊಬ್ಬ ಮಗುವನ್ನು ಕಳೆದುಕೊಂಡು ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಓದಿರಿ: ಪತ್ನಿಯ ತಿಥಿ ದಿನವೇ ಪತಿಯೂ ಕೋವಿಡ್ಗೆ ಬಲಿ: ಅನಾಥರಾದ ಮಕ್ಕಳು