ರಾಮನಗರ: ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಳೆಯ ವಿವೇಕ್ ಪ್ರತಿಕ್ರಿಯೆ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಅನ್ನೋದು ನನಗೆ ಗೊತ್ತಿಲ್ಲ. ನಾನು ಪೋಸ್ಟ್ ಮಾರ್ಟಂ ರಿಪೋರ್ಟ್ಗಾಗಿ ಕಾಯುತ್ತಿದ್ದೇನೆ. ಪೊಲೀಸರ ತನಿಖೆ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ. ನಾನೂ ಕೂಡ ಅದಕ್ಕೆ ಕಾಯುತ್ತಿದ್ದೇನೆ ಎಂದರು.
ಆಕೆಯ ಹೆತ್ತವರು ನೋವಿನಲ್ಲಿ ಮಾತನಾಡುತ್ತಿದ್ದಾರೆ, ಮಾತಾಡಲಿ ಸರ್, ನಾನು ಏನು ಮಾತನಾಡೋದಿಲ್ಲ. ಆಕೆಗೂ ನನಗೂ ಕಳೆದ ಒಂದು ವರ್ಷದಿಂದ ಪರಿಚಯ ಇದೆ. ಮ್ಯೂಚುಯಲ್ ಫ್ರೆಂಡ್ನಿಂದ ನನಗೆ ಪರಿಚಯ ಆಯ್ತು. ಆಕೆಗೆ ಬೇಜಾರಾದಾಗ ನನಗೆ ಆಗಾಗ ಸಿಗುತ್ತಿದ್ದಳು. ತುಂಬಾ ಇನೋಸೆಂಟ್, ಒಬಿಡಿಯಂಟ್ ಆಗಿದ್ದಳು. ನನಗೂ ಕೂಡ ಅಚ್ಚರಿಯಾಗುತ್ತೆ, ಈ ಆತ್ಮಹತ್ಯೆಗೆ ಕಾರಣ ಏನು ಅನ್ನೋದು ಗೊತ್ತಾಗುತ್ತಿಲ್ಲ ಎಂದರು.
ಇದನ್ನೂ ಓದಿ: ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ: ತಂದೆ ಪ್ರಭು ಮಾದಪ್ಪ ಹೇಳಿದ್ದೇನು?
ನಡೆದಿರುವ ವಿಚಾರ ನನಗೆ ಗೊತ್ತಿಲ್ಲ. ಆಕೆ ಅಪ್ಸೆಟ್ ಆಗಿದ್ಲು, ನಾನು ಕೇಳಿದ್ದೆ ಅಷ್ಟೇ. ಪೊಲೀಸರು ತನಿಖೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ಏನು ಎಂಬ ವಿಚಾರ ಗೊತ್ತಾಗುತ್ತೆ ಅಲ್ಲಿಯವರೆಗೂ ಕಾಯಬೇಕು ಎಂದರು.