ETV Bharat / state

ಜಾಮೀನು ಪಡೆದು ಜೈಲಿನಿಂದ ಹೊರಬಂದ ಪಿಡಿಒಗೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು - ರಾಮನಗರ ಪಿಡಿಒ

ಗ್ರಾಮ ಪಂಚಾಯಿತಿಯ ಪಿಡಿಒ ರಮ್ಯ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿ ಮಾಡಿ ಬಂಧಿಸಿತ್ತು. ಕಳೆದೆರಡು ದಿನದ ಹಿಂದೆ ಜಾಮೀನು ಮೇಲೆ ಹೊರಬಂದು, ದೇವಸ್ಥಾನಕ್ಕೆ ತೆರಳುವ ವೇಳೆ ಕೆಲ ಸ್ಥಳೀಯರು, ಗುತ್ತಿಗೆದಾರರು ಆಕೆಯನ್ನು ಸ್ವಾಗತಿಸಿದ್ದಾರೆ.

Villagers Make grand welcome to the PDO who have been released on bail
ಜಾಮೀನು ಪಡೆದು ಹೊರಬಂದ ಪಿಡಿಒಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
author img

By

Published : Jan 19, 2021, 11:00 PM IST

ರಾಮನಗರ: ಲಂಚ ಸ್ವೀಕರಿಸುವಾಗ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲುವಾಸ ಮಾಡಿದ್ದ ಆರೋಪಿ ಪಿಡಿಒ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಗ್ರಾಮಸ್ಥರು ಅದ್ಧೂರಿಯಾಗಿ ಆಕೆಯನ್ನು ಸ್ವಾಗತಿಸಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತೋಕಸಂದ್ರ ಗ್ರಾಮ ಪಂಚಾಯಿತಿಯ ಪಿಡಿಒ ರಮ್ಯ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿ ಮಾಡಿ ಬಂಧಿಸಿತ್ತು. ಆಕೆ ಈಗ ಬಿಡುಗಡೆಯಾಗಿದ್ದು ಗ್ರಾಮಸ್ಥರು ಹೂವಿನ ಹಾರ, ಹೂಗುಚ್ಛ ನೀಡಿ, ಪಟಾಕಿ ಸಿಡಿಸಿ ಸ್ವಾಗತಿಸಿದ್ದಾರೆ.

ಜಾಮೀನು ಪಡೆದು ಹೊರಬಂದ ಪಿಡಿಒಗೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು

ದೇವಸ್ಥಾನಕ್ಕೆ ತೆರಳುವ ವೇಳೆ ರಸ್ತೆ ಮಧ್ಯದಲ್ಲಿ ಪಿಡಿಒ ಇದೆಲ್ಲಾ ಬೇಡ, ಎಲ್ಲಾ ವಾಪಸ್​​ ಹೋಗಿ ಎಂದು ಕೇಳಿಕೊಂಡರೂ ಕೆಲವು ಸ್ಥಳೀಯರು ಹಾಗೂ ಗುತ್ತಿಗೆದಾರರು ಆಕೆಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ.

ಇದನ್ನೂ ಓದಿ: ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಸಮರ.. ಬೆಂಗಳೂರಿನಲ್ಲಿ ನಾಳೆ ಕಾಂಗ್ರೆಸ್ ಶಕ್ತಿ ಪ್ರದರ್ಶನ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.