ರಾಮನಗರ : ಚಳಿಗಾಲದ ಅತಿಥಿ ಅವರೆಕಾಯಿ ಎಲ್ಲರ ಮನೆಯಲ್ಲೂ ಈಗ ಘಮಗುಡುತ್ತಿದೆ. ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಅವರೆಕಾಯಿಯ ಅಡಿಗೆ ತಯಾರು ಮಾಡಿ ಸವಿಯುತ್ತಿದ್ದಾರೆ. ಅದರ ಜೊತೆಗೆ ಮಹಿಳಾ ಮಣಿಗಳು ಅವರೆ ಕಾಯಿಯಲ್ಲಿ ವಿವಿಧ ಖಾದ್ಯಗಳನ್ನು ಮಾಡಿ ಜನರಿಗೆ ಪರಿಚಯಿಸಿದ್ದಾರೆ.
ಹೌದು, ನಗರದ ಕನ್ನಿಕಾಮಹಲ್‌ನಲ್ಲಿ ಆಯೋಜನೆ ಮಾಡಲಾಗಿದ್ದ ಅವರೆ ಬೇಳೆ ತಿಂಡಿ ಫೆಸ್ಟ್ ಆಹಾರ ಮೇಳದಲ್ಲಿ ಅವರೆಕಾಯಿ, ಹಿಚುಕಿದ ಅವರೆಯ ಬಗೆಬಗೆಯ ತಿಂಡಿ ತಿನಿಸುಗಳು, ಹಿಚುಕಿದ ಅವರೆಯಲ್ಲಿ ಮಾಡಿರುವ ವಿವಿಧ ಖಾದ್ಯಗಳು ಎಲ್ಲರ ಬಾಯಲ್ಲಿ ನೀರೂರವಂತೆ ಮಾಡಿದವು.
ಸಾಮಾನ್ಯವಾಗಿ ಹಿಚುಕಿದ ಅವರೆ, ಅವರೆಕಾಯಿ ಸಾಂಬಾರ್ ಮಾಡಿ ಸವಿಯುತ್ತಿದ್ದ ಸಾರ್ವಜನಿಕರಿಗೆ ಈ ತಿಂಡಿ ಫೆಸ್ಟ್ ಮೇಳದಲ್ಲಿ ಆಯೋಜನೆ ಮಾಡುವ ಮೂಲಕ ಹೊಸ ಬಗೆಯ ತಿಂಡಿ, ಖಾದ್ಯಗಳನ್ನ ಮಹಿಳೆಯರು ಸಾರ್ವಜನಿಕರಿಗೆ ಪರಿಚಯಿಸಿದ್ದಾರೆ.
ಈ ಆಹಾರ ಮೇಳದಲ್ಲಿ ಪ್ರಮುಖವಾಗಿ, ಹಿದುಕಿದ ಬೆಳೆ ಒಬ್ಬೊಟ್ಟು, ಅವರೇ ಬೆಳೆ ಚಿತ್ತಾನ್ನ, ಅವರೆಬೆಳೆ ಪಲಾವ್, ಅವರೆ ಬೆಳೆ ವಡೆ, ಪಾಯಸ, ಅವರೆ ಬೆಳೆ ಹಲ್ವಾ, ದೋಸೆ, ಹಿದುಕಿದ ಬೆಳೆ ಗೋಲ್ಕೊಪ್ಪಾ, ಒಗ್ಗರಣೆ ಪುರಿ, ಗ್ರಾಸ್ ಹಲ್ವಾ, ಅವರೆಕಾಳು ಉಸುಲಿ, ಸೂಪ್, ನಿಪ್ಪಿಟ್ಟು ಹೀಗೆ ಬಗೆ ಬಗೆಯ ತಿಂಡಿಗಳು ಎಲ್ಲರನ್ನೂ ಸೆಳೆದವು.