ರಾಮನಗರ: ಜಿಲ್ಲೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಇಂದಿನ ಮೊದಲ ಪ್ರಕರಣ ರಾಮನಗರ ತಾಲ್ಲೂಕಿನ ರಾಯರದೊಡ್ಡಿಯ Rmg-17 P-6855, 54 ವರ್ಷ, ಮಹಿಳೆ ಎಂದು ತಿಳಿದು ಬಂದಿದೆ. ಇವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡನೇ ಪ್ರಕರಣ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಳ್ಳಿಯ Rmg-18 P-6856, 30 ವರ್ಷದ ಗಂಡು ಎಂದು ಗುರುತಿಸಲಾಗಿದ್ದು, ಐಎಲ್ಐ ಲಕ್ಷಣದ ಹಿನ್ನೆಲೆ ಹೊಂದಿದ್ದ ಇವರನ್ನು ಚಿಕಿತ್ಸೆಗಾಗಿ ರಾಮನಗರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು 3ನೇ ಪ್ರಕರಣ ರಾಮನಗರ ತಾಲ್ಲೂಕಿನ ಕೈಲಾಂಚ Rmg-19 P-6857, 65 ವರ್ಷದ ಮಹಿಳೆ. ಇವರನ್ನು ಕೂಡ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.