ETV Bharat / state

ರಾಮನಗರದಲ್ಲಿ ಮಹಿಳೆಯನ್ನು ಕೊಲೆ ಮಾಡಿ ನದಿಗೆ ಎಸೆದ ಹಂತಕರು! - ಮಹಿಳೆಯನ್ನು ಕೊಲೆ ಮಾಡಿ ನದಿಗೆ ಎಸೆದ ಹಂತಕರು

ಹಂತಕರು ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಿ ನದಿಗೆ ಎಸೆದು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

killers murdered the woman and threw into river  Ramanagar woman murder  Killers murder to woman in Ramanagar  ಮೃತದೇಹವನ್ನು ನದಿಗೆ ಎಸೆದ ಕೊಲೆಗಾರರು  ಮಹಿಳೆಯನ್ನ ಭೀಕರವಾಗಿ ಹತ್ಯೆ  ಮಹಿಳೆಯನ್ನು ಕೊಲೆ ಮಾಡಿ ನದಿಗೆ ಎಸೆದ ಹಂತಕರು  ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆ
ಮಹಿಳೆಯನ್ನು ಕೊಲೆ ಮಾಡಿ ನದಿಗೆ ಎಸೆದ ಹಂತಕರು
author img

By

Published : Sep 10, 2022, 1:10 PM IST

Updated : Sep 10, 2022, 1:45 PM IST

ರಾಮನಗರ: ಅವರು ಮನೆಗೆ ಆಧಾರ ಸ್ತಂಭವಾಗಿದ್ದರು. ಕಿರಾಣಿ ಅಂಗಡಿ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ ಮೇಯಲು ಬಿಟ್ಟಿದ್ದ ಹಸುಗಳನ್ನ ವಾಪಸ್ ಮನೆಗೆ ಕರೆದುಕೊಂಡು ಬರಲೆಂದು ಹೋದವರು ಶವವಾಗಿ ಪತ್ತೆಯಾಗಿದ್ದಾರೆ. ತಾಲೂಕಿನ ಅಚ್ಚಲು ಕಾಲೋನಿ ಮಹಿಳೆಯನ್ನ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೃತರನ್ನು ಅಚ್ಚಲು ಕಾಲೋನಿ ಗ್ರಾಮದ ಕೆಂಪಮ್ಮ(50) ಎಂದು ಗುರುತಿಸಲಾಗಿದೆ. ಕೆಂಪಮ್ಮನ ಗಂಡ ಕೆಂಚಪ್ಪನಿಗೆ ಒಂದು ಕಾಲು ಇಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಂಚಪ್ಪ ಆಟೋ ಓಡಿಸುತ್ತಾರೆ. ಕೆಂಪಮ್ಮ ಸಹ ಜೀವನ ಸಾಗಿಸುವುದಕ್ಕೆ ಗಂಡನಿಗೆ ಸಾಥ್​ ನೀಡುತ್ತಿದ್ದರು. ಹೀಗಾಗಿ ಕೆಂಪಮ್ಮ ಗ್ರಾಮದಲ್ಲಿ ಸಣ್ಣದಾದ ಕಿರಾಣಿ ಇಟ್ಟುಕೊಂಡು ನಾಲ್ಕೈದು ಹಸುಗಳನ್ನು ಸಾಕಿಕೊಂಡು ಬದುಕು ನಡೆಸುತ್ತಿದ್ದರು. ಪ್ರತಿದಿನ ಬೆಳಗ್ಗೆ ಗ್ರಾಮದ ಸಮೀಪವೇ ಇರುವ ಸೇನಾಪತಿ ವೈಟ್ಲೆ ಕಾರ್ಖಾನೆ ಹಿಂಭಾಗದಲ್ಲಿ ಹಸುಗಳನ್ನು ಮೇಯಲು ಬಿಡುತ್ತಿದ್ದರು.

killers murdered the woman and threw into river  Ramanagar woman murder  Killers murder to woman in Ramanagar  ಮೃತದೇಹವನ್ನು ನದಿಗೆ ಎಸೆದ ಕೊಲೆಗಾರರು  ಮಹಿಳೆಯನ್ನ ಭೀಕರವಾಗಿ ಹತ್ಯೆ  ಮಹಿಳೆಯನ್ನು ಕೊಲೆ ಮಾಡಿ ನದಿಗೆ ಎಸೆದ ಹಂತಕರು  ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆ
ಮಹಿಳೆಯನ್ನು ಕೊಲೆ ಮಾಡಿ ನದಿಗೆ ಎಸೆದ ಹಂತಕರು

ಮೃತದೇಹವನ್ನು ನದಿಗೆ ಎಸೆದ ಕೊಲೆಗಾರರು: ಹಸುಗಳನ್ನು ವಾಪಸ್ ಮನೆಗೆ ಕರೆದುಕೊಂಡು ಬರಲು ಹೋಗಿದ್ದಾರೆ. ಆದ್ರೆ ಈ ವೇಳೆ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಕೆಂಪಮ್ಮನ ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆಗೈದು, ನಂತರ ಕಿವಿಯೋಲೆ, ಮೂಗುತಿ, ತಾಳಿಯನ್ನು ಕಿತ್ತುಕೊಂಡಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ದೊಡ್ಡದಾದ ಚೀಲದಲ್ಲಿ ತುಂಬಿ ಪಕ್ಕದಲ್ಲೇ ಇದ್ದ ಆರ್ಕಾವತಿ ನದಿಗೆ ಎಸೆದು ಪರಾರಿಯಾಗಿದ್ದಾರೆ.

ಬಹಳ ಸಮಯ ಕಳೆದ್ರೂ ಮನೆಗೆ ಕೆಂಪಮ್ಮ ವಾಪಸ್​ ಬಂದಿರಲಿಲ್ಲ. ಫೋನ್​ ಕಾಲ್ ಮಾಡಿದ್ರು ಸಹ ಪಿಕ್ ಮಾಡಿರಲಿಲ್ಲ. ಹೀಗಾಗಿ ಅನುಮಾನಗೊಂಡ ಗಂಡ ಕೆಂಚಪ್ಪ ಹಾಗೂ ಕುಟುಂಬಸ್ಥರು ಕೆಂಪಮ್ಮಳನ್ನು ಹುಡುಕಿದ್ದಾರೆ. ಈ ವೇಳೆ ಹಸುಗಳು ಮಾತ್ರ ಕಂಡಿದ್ದು, ಕೆಂಪಮ್ಮರ ಸುಳಿವು ಮಾತ್ರ ಸಿಕ್ಕಿರಲಿಲ್ಲ.

ಮತ್ತೆ ಶೋಧ ನಡೆಸಿದ ಅವರಿಗೆ ಆರ್ಕಾವತಿ ನದಿಯಲ್ಲಿ ದೊಡ್ಡದಾದ ಚೀಲ ಕಂಡಿದೆ. ಅನುಮಾನಗೊಂಡು ಅದನ್ನ ತೆರೆದು ನೋಡಿದಾಗ ಕೆಂಪಮ್ಮನ ಶವ ಪತ್ತೆಯಾಗಿದೆ. ಕೂಡಲೇ ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

ಓದಿ: ತಾತನ ಕೊಲೆ ಮಾಡಿ ಜಮೀನಿನಲ್ಲೇ ಶವ ಹೂತ ಮೊಮ್ಮಗನ ಬಂಧನ

Last Updated : Sep 10, 2022, 1:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.