ರಾಮನಗರ: ಕನಕಪುರದ ಪ್ರತಿಷ್ಠಿತ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಿಂದ ನಾಪತ್ತೆ ಆಗಿದ್ದ ಮೂವರು ಮಕ್ಕಳು ಮತ್ತೆ ಮಠಕ್ಕೆ ಮರಳಿದ್ದಾರೆ.
ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ ಬಾಲಕ, ಬೆಂಗಳೂರಿನ ಬಿಡಿಎ ಲೇಔಟ್ ನಿವಾಸಿಯೊಬ್ಬರ ಪುತ್ರ, ಕೊಡ್ಲಿಪುರ ಗ್ರಾಮದ ಬಾಲಕ ನಾಪತ್ತೆಯಾಗಿದ್ದರು.
ಕನಕಪುರ ಟೌನ್‍ನಲ್ಲಿರುವ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನ. 8ರಂದು ಎಂದಿನಂತೆ ಹಾಸ್ಟೆಲ್‍ನಲ್ಲಿ ತಿಂಡಿ ಮುಗಿಸಿ ಅದೇ ಆವರಣದ ಶಾಲೆಗೆ ಎಲ್ಲಾ ಮಕ್ಕಳು ತೆರಳಿದ್ದರು. ಎಲ್ಲಾ ಮಕ್ಕಳಂತೆ 9ನೇ ತರಗತಿಯ ಈ ಮೂವರು ವಿದ್ಯಾರ್ಥಿಗಳು ಹಾಸ್ಟೆಲ್‍ನಿಂದ ಶಾಲೆಗೆ ಹೋಗಿದ್ದರು. ಆದರೆ ಆ ಮೂವರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿರಲಿಲ್ಲ.
ವಿದ್ಯಾರ್ಥಿಗಳ ನಾಪತ್ತೆ ಬಗ್ಗೆ ವಾರ್ಡನ್ ದೂರು: ಈ ಪ್ರಕರಣಕ್ಕೆ ಸಂಬಂಧಿಸಿ ನ.11 ರಂದು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ವಾರ್ಡನ್ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಈ ಸುದ್ದಿ ಮಾಧ್ಯಮಗಳಲ್ಲೂ ಭಿತ್ತರವಾಗಿತ್ತು. ಈ ಹಿನ್ನೆಲೆ ಮೂವರು ವಿದಾರ್ಥಿಗಳು ಮರಳಿ ಮಠದ ವಸತಿ ಶಾಲೆಗೆ ಬಂದಿದ್ದಾರೆ. ವಿದ್ಯಾರ್ಥಿಗಳು ನಾವು ಸ್ನೇಹಿತರ ಮನೆಗೆ ತೆರಳಿರುವ ಬಗ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪೋಷಕರು ಗದರಿದರೆಂದು ಬಳ್ಳಾರಿಯಲ್ಲಿ ಮನೆ ಬಿಟ್ಟ ಮಕ್ಕಳು ಬೆಂಗಳೂರಿನಲ್ಲಿ ಪತ್ತೆ