Jio, Aiirtel and VI Reduced Price: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಆದೇಶ ಹೊರಬಿದ್ದ ನಂತರ ಎಲ್ಲಾ ಟೆಲಿಕಾಂ ಕಂಪನಿಗಳು ಒಂದೊಂದಾಗಿ ತಮ್ಮ ಹೊಸ ವಾಯ್ಸ್ ಮತ್ತು ಎಸ್ಎಮ್ಎಸ್ ಪ್ಯಾಕ್ವುಳ್ಳ ರೀಚಾರ್ಜ್ ಪ್ಲಾನ್ಗಳನ್ನು ಪರಿಚಯಿಸುತ್ತಿವೆ. ಏರ್‌ಟೆಲ್, ಜಿಯೋ ಮತ್ತು ವೋಡಾಫೋನ್ ಐಡಿಯಾ ತಮ್ಮ ಗ್ರಾಹಕರಿಗೆ ವಾಯ್ಸ್ ಮತ್ತು ಎಸ್ಎಮ್ಎಸ್ ಪ್ಯಾಕ್ ಪಾಕ್ಯೇಜ್ ಪ್ಲಾನ್ಗಳನ್ನು ಘೋಷಿಸಿವೆ. ಟ್ರಾಯ್ನ ಈ ಆದೇಶದಿಂದ ಈಗ ಲಕ್ಷಾಂತರ ಬಳಕೆದಾರರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಕೆಲದಿನಗಳ ಹಿಂದೆ ಟೆಲಿಕಾಂ ಕಂಪನಿಗಳು ಪರಿಚಯಿಸಿದ್ದ ವಾಯ್ಸ್ ಮತ್ತು ಎಸ್ಎಮ್ಎಸ್ ಪ್ಲಾನ್ಗಳ ಬೆಲೆಗಳು ಹೆಚ್ಚಾಗಿದ್ದವು. ಹೀಗಾಗಿ ಈ ಪ್ಲಾನ್ಗಳ ಬೆಲೆಯನ್ನು ಕಡಿಮೆ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಸೂಚಿಸಿತ್ತು. ಟ್ರಾಯ್ ಸೂಚನೆ ಮೇರೆಗೆ ಏರ್ ಟೆಲ್, ವೋಡಾಫೋನ್-ಐಡಿಯಾ ಮತ್ತು ಜಿಯೋ ತಮ್ಮ ಹೊಸ ರೀಚಾರ್ಜ್ ಪ್ಲಾನ್ಗಳ ಮೊತ್ತವನ್ನು ಕಡಿತಗೊಳಿಸಿವೆ. ಅದರ ವಿವರಗಳ ಬಗ್ಗೆ ತಿಳಿಯೋಣ ಬನ್ನಿ.
ಜಿಯೋ ಹೊಸ ಕಾಲಿಂಗ್ ಪ್ಲಾನ್ಸ್: ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ರಿಲಯನ್ಸ್ ಜಿಯೋ ಟ್ರಾಯ್ನ ಇತ್ತೀಚಿನ ನಿರ್ದೇಶನಗಳನ್ನು ಅನುಸರಿಸಿ ಕಾಲಿಂಗ್ ಮತ್ತು ಎಸ್ಎಮ್ಎಸ್ ಪ್ರಿಪೇಯ್ಡ್ ಪ್ಲಾನ್ಗಳನ್ನು ಪ್ರಾರಂಭಿಸಿತ್ತು. ಈಗ ಅದರ ದರವನ್ನು ಮತ್ತೆ ಪರಿಷ್ಕರಿಸಿ ಹೊಸ ಬೆಲೆಯನ್ನು ಘೋಷಿಸಿದೆ.
ರೂ.458 ಪ್ಲಾನ್ ರೂ.448ಕ್ಕೆ ಇಳಿಕೆ: ಕೆಲವು ದಿನಗಳ ಹಿಂದೆ ಜಿಯೋ ಕಾಲಿಂಗ್, ಎಸ್‌ಎಂಎಸ್ ಪ್ಲಾನ್ ಅನ್ನು ರೂ.458 ಬೆಲೆಗೆ ಪ್ರಾರಂಭಿಸಿತ್ತು. ಈಗ ಜಿಯೋ ಕಂಪನಿ ತನ್ನ ಹೊಸ ಪ್ಲಾನ್ನ ಬೆಲೆಯನ್ನು ರೂ.10 ಕಡಿಮೆಗೊಳಿಸಿ ರೂ.448ಕ್ಕೆ ಪರಿಚಯಿಸಿದೆ.
ಆದರೆ ಕಂಪನಿ ಈ ಪ್ಲಾನ್ನ ಉದ್ದೇಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಪ್ಲಾನ್ನಲ್ಲಿ ಅನ್‌ಲಿಮಿಟೆಡ್ ಕಾಲಿಂಗ್, 1000 ಎಸ್ಎಮ್ಎಸ್ ಸೌಲಭ್ಯಗಳನ್ನು ಒದಗಿಸುತ್ತದೆ. ಇದರ ವ್ಯಾಲಿಡಿಟಿ 84 ದಿನಗಳು. ಇವುಗಳ ಜೊತೆಗೆ ಈ ಪ್ಲಾನ್‌ನೊಂದಿಗೆ ಬಳಕೆದಾರರು ಜಿಯೋ ಸಿನಿಮಾ, ಜಿಯೋ ಆಪ್, ಜಿಯೋ ಕ್ಲೌಡ್ ಬೆನಿಫಿಟ್ಸ್ ಅನ್ನು ಸಹ ಪಡೆಯಬಹುದಾಗಿದೆ.
ರೂ. 1958 ಪ್ಲಾನ್ ರೂ.1748ಕ್ಕೆ ಇಳಿಕೆ: ಕೆಲವು ದಿನಗಳ ಹಿಂದೆ ಜಿಯೋ ಹೊಸದಾಗಿ ಆರಂಭಿಸಿದ ಕಾಲಿಂಗ್ ಪ್ಲಾನ್ ಲಿಸ್ಟ್ನಲ್ಲಿ 365 ದಿನಗಳ ವ್ಯಾಲಿಡಿಟಿ ಪ್ಲಾನ್ ಅನ್ನು ರೂ.1958ಕ್ಕೆ ಆರಂಭಿಸಿತ್ತು. ಆದರೆ ಈಗ ಕಂಪನಿಯ ಈ ಪ್ಲಾನ್ನ ಬೆಲೆಯನ್ನು ಸಹ ಕಡಿತಗೊಳಿಸಿದೆ. ಬರೋಬ್ಬರಿ 210 ರೂಪಾಯಿಗಳನ್ನು ಕಡಿಮೆ ಮಾಡಿದೆ. ಈಗ ಈ ಪ್ಲಾನ್ನ ಬೆಲೆ 1748 ರೂ. ಆಗಿದೆ. ಆದ್ರೆ ಜಿಯೋ ಈ ಯೋಜನೆ ಸಿಂಧುತ್ವವನ್ನು 365 ದಿನಗಳಿಂದ 336 ದಿನಗಳಿಗೆ ಇಳಿಸಿದೆ. ಅಂದರೆ ಜಿಯೋ ಈ ಹೊಸ ರೂ.1748ಕಿ ಕಾಲಿಂಗ್ ಯೋಜನೆ 336 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಕಾಲಿಂಗ್, ಒಟ್ಟು 3,600 ಎಸ್‌ಎಂಎಸ್‌ಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಈ ಯೋಜನೆಯೊಂದಿಗೆ ಗ್ರಾಹಕರು ಜಿಯೋ ಟಿವಿ, ಜಿಯೋ ಸಿನಿಮಾ (ನಾನ್-ಪ್ರೀಮಿಯಂ), ಜಿಯೋ ಕ್ಲೌಡ್ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.
ಏರ್‌ಟೆಲ್ ನ್ಯೂ ಕಾಲಿಂಗ್ ಪ್ಲಾನ್: ಟ್ರಾಯ್ನ ಆದೇಶಕ್ಕೆ ತಲೆ ಬಾಗಿದ ಏರ್‌ಟೆಲ್ ಸಹ ತನ್ನ ಬಳಕೆದಾರರಿಗಾಗಿ ಎರಡು ಹೊಸ ರೀಚಾರ್ಜ್ ಪ್ಲಾನ್ಗಳನ್ನು ಪರಿಚಯಿಸಿತ್ತು. ಆದರೆ ಈಗ ಏರ್‌ಟೆಲ್ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ರೂ.499 ಪ್ಲಾನ್ ರೂ. 469ಕ್ಕೆ ಕಡಿಮೆ: ಏರ್‌ಟೆಲ್ ತನ್ನ 499 ರೂ. ಕಾಲಿಂಗ್ ಪ್ಲಾನ್ನ ಬೆಲೆಯನ್ನು 469 ರೂ.ಗಳಿಗೆ ಇಳಿಸಿದೆ. ಏರ್‌ಟೆಲ್ ಈ ಪ್ಲಾನ್ನಲ್ಲಿ 30 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಪ್ಲಾನ್ನಲ್ಲಿ ಬಳಕೆದಾರರು 84 ದಿನಗಳ ಸಿಂಧುತ್ವ, ಅನ್‌ಲಿಮಿಟೆಡ್ ಕಾಲ್ಸ್ ಮತ್ತು 900 ಉಚಿತ ಎಸ್ಎಮ್ಎಸ್ಗಳ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಡೇಟಾದ ಪ್ರಯೋಜನ ಸಿಗುವುದಿಲ್ಲ. ಆದ್ರೆ ಈ ಯೋಜನೆಯೊಂದಿಗೆ ಬಳಕೆದಾರರು ಅಪೊಲೊ 24/7 ಸರ್ಕಲ್ ಮೆಂಬರ್ಶಿಪ್ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್ಸ್ ಅನ್ನು ಸಹ ಪಡೆಯುತ್ತಾರೆ.
ಏರ್‌ಟೆಲ್‌ನ 1849 ರೂ. ಪ್ಲಾನ್: ಏರ್‌ಟೆಲ್ ತನ್ನ 1959 ರೂ. ಯೋಜನೆಯ ಬೆಲೆಯನ್ನು 1849 ರೂ.ಗಳಿಗೆ ಬದಲಾಯಿಸಿದೆ. ಏರ್‌ಟೆಲ್ ಈ ಪ್ಲಾನ್ನಲ್ಲಿ ಒಟ್ಟು 110 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಯೋಜನೆಯಲ್ಲಿ ಬಳಕೆದಾರರು 365 ದಿನಗಳ ಮಾನ್ಯತೆ ಜೊತೆ ಅನ್‌ಲಿಮಿಟೆಡ್ ಕಾಲ್ಸ್ ಮತ್ತು 3600 ಉಚಿತ ಎಸ್ಎಮ್ಎಸ್ ಲಾಭವನ್ನು ಪಡೆಯಲಿದ್ದಾರೆ. ಈ ಪ್ಲಾನ್ನಲ್ಲಿ ಬಳಕೆದಾರರಿಗೆ ಡೇಟಾದ ಪ್ರಯೋಜನ ಸಿಗುವುದಿಲ್ಲ. ಇದಲ್ಲದೇ ಈ ಪ್ಲಾನ್ ಜೊತೆ ಬಳಕೆದಾರರು ಅಪೊಲೊ 24/7 ಸರ್ಕಲ್ ಮೆಂಬರ್ಶಿಪ್ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್‌ಗಳನ್ನು ಸಹ ಪಡೆಯುತ್ತಾರೆ.
ವೊಡಾಫೋನ್-ಐಡಿಯಾ ಕಾಲಿಂಗ್ ಪ್ಲಾನ್: ಟ್ರಾಯ್ ಮಾರ್ಗಸೂಚಿಗಳ ಪ್ರಕಾರ ವೋಡಾಫೋನ್ - ಐಡಿಯಾ ಸಹ ಹೊಸ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿತ್ತು. ಈ ಪ್ಲಾನ್ ಅಡಿಯಲ್ಲಿ ಗ್ರಾಹಕರು ಕಾಲಿಂಗ್ ಮತ್ತು ಎಸ್ಎಮ್ಎಸ್ಗೆ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಆದ್ರೆ ಟ್ರಾಯ್ ಆದೇಶದ ಬಳಿಕ ವೋಡಾಫೋನ್-ಐಡಿಯಾ ಸಹ ತನ್ನ ಹೊಸ ಪ್ಲಾನ್ನ ದರದಲ್ಲಿ ಬದಲಾವಣೆ ಮಾಡಿದೆ.
1460 ರೂ. ಪ್ಲಾನ್ ಬಂದ್: ಟ್ರಾಯ್ ಸೂಚನೆಗಳ ಪ್ರಕಾರ ವೋಡಾಫೋನ್ - ಐಡಿಯಾ ಅಂದರೆ ವಿಐ ಕಾಲಿಂಗ್, ಎಸ್ಎಮ್ಎಸ್ ಪ್ಲಾನ್ ಅನ್ನು 1460 ರೂ.ಗೆ ಪರಿಚಯಿಸಿತ್ತು. ಆದ್ರೆ ವಿಐ ಇದನ್ನು ಬಂದ್ ಮಾಡಿ ಮತ್ತೆರೆಡು ಹೊಸ ಪ್ಲಾನ್ಗಳನ್ನು ಘೋಷಿಸಿದೆ.
1849 ರೂ. ಪ್ಲಾನ್ ವಿಶೇಷತೆವೇನು?: ಟ್ರಾಯ್ನ ಆದೇಶದ ಮೇರೆಗೆ ವಿಐ ರೂ. 1849 ಪ್ಲಾನ್ ಅನ್ನು ತಮ್ಮ ಗ್ರಾಹಕರಿಗೆ ಪರಿಚಯಿಸಿದೆ. ಈ ಯೋಜನೆಯಡಿಯಲ್ಲಿ ಗ್ರಾಹಕರು ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಜೊತೆಗೆ 3600 ಎಸ್ಎಮ್ಎಸ್ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಯೋಜನೆ 365 ದಿನಗಳ ಸಿಂಧುತ್ವವನ್ನು ಹೊಂದಿದೆ. ಕಂಪನಿ ಈ ಯೋಜನೆಗೆ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಿಲ್ಲ ಎಂಬುದು ಗಮನಾರ್ಹ. ಅಷ್ಟೇ ಅಲ್ಲ ಹೆಚ್ಚುವರಿಯಾಗಿ ಕಂಪನಿ ಈ ಯೋಜನಾ ಮಿತಿಯನ್ನು ಮೀರಿದಾಗ ಸ್ಥಳೀಯ ಸಂದೇಶಗಳಿಗೆ 1 ರೂ. ಮತ್ತು STD ಸಂದೇಶಗಳಿಗೆ 1.5 ರೂ. ಶುಲ್ಕ ವಿಧಿಸಲಿದೆ.
470 ರೂ. ಪ್ಲಾನ್ ವಿಶೇಷತೆವೇನು?: ವಿಐ ತನ್ನ ಗ್ರಾಹಕರಿಗೆ ರೂ. 470ರ ಪ್ಲಾನ್ ಪರಿಚಯಿಸಿದೆ. ಈ ಯೋಜನೆಯಡಿ ಗ್ರಾಹಕರು ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಜೊತೆಗೆ 900ಎಸ್ಎಮ್ಎಸ್ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಯೋಜನೆ 84 ದಿನಗಳ ಸಿಂಧುತ್ವವನ್ನು ಹೊಂದಿದೆ. ಕಂಪನಿ ಈ ಯೋಜನೆಗೂ ಸಹ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಿಲ್ಲ. ಅಷ್ಟೇ ಅಲ್ಲ ಹೆಚ್ಚುವರಿಯಾಗಿ ಕಂಪನಿ ಈ ಯೋಜನಾ ಮಿತಿಯನ್ನು ಮೀರಿದಾಗ ಸ್ಥಳೀಯ ಸಂದೇಶಗಳಿಗೆ 1 ರೂ. ಮತ್ತು STD ಸಂದೇಶಗಳಿಗೆ 1.5 ರೂ. ಶುಲ್ಕ ವಿಧಿಸಲಿದೆ.
ಓದಿ: ಟ್ರಾಯ್ಗೆ ಮತ್ತೆ ತಲೆಬಾಗಿದ ಏರ್‌ಟೆಲ್, ಹೊಸ ರೀಚಾರ್ಜ್ ಪ್ಲಾನ್ಗಳ ದರ ಇಳಿಸಿದ ಟೆಲಿಕಾಂ ಕಂಪನಿ