ETV Bharat / state

ಕಳ್ಳತನ ತಡೆಯಲು ಬಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು - ರಾಮನಗರ ಕ್ರೈಮ್​​ ಲೇಟೆಸ್ಟ್ ನ್ಯೂಸ್

ನಿನ್ನೆ ತಡರಾತ್ರಿ ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ದರೋಡೆಕೋರರು ಮನೆಗಳಲ್ಲಿ ದಡೋರೆ ನಡೆಸಿದ್ದಲ್ಲದೇ, ಇದನ್ನು ತಡೆಯಲು ಬಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.

Robber  attacked  a man
ಕಳ್ಳತನ ತಡೆಯಲು ಬಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು
author img

By

Published : Mar 23, 2020, 1:31 PM IST

ರಾಮನಗರ: ಹೊಸದೊಡ್ಡಿ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ದರೋಡೆಕೋರರು ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಮೂವತ್ತು ಸಾವಿರ ರೂ ಹಣ ಕಿತ್ತು ಪರಾರಿಯಾಗಿರುವ ಘಟನೆ ನಡೆದಿದೆ.

ಕಳ್ಳತನ ತಡೆಯಲು ಬಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು

ತಾಲೂಕಿನ ಕೈಲಾಂಚ ಹೋಬಳಿಯ ಹೊಸದೊಡ್ಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಮನೆಗಳಿಗೆ ನುಗ್ಗಿದ ದರೋಡೆಕೋರರು ಕೆಂಪಾಜಮ್ಮ ಎಂಬ ವೃದ್ಧೆಯ ಮಾಂಗಲ್ಯ ಸರ ಕಳ್ಳತನ ಮಾಡಲು ಯತ್ನಿಸಿದ್ದಾರೆ.ಬಳಿಕ ಅದೇ ಗ್ರಾಮದ ಮತ್ತೊಂದು ಕೇರಿಯಲ್ಲಿಯ ಮೋಟಪ್ಪ ಹಾಗೂ ಸಿದ್ದಪ್ಪಾಜಿ ಎಂಬುವರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಈ ವೇಳೆ ಸಿದ್ದಪ್ಪಾಜಿ ಎಂಬಾತ ಅಡ್ಡ ಬಂದಿದ್ದರಿಂದ ಆತನ ಮೇಲೆ ಮಾರಣಾಂತಿಕವಾಗಿ‌ ಹಲ್ಲೆ ನಡೆಸಿದ್ದಾರೆ. ಗಂಭಿರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಬೆಂಗಳೂರಿನ‌ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಖದೀಮರು, ಗ್ರಾಮದ ಬಂದೂಕಾರಲಿಂಗೇಶ್ವರ ದೇವಾಲಯಕ್ಕೆ ನುಗ್ಗಿ ಹುಂಡಿ ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ‌‌ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಆರಂಬಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.