ETV Bharat / state

ಹಿಂದೂಗಳ ಹಿತದೃಷ್ಟಿಯಿಂದ ಪಕ್ಷೇತರನಾಗಿ ಚುನಾವಣೆಗೆ ಸಿದ್ಧ: ಪ್ರಮೋದ್ ಮುತಾಲಿಕ್

ಹಿಂದುತ್ವಕ್ಕೆ ನ್ಯಾಯ ಕೊಡಿಸಲು ನಾನು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲುವುದು ಖಚಿತ. ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸಬೇಕು. 5 ಕ್ಷೇತ್ರದಲ್ಲಿ ಸರ್ವೇ ನಡೆಯುತ್ತಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಇದನ್ನು ಸ್ಪಷ್ಟಪಡಿಸುವುದಾಗಿ ಪ್ರಮೋದ್ ಮುತಾಲಿಕ್​​ ತಿಳಿಸಿದರು.

Pramod Muthalik Ready for Election
ಚುನಾವಣೆಗೆ ಸಿದ್ಧರಾದ ಪ್ರಮೋದ್ ಮುತಾಲಿಕ್
author img

By

Published : Nov 23, 2022, 2:11 PM IST

Updated : Nov 23, 2022, 3:31 PM IST

ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ರಾಮನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಹಿತದೃಷ್ಟಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿಗೆ ಒಂದೇ ಒಂದು ಹಿಂದೂ ಕಾರ್ಯಕರ್ತರ ರೌಡಿ ಶೀಟರ್ ರದ್ದು ಮಾಡಲಾಗಿಲ್ಲ. ಹಿಂದೆ ಕಾಂಗ್ರೆಸ್​ನವರು ಗೋರಕ್ಷಣೆ ಮಾಡಿದವ್ರನ್ನೂ ಕೂಡ ರೌಡಿ ಶೀಟರ್ ಅಂದ್ರು. ಹಾಗಾಗಿ ಹಿಂದುತ್ವಕ್ಕೆ ನ್ಯಾಯ ಕೊಡಿಸಲು ನಾನು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲುವುದು ಖಚಿತ. ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸಬೇಕು. 5 ಕ್ಷೇತ್ರದಲ್ಲಿ ಸರ್ವೇ ನಡೆಯುತ್ತಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಇದನ್ನು ಸ್ಪಷ್ಟಪಡಿಸುವುದಾಗಿ ತಿಳಿಸಿದರು.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಇದಲ್ಲದೇ 25 ಹಿಂದೂವಾದಿಗಳು ಈ ಬಾರಿ ಕಣಕ್ಕೆ ಇಳಿಯುತ್ತಿದ್ದು, 25 ಸೀಟ್​ಗಳನ್ನು ಹಿಂದುತ್ವವಾದಿಗಳಿಗೆ ಕೊಡಬೇಕು ಅಂತ ಬಿಜೆಪಿಯಲ್ಲಿ ಕೇಳಿಕೊಂಡಿದ್ದೇವೆ. ಆದರೆ ಅವರು ಕೊಟ್ಟಿಲ್ಲ. ಹಾಗಾಗಿ ಸ್ವತಂತ್ರವಾಗಿ ಹಿಂದೂವಾದಿಗಳು ಚುನಾವಣಾ ಕಣಕ್ಕೆ ಇಳಿಯುತ್ತೇವೆ ಎಂದು ಇದೇ ವೇಳೆ ಮುತಾಲಿಕ್ ಹೇಳಿದ್ದಾರೆ.

ಯೇಸು ಪ್ರತಿಮೆ: ರಾಮನಗರ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಮತಾಂತರ ಚಟುವಟಿಕೆ ನಡೆಯುತ್ತಿದೆ. ಕನಕಪುರ ತಾಲೂಕಿನ ಕಪಾಲಿ ಬೆಟ್ಟದಲ್ಲಿ ಎಲ್ಲೂ ಇಲ್ಲದ ಯೇಸು ಪ್ರತಿಮೆಯನ್ನು ಮಾಡಲು ಹೊರಟಿದ್ರು‌. ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು 116 ಅಡಿಯ ಯೇಸು ಪತ್ರಿಮೆ ಮಾಡಲು ಹೊರಟಿದ್ದಾರೆ. ಬಿಜೆಪಿ ಸರ್ಕಾರ ಏನು ಮಾಡುತ್ತಿದೆ. ಇಲ್ಲಿನ ಡಿಸಿ, ಎಸ್ಪಿ, ತಹಶೀಲ್ದಾರ್​, ರಾಜಕಾರಣಿಗಳ ಪರವಾಗಿ ಹಾಗೆ ಕೆಲಸ ಮಾಡುವುದನ್ನು ಬಿಟ್ಟು ಸಮಾಜದ ಒಳಿತಿಗಾಗಿ ಸೇವೆ ಮಾಡಬೇಕು. ರಾಮನಗರ ಎಸ್ಪಿ ಹತ್ತು ಬಾರಿ ಕರೆ ಮಾಡಿದ್ರೂ ಎಸ್ಪಿ ಫೋನ್ ತೆಗೆಯುವುದಿಲ್ಲ. ನಾಳೆ ಜಿಲ್ಲೆಯಲ್ಲಿ ಅನಾಹುತ ಆದ್ರೆ ಅದಕ್ಕೆ ನೀವೇ ಹೊಣೆ ಹೊರತು, ನಾವಲ್ಲ. ಹಾಗೆಯೇ ಈ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮತಾಂತರ ಆಗುತ್ತಿದೆ ಎನ್ನುವುದು ಪೊಲೀಸರಿಗೆ ಗೊತ್ತಿದೆ. ಈಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜಾಮೀನು ಮೇಲೆ ಹೊರ ಬಂದಿದ್ದ ವ್ಯಕ್ತಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ನಾಚಿಕೆ ಆಗಬೇಕು. ವಿರೋಧ ಪಕ್ಷಗಳು ಜಾಗೃತರಾಗಬೇಕು. ರಾಜಕೀಯ ಮಾಡುವುದನ್ನು ಬಿಟ್ಟು ಭಯೋತ್ಪಾದಕರ ವಿರುದ್ಧ ದೇಶಕ್ಕಾಗಿ ಒಂದಾಗಬೇಕು. ನಿಮ್ಮ ಪಕ್ಷದೊಳಗೂ ಭಯೋತ್ಪಾದಕರು ಇದ್ದಾರೆ, ಮೊದಲು ಅದನ್ನು ಮಟ್ಟ ಹಾಕಿ ಎಂದು ಮುತಾಲಿಕ್​ ಆಗ್ರಹಿಸಿದರು. ಘಟನೆ ನಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು‌.‌ ಆದರೆ ಈ ಕೃತ್ಯವನ್ನು ರಾಜಕೀಯ ಲಾಭಕ್ಕೋಸ್ಕರ ಇಟ್ಟುಕೊಂಡಿದ್ದಾರೆಂದು ಆರೋಪಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನ ಒಬ್ಬರು ಸಿಎಂ ಆಗುವ ತಿರುಕನ ಕನಸು ಕಾಣ್ತಿದ್ದಾರೆ: ಸಿದ್ದರಾಮಯ್ಯಗೆ ಬಿಎಸ್​ವೈ ಟಾಂಗ್

ಎಸ್​ಡಿಪಿಐ ಇದ್ದರೆ ಬಿಜೆಪಿಗೆ ಲಾಭವಾಗಲಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಹೌದು, ಮುಸ್ಲಿಂ ಮತ ಪಡೆಯುವುದಕ್ಕೆ ರಾಜಕೀಯ ಲಾಭ ಮಾಡಲು ಬಿಜೆಪಿ ಎಸ್​ಡಿಪಿಐ ಬ್ಯಾನ್ ಮಾಡದೇ ಇರಬಹುದು. ದಾಖಲೆ ಸಮೇತ ಕೊಟ್ಟರೆ 24 ಗಂಟೆಯಲ್ಲಿ ಬ್ಯಾನ್ ಆಗಲಿದೆ. ದೇಶದ್ರೋಹಿ ಸಂಘಟನೆ ಎಸ್​ಡಿಪಿಐ ಬ್ಯಾನ್ ಆಗಲೇಬೇಕು. ಇದೊಂದು ಕ್ಯಾನ್ಸರ್ ಸಂಘಟನೆಯಾಗಿದ್ದು, ಈ ಕೂಡಲೇ ಸಂಘಟನೆಯನ್ನು ಬ್ಯಾನ್ ಮಾಡಿ ಎಂದು ಒತ್ತಾಯಿಸಿದರು.

Last Updated : Nov 23, 2022, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.