ETV Bharat / state

ಏನ್ರೀ ಇದು, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೇ ಕರ್ತವ್ಯಕ್ಕೆ ಹಾಜರಾಗ್ತಿಲ್ಲ.. - ಕೊರೊನಾ ವೈರಸ್​

ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ, ಜಿಲ್ಲಾಸ್ಪತ್ರೆಯ 15 ಸರ್ಕಾರಿ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಅಸಡ್ಡೆ ತೋರಿದ್ದಾರೆ. ಬಹುತೇಕ ವೈದ್ಯರು ಬೆಂಗಳೂರಿನಿಂದ ಬಂದು ಹೋಗುತ್ತಾರೆ.

ramanagara-district-hospital-doctors-absent-to-duty
ರಾಮನಗರ ಜಿಲ್ಲಾಸ್ಪತ್ರೆ
author img

By

Published : Mar 29, 2020, 9:58 PM IST

ರಾಮನಗರ : ರಾಜ್ಯದಲ್ಲಿ ಕೊರೊನಾ ಮಹಾಮಾರಿ‌ ತಾಂಡವವಾಡುತ್ತಿದೆ. ಸೋಂಕಿತರ​ ರಕ್ಷಣೆಗೆ ಈಗ ವೈದ್ಯರ ಸೇವೆ ಅತ್ಯಾವಶ್ಯಕ. ಆದರೆ, ಕೆಲವು ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ. ವಿಶೇಷವಾಗಿ ರಾಮನಗರ‌ ಜಿಲ್ಲಾ ಕೇಂದ್ರದಲ್ಲೇ ಸುಮಾರು18 ಮಂದಿ‌ ಕರ್ತವ್ಯಕ್ಕೆ‌ ಗೈರಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ‌ ಶಂಕಿತರ ಸಂಖ್ಯೆ ಹೆಚ್ಚಾಗಿದೆ. ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ, ಜಿಲ್ಲಾಸ್ಪತ್ರೆಯ 15 ಸರ್ಕಾರಿ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಅಸಡ್ಡೆ ತೋರಿದ್ದಾರೆ. ಬಹುತೇಕ ವೈದ್ಯರು ಬೆಂಗಳೂರಿನಿಂದ ಬಂದು ಹೋಗುತ್ತಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲೂ ಕರ್ತವ್ಯಕ್ಕೆ ಹಾಜರಾಗದೇ ಅಸಡ್ಡೆ ತೋರಿದ್ದು ನಿಜಕ್ಕೂ ವಿಪರ್ಯಾಸ.

ಜಿಲ್ಲಾಸ್ಪತ್ರೆ ವೈದ್ಯರೇ ಕರ್ತವ್ಯಕ್ಕೆ ಗೈರು..

ಒಟ್ಟು 26 ಜನ ವೈದ್ಯರಲ್ಲಿ 8 ಜನ ವೈದ್ಯರು ಮಾತ್ರ ಹಾಜರಾಗಿದ್ದಾರೆ. ಅದರಲ್ಲೂ ಕೆಲವರು ಹಾಜರಾತಿಗೆ ಸಹಿ ಹಾಕಿ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ. ರಾತ್ರಿ ಡ್ಯೂಟಿಗೆ ಮೂವರು ವೈದ್ಯರ ನಿಯೋಜನೆ ಮಾಡಲಾಗಿತ್ತು‌. ಆ ವೈದ್ಯರು ಬಾರದೇ ಇದ್ದದ್ದು ಜಿಲ್ಲಾಸ್ಪತ್ರೆ ಸರ್ಜನ್​ಗೆ ಮಾಹಿತಿ ಇಲ್ಲ ಎನ್ನುತ್ತಾರೆ‌.

ಮಾಧ್ಯಮದವರು ಹೋಗಿ ಪರಿಶೀಲನೆ ನಡೆಸಿದ ನಂತರ ಸರ್ಜನ್ ಮಾಹಿತಿ ಪಡೆದುಕೊಂಡಿದ್ದಾರೆ. ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡುವುದಾಗಿ ಜಿಲ್ಲಾಸ್ಪತ್ರೆ ಪ್ರಭಾರ ಸರ್ಜನ್ ಡಾ. ಪದ್ಮಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.