ETV Bharat / state

ರಾಮನಗರ ಜಿಲ್ಲೆಯಲ್ಲಿ ಉತ್ತಮ ಹಿಂಗಾರು ಮಳೆ: ರೈತರಲ್ಲಿ ಸಂತಸ

ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಹಿಂಗಾರು ಮಳೆಯಾಗಿದ್ದು, ರಾಗಿ ಮತ್ತು ಭತ್ತ ಬಿತ್ತನೆ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗಿದೆ.

author img

By

Published : Oct 20, 2019, 10:08 AM IST

ರಾಮನಗರ ಜಿಲ್ಲೆಯಲ್ಲಿ ಉತ್ತಮ ಹಿಂಗಾರು ಮಳೆ

ರಾಮನಗರ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಹಿಂಗಾರು ಮಳೆಯಾಗಿದ್ದು, ಈ ಭಾಗದ ರೈತರು ಹರ್ಷಗೊಂಡಿದ್ದಾರೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿರುವ ಹಿನ್ನೆಲೆ ಪ್ರಮುಖವಾಗಿ ರಾಗಿ, ಭತ್ತದ ಬೆಳೆಗಳಲ್ಲಿ ಉತ್ತಮ ಫಸಲನ್ನು ನಿರೀಕ್ಷಿಸಲಾಗಿದೆ.

ರಾಮನಗರ ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಉತ್ತಮ ಮಳೆಯಾಗಿದ್ದು, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಕ್ಷೇತ್ರದಲ್ಲಿ ಸಾಕಷ್ಟು ಮಳೆಯಾಗಿದೆ. ಆಗಸ್ಟ್‌ನಿಂದ ಅಕ್ಟೋಬರ್​​ವರೆಗೆ 447 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಇಲ್ಲಿಯವೆರೆಗೆ 450 ಮಿ.ಮೀ. ಮಳೆಯಾಗುವ ಮೂಲಕ ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಮಾಡುವುದಕ್ಕೆ ಅನುಕೂಲವಾಗಿದೆ. ಈ ಬಗ್ಗೆ ಮಾತನಾಡಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಜುಲೈ ತಿಂಗಳಲ್ಲಿ ಮಳೆಯ ಕೊರತೆ ಎದುರಾಗಿತ್ತು. ಆದರೆ ನಂತರದ ದಿನಗಳಲ್ಲಿ ಎಲ್ಲವೂ ಸರಿ ಹೋಗಿದೆ ಎಂದಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಉತ್ತಮ ಹಿಂಗಾರು ಮಳೆ

ಜಿಲ್ಲೆಯಲ್ಲಿ ಮಳೆಯಾಗಿರುವ ಸರಾಸರಿ:

ರಾಮನಗರ - 82%

ಚನ್ನಪಟ್ಟಣ - 78%
ಕನಕಪುರ - 75%
ಮಾಗಡಿ - 86%

ರಾಮನಗರ ಜಿಲ್ಲೆಯಲ್ಲಿ ರಾಗಿ ಮತ್ತು ಭತ್ತದ ಬಿತ್ತನೆ ಪ್ರಮಾಣ:
ಒಟ್ಟು - 1.14 ಲಕ್ಷ ಹೆಕ್ಟೇರ್ ರಾಗಿ ಬಿತ್ತನೆ ಗುರಿ ಇತ್ತು, ಸದ್ಯಕ್ಕೆ 90.771 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ
ಅಂದರೆ ಜಿಲ್ಲೆಯಲ್ಲಿ ಒಟ್ಟು ಶೇ. 80ರಷ್ಟು ರಾಗಿ ಬಿತ್ತನೆ ಕಾರ್ಯ ನಡೆದಿದೆ.
ಭತ್ತ ಒಟ್ಟು - 5.600 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಬೇಕಿತ್ತು. ಈವರೆಗೆ ಭತ್ತ - 4.251 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ.

Intro:Body:ರಾಮನಗರ : ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಹಿಂಗಾರು ಮಳೆಯಾಗಿದ್ದು ಈ ಭಾಗದ ರೈತರು ಫುಲ್ ಹ್ಯಾಪಿಯಾಗಿದ್ದಾರೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿರುವ ಹಿನ್ನೆಲೆ ರೈತರು ಈ ಬಾರಿ ಪ್ರಮುಖವಾಗಿ ರಾಗಿ, ಬತ್ತದ ಬೆಳೆಗಳಲ್ಲಿ ಉತ್ತಮ ಫಸಲನ್ನ ತೆಗೆಯುವುದಕ್ಕೆ ಉತ್ಸುಕರಾಗಿದ್ದಾರೆ.
ರಾಮನಗರ ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಉತ್ತಮ ಮಳೆಯಾಗಿದ್ದು ಜಿಲ್ಲೆಯಲ್ಲಿರುವ ರೈತರು ಸಂತೃಪ್ತಿಯಾಗಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿದ್ದು ಈ ಬಾರಿ ರಾಗಿ ಹಾಗೂ ಬತ್ತದ ಬೆಳೆಗಳಲ್ಲಿ ಉತ್ತಮವಾಗಿ ಫಸಲನ್ನ ತೆಗೆಯುವುದಕ್ಕೆ ಕಾತುರರಾಗಿದ್ದಾರೆ. ಆಗಸ್ಟ್‌ನಿಂದ ಅಕ್ಟೋಬರ್‌ನ ಇಲ್ಲಿಯವರೆಗೆ ೪೪೭ ಮಿ.ಮೀ ಮಳೆಯಾಗಬೇಕಿತ್ತು. ಆದರೆ ಇಲ್ಲಿಯವೆರೆಗೆ ೪೫೦ ಮಿ.ಮೀ ಮಳೆಯಾಗುವ ಮೂಲಕ ಜಿಲ್ಲೆಯ ರೈತರು ಉತ್ತಮ ಬೇಸಾಯ ಕಾರ್ಯ ಮಾಡುವುದಕ್ಕೆ ಅನುಕೂಲವಾಗಿದೆ. ಈ ಬಗ್ಗೆ ಮಾತನಾಡಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಜುಲೈ ತಿಂಗಳಲ್ಲಿ ಕೊಂಚ ಮಳೆಯ ಕೊರತೆ ಎದುರಾಗಿತ್ತು, ಆದರೆ ನಂತರದ ದಿನಗಳಲ್ಲಿ ಎಲ್ಲವೂ ಸರಿಹೋಗಿದೆ ಎಂದು ತಿಳಿಸಿದ್ದಾರೆ.

ಕೆ.ಎಚ್.ರವಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ

ಇನ್ನು ಕಳೆದ ಮೂರು ತಿಂಗಳಿನಿಂದ ನಮ್ಮ ಜಿಲ್ಲೆಗೆ ಉತ್ತಮ ಮಳೆಯಾಗಿದೆ. ಹಾಗಾಗಿ ರಾಗಿ, ಬತ್ತದ ಬೆಳೆಗಳಲ್ಲಿ ಈ ಬಾರಿ ಒಳ್ಳೆಯ ಫಸಲನ್ನ ತೆಗೆಯುವುದಕ್ಕೆ ಸಿದ್ಧರಾಗಿದ್ದೇವೆಂದು ರೈತ ಮುಖಂಡರು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಉತ್ತಮ ಮಳೆಯಾಗಿದೆ, ಮುಂದಿನ ಒಂದು ತಿಂಗಳುಗಳ ಕಾಲ ಇದೇ ರೀತಿ ಮಳೆಯಾದ್ರೆ ಫಸಲು ನಮ್ಮ ಕೈಸೇರಲಿದೆ ಎಂದು ಸಂತಸ ವ್ಯಕ್ತಪಡಿಸಿದರು
ಒಟ್ಟಾರೆ ಈ ಬಾರಿ ರಾಮನಗರ ಜಿಲ್ಲೆಗೆ ಉತ್ತಮ ಮಳೆಯಾಗಿದ್ದು ರೈತರು ಕೂಡ ರಾಗಿ ಮತ್ತು ಬತ್ತದ ಬೆಳೆಗಳಲ್ಲಿ ಉತ್ತಮ ಫಸಲನ್ನ ತೆಗೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದಕ್ಕೆ ಮುಂದಿನ ಒಂದು ತಿಂಗಳು ಕೂಡ ಉತ್ತಮ ಮಳೆಯಾಗಬೇಕಿದೆ.
ಜಿಲ್ಲೆಯಲ್ಲಿ ಒಟ್ಟು - ೧.೧೪ ಲಕ್ಷ ಹೆಕ್ಟೇರ್ ರಾಗಿ ಬಿತ್ತನೆ ಗುರಿ ಇತ್ತು, ಸದ್ಯಕ್ಕೆ ೯೦.೭೭೧ ಹೆಕ್ಟೇರ್ ಪ್ರದೇಶ ರಾಗಿ ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು ಶೇ.೮೦ % ಬಿತ್ತನೆ ಕಾರ್ಯನಡೆದಿದೆ
ಜಿಲ್ಲೆಯಲ್ಲಿ ಬತ್ತ ಒಟ್ಟು - ೫.೬೦೦ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಬೇಕಿತ್ತು
ಈವರೆಗೆ ಬತ್ತ - ೪.೨೫೧ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ

ಜಿಲ್ಲೆಯಲ್ಲಿ ಮಳೆಯಾಗಿರುವ ಸರಾಸರಿ

ರಾಮನಗರ - ೮೨%, ಚನ್ನಪಟ್ಟಣ - ೭೮%, ಕನಕಪುರ - ೭೫%, ಮಾಗಡಿ - ೮೬% ಮಳೆಯ ಪ್ರಮಾಣ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.