ETV Bharat / state

'ಬಿಜೆಪಿ ಮುಖಂಡ ಕಮಲ್‌ ಪಂತ್‌ಗೆ ಮಾಡಿದ ಅವಮಾನದಿಂದಾಗಿ ಪಿಎಸ್ಐ ಅಕ್ರಮ ಹೊರಬಂತು' - psi recrutiment scam hd kumaraswamy reaction

ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿವಾದಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್​​ ಸಿಡಿಸಿದ್ದಾರೆ.

hd kumaraswamy
ಹೆಚ್‌.ಡಿ.ಕುಮಾರಸ್ವಾಮಿ
author img

By

Published : May 4, 2022, 12:19 PM IST

ರಾಮನಗರ: ಪಿಎಸ್​​ಐ ಹಗರಣದ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ. ಪೊಲೀಸ್ ಇಲಾಖೆಯಿಂದಲೇ ಅಕ್ರಮ ಬಯಲಾಗಿದೆ. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ದೊಡ್ಡ ಕಥೆ ಇದೆ. ಕಾಂಗ್ರೆಸ್ ನಾಯಕರ ಬಳಿ ದಾಖಲೆ ಎಲ್ಲಿದೆ? ಎಂದು ಹೆಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಪಿಎಸ್​ಐ ನೇಮಕ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಸತ್ಯ. ಅಶ್ವತ್ಥ ನಾರಾಯಣ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ದಾಖಲೆ ಎಲ್ಲಿದೆ?. ಬಿಜೆಪಿಯ ಒಬ್ಬ ವಕ್ತಾರ ಕಮಲ್ ಪಂತ್​ ವಿರುದ್ಧ ಚಾಮರಾಜಪೇಟೆಯಲ್ಲಿ ನಡೆದ ಕೊಲೆಯ ವಿಚಾರವಾಗಿ ಆರೋಪ ಮಾಡಿದ್ದರು. ಪೊಲೀಸ್ ಇಲಾಖೆ ಅಪಘಾತ ಎಂದು ಹೇಳಿತ್ತು. ಆದರೆ ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಗಲಾಟೆಯಾಗಿ ಕೊಲೆಯಾಗಿದೆ ಎಂದು ಕಥೆ ಕಟ್ಟಿದ್ದರು. ಅಲ್ಲಿಂದ ಪಿಎಸ್​ಐ ಅಕ್ರಮ ವಿಚಾರ ಬಯಲಾಗಿದೆ ಎಂದರು.

ಬಿಜೆಪಿಯ ವ್ಯಕ್ತಿಯೋರ್ವ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಮೇಲೆ ಆರೋಪ ಮಾಡಿದ್ದರು. ಆ ವ್ಯಕ್ತಿಗೆ ಈಗ ಕಲಬುರಗಿಯಲ್ಲಿ ಅರೆಸ್ಟ್ ಆಗಿರುವವರ ಸಂಪರ್ಕವಿತ್ತು. ಇದು ದೊಡ್ಡ ಕಥೆ ಇದೆ. ಎಲ್ಲರೂ ದುಡ್ಡು ಕೊಟ್ಟು ಪಿಎಸ್​ಐ ಆಗಿದ್ದಾರೆ ಎನ್ನಲು ಆಗಲ್ಲ. ಶೇ. 30ರಷ್ಟು ದುಡ್ಡು ಕೊಟ್ಟು, ಶೇ.30- 40 ರಷ್ಟು ಮಂದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು. ಬಿಜೆಪಿ ನಾಯಕರು ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂತ್​​​​ಗೆ ಅವಮಾನ‌ ಮಾಡಿದ್ದರು. ಅದಕ್ಕಾಗಿ ಅವರ ಅಭಿಮಾನಿಗಳು ಸರ್ಕಾರಕ್ಕೆ ಬುದ್ಧಿ ಕಲಿಸಲು ಅಕ್ರಮವನ್ನು ಹೊರತೆಗೆದಿದ್ದಾರೆ. ಇದು ಸರ್ಕಾರದಿಂದ ಹೊರಬಂದಿಲ್ಲ.

ಅಶ್ವತ್ಥ ನಾರಾಯಣ ವಿರುದ್ಧ ಅವರ ಜೊತೆಯಲ್ಲಿದ್ದವರೇ ಮಾಧ್ಯಮಕ್ಕೆ ಮಾಹಿತಿ ಕೊಟ್ಟಿದ್ದಾರೆ. ಅಮಿತ್ ಶಾ ಆಗಮಿಸುತ್ತಿದ್ದರಿಂದ ಇದನ್ನು ತೆರೆದಿಡಲು ಹಾಗೂ ಅಮಿತ್ ಷಾ ತಲೆಗೆ ಹೋಗಲಿ ಎಂದು ಅಶ್ವತ್ಥ ನಾರಾಯಣ ವಿರುದ್ಧ ಮಾಹಿತಿ ನೀಡಿದ್ದಾರೆ. ಇವರ ವಿಕೆಟ್ ಉರುಳಿಸಲು ಬಿಜೆಪಿಯಲ್ಲಿಯೇ ಕುತಂತ್ರ ನಡೆದಿದೆ. ಬಿಜೆಪಿಯವರು ಅವರ ಮನೆಗೆ ಅವರೇ ಬೆಂಕಿ ಹಚ್ಚಿಕೊಳ್ಳುತ್ತಾರೆ. ನಾವು ಹಚ್ಚಬೇಕಿಲ್ಲ ಎಂದರು.

ಇನ್ನು ಕಾಂಗ್ರೆಸ್​​ನವರಿಗೆ ರಿಯಲ್ ಇಶ್ಯೂ ಮೇಲೆ ಹೋರಾಟ ಮಾಡುವ ಶಕ್ತಿಯಿಲ್ಲ. ಯಾರೋ ಹೇಳಿದ್ದನ್ನು ಹೇಳುತ್ತಾರೆ ಅಷ್ಟೇ. ಕಮಲ್ ಪಂತ್​​ಗೆ ಅವಮಾನ ಮಾಡದಿದ್ದರೆ ಈ ವಿಚಾರ ಬರುತ್ತಿರಲಿಲ್ಲ. ಇಲ್ಲದಿದ್ದರೆ ಇದನ್ನು ಹೂತು ಹಾಕುತ್ತಿದ್ದರು. ಯಾರೇ ಈ ಅಕ್ರಮ ಮಾಡಿದ್ದರೂ ಅವರ ವಿರುದ್ದ ಕ್ರಮವಹಿಸಲಿ ಎಂದು ಹೆಚ್​​ಡಿಕೆ ಆಗ್ರಹಿಸಿದರು.

ಧರ್ಮ ಗುರುಗಳ ನಿಧನಕ್ಕೆ ಸಂತಾಪ: ನಿನ್ನೆ(ಮಂಗಳವಾರ) ಮುಸ್ಲಿಂ ಧರ್ಮಗುರು ಸೈಯದ್ ನಜ್ಮಿ ಮೃತಪಟ್ಟ ವಿಚಾರ ದುರಂತವಾಗಿದೆ. ರಂಜಾನ್ ನಮಾಜ್ ಬಳಿಕ ಕುಟುಂಬ ಸಮೇತರಾಗಿ ಊರಿಗೆ ಹೊರಟಿದ್ದರು. ಅಪಘಾತದಲ್ಲಿ ಧರ್ಮ ಗುರುಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಧರ್ಮ ಗುರು, ಅವರ ಪತ್ನಿ, ಪುತ್ರಿ ಮೃತಪಟ್ಟಿರುವುದು ದಾರುಣ ಘಟನೆಯಾಗಿದೆ. ಊರಿಗೆ ಹೊರಟವರು ಮೃತಪಟ್ಟ ವಿಚಾರ ನೋವಿನ ಸಂಗತಿಯಾಗಿದ್ದು,‌ ಮತ್ತೊಬ್ಬ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಗೆ ಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಮನವಿ ಮಾಡಲಾಗಿದೆ.

ಚುಂಚನಗಿರಿ ಶ್ರೀಗಳ ಜತೆಗೆ ಈಗಾಗಲೇ ಮಾತನಾಡಿದ್ದೇನೆ. ಶ್ರೀಗಳು ವೈಯಕ್ತಿಕವಾಗಿ ನೋಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಯಾವುದೇ ರೀತಿಯ ಚಿಕಿತ್ಸಾ ವೆಚ್ಚವನ್ನು ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ. ಸೈಯದ್ ನಜ್ಮಿ ಧಾರ್ಮಿಕ ಕೆಲಸದ ಮೂಲಕ ಅವರ ಸಮುದಾಯದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೆಚ್‌ಡಿಕೆ ಸಂತಾಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಿಎಸ್ಐ ಅಕ್ರಮದಲ್ಲಿ ಅಶ್ವತ್ಥ್​ ನಾರಾಯಣ ಸಹೋದರ ಭಾಗಿ ಆರೋಪ : ಸಚಿವರ ರಾಜೀನಾಮೆಗೆ ಉಗ್ರಪ್ಪ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.