ETV Bharat / state

ಪಿಡಿಒ ಕಮಿಷನ್​ ಕೇಳಿರುವ ಆರೋಪ: ಕ್ರಮಕ್ಕೆ ರೈತ ಸಂಘ ಒತ್ತಾಯ

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಮಗಾರಿ ಬಿಲ್​ಗೆ ಕಮಿಷನ್ ಕೇಳಿರುವ ಆಡಿಯೋ ವೈರಲ್ ಆಗಿದೆ ಎನ್ನಲಾಗ್ತಿದೆ. ಕಾಮಗಾರಿ ನಡೆಸಿರುವ ವ್ಯಕ್ತಿಯಿಂದ ಶೇ 20ರಷ್ಟು ಕಮಿಷನ್ ಕೇಳಿರುವ ಆಡಿಯೋ ಇದು ಎಂದು ಹೇಳಲಾಗ್ತಿದೆ. ಪಿಡಿಒ ಈ ನಡೆಯನ್ನು ಖಂಡಿಸಿರುವ ರೈತ ಸಂಘ ಕ್ರಮಕ್ಕೆ ಆಗ್ರಹಿಸಿದೆ.

PDO Audio viral asked for the Commission
ಕ್ರಮಕ್ಕೆ ರೈತ ಸಂಘ ಒತ್ತಾಯ
author img

By

Published : Oct 14, 2022, 7:16 PM IST

Updated : Oct 14, 2022, 7:35 PM IST

ರಾಮನಗರ: ಚನ್ನಪಟ್ಟಣ ತಾಲೂಕಿನ ಬಿವಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಮಗಾರಿ ಬಿಲ್​ಗೆ ಕಮಿಷನ್ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ಆಡಿಯೋ ವೈರಲ್ ಆಗಿದೆ.

ಕಮಿಷನ್​ ಕೇಳಿರುವ ಆಡಿಯೋ ವೈರಲ್​​: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ವಿರುದ್ಧ ಅಕ್ರಮದ ಆರೋಪ ಕೇಳಿ ಬಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಕಾಮಗಾರಿ ನಡೆಸಿರುವ ವ್ಯಕ್ತಿಯಿಂದ ಶೇ 20ರಷ್ಟು ಕಮಿಷನ್ ಕೇಳಿರುವ ಆಡಿಯೋ ಈಗ ವೈರಲ್ ಆಗಿದೆ. ವ್ಯಕ್ತಿ ಒಬ್ಬರೊಂದಿಗೆ ಸಂಭಾಷಣೆ ನಡೆಸುವ ಪಿಡಿಒ ಶೋಭಾ ನೀವು ಮಾಡಿರುವ ಕೆಲಸದ ಗುಣಮಟ್ಟಕ್ಕೆ ದೂರು ನೀಡಲಾಗಿದ್ದು, ಈ ಕಾಮಗಾರಿಗೆ ದುಡ್ಡು ಕೊಡುವ ಹಾಗಿಲ್ಲ. ಆದರೂ ನಾನು ಬಿಲ್ ಪಾಸ್ ಮಾಡಿದ್ದೇನೆ. ನನಗೆ ಎರಡೇ ಪರ್ಸೆಂಟ್ ಸಾಕು ಎನ್ನುವ ಆಡಿಯೋ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಕ್ಕೆ ಪುಷ್ಠಿ ನೀಡುವಂತಿದೆ.

ಪಿಡಿಒ ಕಮಿಷನ್​ ಕೇಳಿರುವ ಆರೋಪ, ಕ್ರಮಕ್ಕೆ ಒತ್ತಾಯ

ಅಕ್ರಮ ನಡೆದಿರುವ ಶಂಕೆ: ವ್ಯಕ್ತಿ ಒಬ್ಬರು ಕಾಮಗಾರಿ ಬಿಲ್ ಕೇಳಿದ್ದಕ್ಕೆ ಬಿವಿ ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶೋಭಾ ಕಾಮಗಾರಿ ಬಿಲ್​ ನಲ್ಲಿ 20 ಪರ್ಸೆಂಟ್ ನೀಡಬೇಕು. ಕಮಿಷನ್ ಹಣದಲ್ಲಿ ಇಂಜಿನಿಯರ್, ಇಒ, ಡಿಎಸ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೂ ಹಣ ನೀಡಬೇಕು ಎಂದು ಹೇಳುವ ಆಡಿಯೋ ವೈರಲ್ ಆಗಿದೆ. ಹಿರಿಯ ಅಧಿಕಾರಿಗಳು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಮೂಡಿದೆ. ಕಮಿಷನ್ ಕೇಳುವ ಆಡಿಯೋ ವೈರಲ್ ಆಗಿರುವುದರಿಂದ ಬಿವಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ಕ್ರಮಕ್ಕೆ ಆಗ್ರಹಿಸಿದ ರೈತ ಸಂಘ: ಚನ್ನಪಟ್ಟಣ ತಾಲೂಕಿನ ಬಿವಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ, ಅಕ್ರಮ ನಡೆದಿರುವ ಬಗ್ಗೆ ಪಿಡಿಒ ಕಮಿಷನ್ ಕೇಳುವ ಆಡಿಯೋ ವೈರಲ್ ಆಗಿದೆ. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಸುಜೀವನ್ ಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಪಿಡಿಒಗಳ ದರ್ಪ ದೌಲತ್ತಿನ ವಿಚಾರ..

ಬಿವಿ ಹಳ್ಳಿ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ಲೂಟಿಯಾಗಿದೆ. ಗ್ರಾಮದ ಅಭಿವೃದ್ಧಿ ಮಾಡಬೇಕಾದ ಕಾಮಗಾರಿಗಳಲ್ಲಿ ಕಮಿಷನ್ ತಾಂಡವವಾಡುತ್ತಿದೆ. ಇಂತಿಷ್ಟು ಹಣಕ್ಕೆ ಇಷ್ಟು ಕಮಿಷನ್ ಎಂದು ಫಿಕ್ಸ್ ಮಾಡಿರುವ ಪಿಡಿಒ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಮುಖಂಡ ಸುಜೀವನ್ ಕುಮಾರ್ ಆಗ್ರಹಿಸಿದ್ದಾರೆ.

Last Updated : Oct 14, 2022, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.