ETV Bharat / state

ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ರಾಶಿಗಟ್ಟಲೆ ಮದ್ಯದ ಪ್ಯಾಕೆಟ್​... ವಿದ್ಯಾರ್ಥಿನಿಗಳಿಗೆ ಮುಜುಗರ!

ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ರಾಶಿಗಟ್ಟಲೆ ಮದ್ಯದ ಪ್ಯಾಕೆಟ್ ಸುರಿಯಲಾಗಿದ್ದು, ಕಾಲೇಜಿನ ಸಿಬ್ಬಂದಿ ಪೊಲೀಸರಿಗೆ ದೂರು ಕೊಟ್ಟದ್ದಾರೆ. ಆದ್ರೂ ಸಹ ಕಸ ಸುರಿಯುವುದು ತಪ್ಪಿಲ್ಲವೆಂದು ಉಪನ್ಯಾಸಕರು ತಿಳಿಸಿದ್ದಾರೆ.

Government Women's Polytechnic College
ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ರಾಶಿಗಟ್ಟಲೆ ಮದ್ಯದ ಪ್ಯಾಕೆಟ್​..!
author img

By

Published : Feb 7, 2020, 6:11 AM IST

ರಾಮನಗರ: ನಗರದ ಐಜೂರು ವೃತ್ತದ ಬಳಿ ಇರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ರಾಶಿಗಟ್ಟಲೆ ಮದ್ಯದ ಪ್ಯಾಕೆಟ್ ಸುರಿಯಲಾಗಿದ್ದು, ವಿದ್ಯಾರ್ಥಿನಿಗಳು ಸೇರಿದಂತೆ ಕಾಲೇಜ್​ ಸಿಬ್ಬಂದಿ ಮುಜುಗರಕ್ಕೊಳಗಾಗಿದ್ದಾರೆ.

ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ರಾಶಿಗಟ್ಟಲೆ ಮದ್ಯದ ಪ್ಯಾಕೆಟ್​..!

ಇನ್ನು ಕಾಲೇಜಿನ ಸಿಬ್ಬಂದಿ ಪೊಲೀಸರಿಗೆ ದೂರು ಕೊಟ್ಟರೂ ಕಸ ಸುರಿಯುವುದು ತಪ್ಪಿಲ್ಲವಂತೆ. ಕಾಲೇಜು ಸಮೀಪದಲ್ಲಿಯೇ ಮದ್ಯದ ಅಂಗಡಿಗಳ ಹೆಚ್ಚಾಗಿದ್ದು, ಬಾಗಿಲು ಹಾಕಿದ ಬಳಿಕ ನೌಕರರು ರಾಶಿಗಟ್ಟಲೆ ಟೆಟ್ರಾ ಪ್ಯಾಕ್‌ಗಳನ್ನು ತಂದು ಕಾಲೇಜಿನ ಕಾಂಪೌಂಡಿನ ಒಳಗಿನ ಶೌಚಾಲಯದ‌ ಬಳಿಯೇ ಸುರಿದಿದ್ದಾರೆ. ಇದರೊಟ್ಟಿಗೆ ಸಾಕಷ್ಟು ಪ್ಲಾಸ್ಟಿಕ್‌ ಲೋಟಗಳು, ಇತರೆ ಕಸದ ರಾಶಿ ಬಿದ್ದಿದೆ.

ಪಾಲಿಟೆಕ್ನಿಕ್‌ ಕಾಲೇಜ್​ಗೆ ಜಿಲ್ಲೆಯ ವಿವಿಧ ಭಾಗಗಳಿಂದ ನಿತ್ಯ ನೂರಾರು ವಿದ್ಯಾರ್ಥಿನಿಯರು ಬರುತ್ತಾರೆ. ಅವರೆಲ್ಲ ಮುಜುಗರದಿಂದಲೇ ಓಡಾಡುವಂತಹ ಪರಿಸ್ಥಿತಿ ಇದೆ. ಈ ಸಂಬಂಧ ಈಗಾಗಲೇ ಪೊಲೀಸರಿಗೆ ದೂರು ಸಲ್ಲಿಸಿದ್ದು, ಕ್ರಮಕ್ಕೆ ಕೋರಿದ್ದೇವೆ. ಆದರೂ ಕಸ ಸುರಿಯುವುದು ನಿಂತಿಲ್ಲ ಎನ್ನುತ್ತಾರೆ ಕಾಲೇಜಿನ ಸಿಬ್ಬಂದಿ.

ಕಸ ಸುರಿಯುವುದನ್ನು ಪ್ರಶ್ನಿಸುವವರ ಮೇಲೆ ಬಾರ್‌ನ ಸಿಬ್ಬಂದಿ ರೇಗುತ್ತ ಹಲ್ಲೆಗೆ ಮುಂದಾಗುವುದಾಗಿ ಸ್ಥಳೀಯ ವರ್ತಕರು ದೂರುತ್ತಾರೆ. ದೇವಾಲಯಕ್ಕೆ ಸಮನಾದ ಕಾಲೇಜಿನ ಅಂಗಳದಲ್ಲಿ ಮದ್ಯದ ಪ್ಯಾಕೆಟ್‌ ಸುರಿಯುವುದು ನಿಲ್ಲಬೇಕು. ಈ ಬಗ್ಗೆ ನಗರಸಭೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

Intro:Body:ರಾಮನಗರ: ನಗರದ ಐಜೂರು ವೃತ್ತದ ಬಳಿ ಇರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ರಾಶಿಗಟ್ಟಲೆ ಮದ್ಯದ ಪ್ಯಾಕೆಟ್ ಸುರಿಯಲಾಗಿದೆ. ಇದರಿಂದಾಗಿ‌ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರಿಕಿರಿ ಉಂಅಗಿದ್ದಲ್ಲದೆ ಮುಜುಗರಕ್ಕೀಡಾಗಿದ್ದಾರೆ. ಕಾಲೇಜಿನ ಸಿಬ್ಬಂದಿ ಪೊಲೀಸರಿಗೆ ದೂರು ಕೊಟ್ಟರೂ ಕಸ ಸುರಿಯುವುದು ತಪ್ಪಿಲ್ಲವಂತೆ.
ಕಾಲೇಜು ಸಮೀಪದಲ್ಲಿಯೇ ಮದ್ಯದ ಅಂಗಡಿಗಳ ಹೆಚ್ಚಾಗುದ್ದು ಬಾಗಿಲು ಹಾಕಿದ ಬಳಿಕ ನೌಕರರು ರಾಶಿಗಟ್ಟಲೆ ಟೆಟ್ರಾ ಪ್ಯಾಕ್‌ಗಳನ್ನು ತಂದು ಕಾಲೇಜಿನ ಕಾಂಪೌಂಡಿನ ಒಳಗೆ ಶೌಚಾಲಯದ‌ ಬಳಿಯೇ ಸುರಿದಿದ್ದಾರೆ. ಇದರೊಟ್ಟಿಗೆ ಸಾಕಷ್ಟು ಪ್ಲಾಸ್ಟಿಕ್‌ ಲೋಟಗಳು, ಇತರೆ ಕಸದ ರಾಶಿ ಬಿದ್ದಿದೆ. ಇದೆಲ್ಲ ಗಾಳಿಗೆ ತೂರುತ್ತ ಕಾಲೇಜಿನ ಅಂಗಳದಲ್ಲಿ ಬಿದ್ದಿದೆ.
ಪಾಲಿಟೆಕ್ನಿಕ್‌ಗೆ ಜಿಲ್ಲೆಯ ವಿವಿಧ ಭಾಗಗಳಿಂದ ನಿತ್ಯ ನೂರಾರು ವಿದ್ಯಾರ್ಥಿನಿಯರು ಬರುತ್ತಾರೆ. ಅವರೆಲ್ಲ ಮುಜುಗರದಿಂದಲೇ ಓಡಾಡುವಂತಹ ಪರಿಸ್ಥಿತಿ ಇದೆ. ಈ ಸಂಬಂಧ ಈಗಾಗಲೇ ಪೊಲೀಸರಿಗೆ ದೂರು ಸಲ್ಲಿಸಿದ್ದೂ, ಕ್ರಮಕ್ಕೆ ಕೋರಿದ್ದೇವೆ. ಆದರೂ ಕಸ ಸುರಿಯುವುದು ನಿಂತಿಲ್ಲ ಎನ್ನುತ್ತಾರೆ ಕಾಲೇಜಿನ ಸಿಬ್ಬಂದಿ.

ಕಾಲೇಜಿನ ಒಳಗೆ ಕಸ ಸುರಿಯುವುದನ್ನು ತಪ್ಪಿಸಲು ಇಲ್ಲಿನ ಸಿಬ್ಬಂದಿ ಕಾಂಪೌಂಡ್‌ ಅನ್ನು ಎತ್ತರಿಸಿದ್ದಾರೆ. ಆದಾಗ್ಯೂ ಕಸದ ರಾಶಿ ಬರುತ್ತಲೇ ಇದೆ. ಪ್ರಶ್ನಿಸುವವರ ಮೇಲೆ ಬಾರ್‌ನ ಸಿಬ್ಬಂದಿ ರೇಗುತ್ತ ಹಲ್ಲೆಗೆ ಮುಂದಾಗುವುದಾಗಿ ಸ್ಥಳೀಯ ವರ್ತಕರು ದೂರುತ್ತಾರೆ.
ದೇವಾಲಯಕ್ಕೆ ಸಮನಾದ ಕಾಲೇಜಿನ ಅಂಗಳದಲ್ಲಿ ಮದ್ಯದ ಪ್ಯಾಕೆಟ್‌ ಸುರಿಯುವುದು ನಿಲ್ಲಬೇಕು. ಈ ಬಗ್ಗೆ ನಗರಸಭೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.