ರಾಮನಗರ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಸಂಸದ ಡಿ.ಕೆ ಸುರೇಶ್ ಎಸ್.ಪಿಗೆ ವಾರ್ನ್ ಮಾಡಿದ್ದಾರೆ.
ಸಭೆಯಲ್ಲಿ ಎಸ್ಪಿ ಇಲ್ಲದಿದ್ದನ್ನ ಗಮನಿಸಿದ ಸುರೇಶ್ ಸಭೆಯಲ್ಲಿದ್ದ ರಾಮನಗರ ಟೌನ್ ಪಿಎಸ್ಐ ಹೇಮಂತ್ ಕುಮಾರ್ನ್ನು ಕರೆಸಿ ಎಲ್ಲಿ ನಿಮ್ಮ ಎಸ್ಪಿ, ಸಭೆಗೆ ಯಾಕೆ ಬಂದಿಲ್ಲ ಎಂದು ಕೇಳಿದ್ರು. ಈ ವೇಳೆ ಹೇಮಂತ್ ಯಶವಂತಪುರ ಎಲೆಕ್ಷನ್ ಡ್ಯೂಟಿಗೆ ಹೋಗಿರುವುದಾಗಿ ತಿಳಿಸಿದ್ದರು.
ಈ ವೇಳೆ ಗರಂ ಆಗಿಯೇ ಉತ್ತರಿಸಿದ ಸುರೇಶ್ ಇದು ರಾಮನಗರ ಜಿಲ್ಲೆ. ಬೇರೆಲ್ಲ ಮಾತನಾಡೋಕೆ ಆಗುತ್ತೆ. ಸಭೆಗೆ ಬರಕಾಗಲ್ವ, ಎಲೆಕ್ಷನ್ ಡ್ಯೂಟಿ ಬೇಕಿದ್ರೆ ಮಾಡ್ಲಿ. ಮೊದಲು ಜಿಲ್ಲಾ ಸಭೆಗೆ ಬರಬೇಕು. ಪೊಲೀಸ್ ಇಲಾಖೆಯಲ್ಲಿದ್ದಾರೆ ಮೊದಲು ಡಿಸಿಪ್ಲೀನ್ ಕಲಿತುಕೊಳ್ಳಬೇಕು ಅಂತೇಳು. ನಾನು ಹೇಳ್ದೇ ಅಂತಾನೆ ಹೇಳು ಗೊತ್ತಾಯ್ತಾ ಎಂದು ಡಿ.ಕೆ.ಸುರೇಶ್ ಫುಲ್ ಗರಂ ಆಗಿಯೇ ಎಚ್ಚರಿಸಿದ್ದಾರೆ. ಇತ್ತ ಸಂಸದ ಡಿ.ಕೆ.ಸುರೇಶ್ ಅವಾಜ್ ಗೆ ಪಿಎಸ್ಐ ಹೇಮಂತ್ ಬೆದರಿ ಹೋಗಿದ್ದನ್ನು ಎಲ್ಲರೂ ಗಮನಿಸುತ್ತಿದ್ದರು.