ರಾಮನಗರ : ಮಾಜಿ ಸಿಎಂ ಸಿದ್ದರಾಮಯ್ಯ ನಿದ್ದೆರಾಮಯ್ಯ ಎಂಬ ಬಿರುದು ಪಡೆದವರು. ಸಿದ್ದರಾಮಯ್ಯ ರಾಜಕೀಯ ಬಿಟ್ಟು ಸನ್ಯಾಸತ್ವ ಸ್ವೀಕರಿಸಲಿ ಎಂದು ಆಸ್ಎಸ್ಎಸ್ ನಾಯಕರ ಬಗ್ಗೆ ಹೇಳಿಕೆ ಕೊಟ್ರೆ ಬಿಜೆಪಿ ನಾಯಕರು ಉತ್ತರ ನೀಡ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯ ವಿರುದ್ದ ಸಚಿವ ಅಶ್ವತ್ಥ್ ನಾರಾಯಣ್ ವಾಗ್ಧಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಸಂಬದ್ದವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಓಲೈಕೆ ರಾಜಕೀಯ ಮಾಡ್ತಿದ್ದಾರೆ. ನಾನು ಆರ್ಎಸ್ಎಸ್ನಿಂದ ಬಂದವನೇ, ಬಿಜಿಪಿ ಪಕ್ಷದಲ್ಲಿ ಇದ್ದೇನೆ.
ಆರ್ಎಸ್ಎಸ್ನಲ್ಲಿ ಎಲ್ಲಾ ಜಾತಿಯವರು ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತ ನೋಡಿದ್ದೇವೆ. ಅವರ ವಾಚ್, ಶೂ, ಕನ್ನಡಕದ ಬಗ್ಗೆ ಅಕೌಂಟೆಬಿಲಿಟಿ ಇದ್ಯಾ..? 5 ವರ್ಷ ನಿದ್ದೆ ಮಾಡಿ ನಿದ್ದರಾಮಯ್ಯ ಆಗಿದ್ದಾರೆ ಎಂದರು.
ಇನ್ನು ಸಿದ್ದರಾಮಯ್ಯ ಆಡಳಿತದಲ್ಲಿ ಎಷ್ಟು ಅಕ್ರಮಗಳು ನಡೆದಿವೆ. ಮರಳು ದಂಧೆ, ಅರ್ಕಾವತಿ ಬಡಾವಣೆ, ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಸೇರಿದಂತೆ ಎಲ್ಲಾ ಕಡೆ ಹಗರಣಗಳೇ ಇವೆ. ಕಡುಬಡತನದಿಂದ ಬಂದ ಅವರು ಪ್ರಾಮಾಣಿಕ, ದಕ್ಷತೆ ಬಿಟ್ಟು ಭ್ರಷ್ಟಾಚಾರದ ಕೂಪವನ್ನೇ ಮಾಡಿದ್ದಾರೆ.
ಸಿಎಂ ಆಗಿ ಅಧಿಕಾರ ಅನುಭವಿಸಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಸಿದ್ದರಾಮಯ್ಯ ರಾಜಕೀಯ ರುಚಿ ನೋಡಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಬಿಟ್ಟು ಸನ್ಯಾಸತ್ವ ಸ್ವೀಕರಿಸಬೇಕು ಎಂದು ಇದೇ ವೇಳೆ ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದರು.
ಇದನ್ನೂ ಓದಿ: ನನ್ನ ಪ್ರಶ್ನೆಗೆ ಉತ್ತರಿಸಲಾಗದ ಆರ್ಎಸ್ಎಸ್ ಬಿಜೆಪಿಗರನ್ನು ಛೂ ಬಿಟ್ಟಿದೆ: ಸಿದ್ದರಾಮಯ್ಯ