ETV Bharat / state

ಕೊರೊನಾ ವಾರಿಯರ್ಸ್​​ ಬೆನ್ನಿಗೆ ನಿಂತ ಕನಕಾಂಬರಿ ಮಹಿಳಾ ಒಕ್ಕೂಟ..

ಈ ಒಕ್ಕೂಟದ ಅಡಿಯಲ್ಲಿ 100ಕ್ಕೂ ಹೆಚ್ಚು ಗ್ರಾಮೀಣ ಭಾಗದ ಮಹಿಳೆಯರು ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿ ಮಾಸ್ಕ್‌ ತಯಾರಿಗೆ 3ರೂ. ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ.

ಮಹಿಳಾ ಒಕ್ಕೂಟ
ಮಹಿಳಾ ಒಕ್ಕೂಟ
author img

By

Published : May 2, 2020, 4:37 PM IST

ರಾಮನಗರ : ಕೊರೊನಾ ವೈರಸ್ ವಿರುದ್ಧ ಜೀವವನ್ನು ಪಣಕ್ಕಿಟ್ಟು ದುಡಿಯುತ್ತಿರುವ ಸಾವಿರಾರು ಕೊರೊನಾ ವಾರಿಯರ್ಸ್‌ಗಳಿಗಾಗಿ 1ಲಕ್ಷಕ್ಕೂ ಅಧಿಕ ಮಾಸ್ಕ್​ಗಳನ್ನು ತಯಾರಿಸಿ, ಉಚಿತವಾಗಿ ವಿತರಿಸುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕನಕಾಂಬರಿ ಮಹಿಳಾ ಒಕ್ಕೂಟ ಕೈ ಜೋಡಿಸಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕನಕಾಂಬರಿ ಮಹಿಳಾ ಒಕ್ಕೂಟ, ಕೋವಿಡ್-19 ರೋಗವನ್ನು ತಡೆಗಟ್ಟಲು ಬೇಕಿರುವ ಮಾಸ್ಕ್​ಗಳನ್ನು ತಯಾರಿಸುತ್ತಿದೆ. ಈ ಒಕ್ಕೂಟದ ಅಡಿಯಲ್ಲಿ 100ಕ್ಕೂ ಹೆಚ್ಚು ಗ್ರಾಮೀಣ ಭಾಗದ ಮಹಿಳೆಯರು ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿ ಮಾಸ್ಕ್‌ ತಯಾರಿಗೆ 3ರೂ. ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ.

ಕೊರೊನಾ ವಾರಿಯರ್ಸ್‌ಗಾಗಿ ಮಾಸ್ಕ್ ತಯಾರಿಕೆ..

ಹೀಗೆ ಮನೆಗಳಲ್ಲಿ ತಯಾರಾದ 1 ಲಕ್ಷಕ್ಕೂ ಅಧಿಕ ಮಾಸ್ಕ್​ಗಳನ್ನು ಸಂಗ್ರಹಿಸಿದ ಕನಕಾಂಬರಿ ಮಹಿಳಾ ಒಕ್ಕೂಟ, ಜಿಲ್ಲಾಡಳಿತಕ್ಕೆ ನೀಡುತ್ತಿದೆ. ಅಲ್ಲದೆ ತನ್ನ ಒಕ್ಕೂಟದ ಸದಸ್ಯರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್‌ ಸಿಬ್ಬಂದಿಗೆ ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.